ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್‌ ಆಫ್‌ ಸೇಂಟ್‌ ಆಂಡ್ರ್ಯೂ ದ ಅಪ್ಲೋಸ್' ಪ್ರದಾನ ಮಾಡುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಭಾರತ ಮತ್ತು ರಷ್ಯಾ ನಡುವೆ ವಿಶೇಷ ಸವಲತ್ತುಗಳನ್ನು ಉತ್ತೇಜಿಸುವಲ್ಲಿ ಮತ್ತು ಕಾರ್ಯತಂತ್ರದ ಪಾಲುದಾರಿಕೆ ಯಶಸ್ವಿಯಾಗಲು ಮಾಡಿದ ಅಸಾಧಾರಣ ಸೇವೆಯನ್ನು ಪರಿಗಣಿಸಿ  ಗೌರವಾರ್ಥವಾಗಿ ರಷ್ಯಾದ ಪ್ರತಿಷ್ಟಿತ ನಾಗರಿಕ ಸೇವಾ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿಗೆ ನೀಡಲಾಗಿದೆ ಎಂಬ ವಿಷಯವನ್ನು ಮಾಸ್ಕೋದಲ್ಲಿರುವ ಭಾರತೀಯ ದೂತಾವಾಸದ ಅಧಿಕೃತ ಟ್ವಿಟರ್ ಹ್ಯಾಂಡಲ್‌ 'ಇಂಡಿಯಾ ಇನ್ ರಷ್ಯಾ' ಪ್ರಕಟಿಸಿದೆ. 



ರಷ್ಯನ್ ಸಾಮ್ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್‌ ಆಫ್‌ ಸೇಂಟ್‌ ಆಂಡ್ರ್ಯೂ ದ ಅಪ್ಲೋಸ್' ಅನ್ನು 1698ರಲ್ಲಿ ಸ್ಥಾಪಿಸಲಾಗಿತ್ತು. ಆದರೆ ಸೋವಿಯತ್ ಆಡಳಿತದ ಸಂದರ್ಭದಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ಬಳಿಕ 1998ರಲ್ಲಿ ಈ ಪ್ರಶಸ್ತಿಯನ್ನು ಮರುಸ್ಥಾಪಿಸಲಾಯಿತು.


ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್(UAE)ನ  ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಝಾಯೆದ್ ಮೆಡಲ್ ನೀಡಿ ಗೌರವಿಸಲಾಗಿತ್ತು. ಭಾರತ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಮೋದಿ ಪ್ರಮುಖ ಪಾತ್ರ ವಹಿಸಿದ್ದರ ಗೌರವಾರ್ಥವಾಗಿ ದೇಶದ ಅತ್ಯುನ್ನತ ಪ್ರಶಸ್ತಿ ನೀಡಿರುವುದಾಗಿ ಯುಎಇ ಸರ್ಕಾರ ತಿಳಿಸಿತ್ತು.