ನವದೆಹಲಿ: 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಇಡೀ ಜಗತ್ತೇ ಅವರ ಬಗ್ಗೆ ಮಾತನಾಡುತ್ತಿದೆ. ಅವರ ವಿದೇಶಿ ಭೇಟಿಗಳು ಆಗಾಗ ಚರ್ಚೆಯ ವಿಷಯವಾಗುತ್ತದೆ. ಅವರ ವಿದೇಶಿ ಭೇಟಿಗಳ ಬಗ್ಗೆ ವಿಪಕ್ಷಗಳು ಟೀಕಿಸುತ್ತಿದ್ದು, ಇದರಿಂದ ದೇಶದ ಬೊಕ್ಕಸಕ್ಕೆ ದೊಡ್ಡ ಮಟ್ಟದ ಆರ್ಥಿಕ ಹೊರೆಯಾಗುತ್ತಿದೆ ಎಂದು ಆರೋಪಿಸುತ್ತಿವೆ. ಆದರೆ, ಪ್ರಧಾನಿಯಂತಹ ಉನ್ನತ ಹುದ್ದೆಗೇರಿದ 2014ರ ಮೇ 26ರಿಂದ ಇಲ್ಲಿವರೆಗೆ ಪ್ರಧಾನಿ ಮೋದಿ ತಮ್ಮ ವೈದ್ಯಕೀಯ ವೆಚ್ಚವನ್ನು ಸ್ವತಃ ತಾವೇ ಭರಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಇದು ಅಚ್ಚರಿಯಾದರೂ ನಿಜ. ಪುಣೆ ಮೂಲದ ಆರ್‌ಟಿಐ ಕಾರ್ಯಕರ್ತ ಪ್ರಫುಲ್ ಸರ್ದಾ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಪ್ರಧಾನಿ ಕಾರ್ಯಾಲಯ ನೀಡಿದ ಉತ್ತರದಲ್ಲಿ ಈ ವಿಷಯ ಬಹಿರಂಗವಾಗಿದೆ. ಇದಕ್ಕಾಗಿ ಪ್ರಧಾನಮಂತ್ರಿ ಕಾರ್ಯಾಲಯ(ಪಿಎಂಒ) ದಿಂದ ಬಿಡಿಗಾಸು ಪಡೆದಿಲ್ಲವೆಂಬ ಅಂಶವು ಆರ್‌ಟಿಐ ಮಾಹಿತಿಯಿಂದ ಬಹಿರಂಗವಾಗಿದೆ. ಪ್ರಫ‌ುಲ್‌ ಸರ್ದಾರ್‌ ಆರ್‌ಟಿಐನಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರ ನೀಡಿರುವ ಪ್ರಧಾನಮಂತ್ರಿ ಕಾರ್ಯಾಲಯ, ‘2014ರಿಂದ ಇಲ್ಲಿಯವರೆಗೆ ಪ್ರಧಾನಿ ಮೋದಿಯವರಿಗಾಗಿ ಯಾವುದೇ ರೀತಿಯ ವೆಚ್ಚವನ್ನು ಭರಿಸಿಲ್ಲ’ವೆಂದು ಅಧಿಕೃತ ಮಾಹಿತಿ ನೀಡಿದೆ.


ಇದನ್ನೂ ಓದಿ: Python Video : ಐಷಾರಾಮಿ ಹೋಟೆಲ್‌ನಲ್ಲಿ ಹುಡುಗಿಯರ ಜೊತೆ ಹೆಬ್ಬಾವಿನ ಡಿನ್ನರ್‌ ಪಾರ್ಟಿ


ಪ್ರಧಾನಿ ಮೋದಿಯವರು ತಮ್ಮ ವೈದ್ಯಕೀಯ ಬಿಲ್‌ ಪಾವತಿಸಲು ಯಾವುದೇ ರೀತಿಯ ಸರ್ಕಾರದ ತೆರಿಗೆ ಹಣವನ್ನು ಬಳಸಿಲ್ಲ. ಬದಲಾಗಿ ಅವರೇ ಸ್ವತಃ ತಮ್ಮ ಬಿಲ್‍ಗಳನ್ನು ಪಾವತಿಸಿದ್ದಾರೆ. ವಿಶೇಷವೆಂದರೆ ಸಂಸತ್ತಿನ ಸದಸ್ಯರು ಮತ್ತು ಮಂತ್ರಿಗಳಿಗೆ ವೈದ್ಯಕೀಯ ವ್ಯವಸ್ಥೆ ಸೇರಿ ಹಲವಾರು ಸೌಲಭ್ಯ ಮತ್ತು ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೆ ಪ್ರಧಾನಿ ಮೋದಿಯವರು ಇಂತಹ ಯಾವುದೇ ರೀತಿಯ ಸೌಲಭ್ಯಗಳನ್ನು ಬಳಸಿಲ್ಲವೆಂದ ತಿಳಿದುಬಂದಿದೆ.


ತಮ್ಮ ಎಲ್ಲಾ ವೆಚ್ಚಗಳನ್ನು ಪ್ರಧಾನಿ ಮೋದಿಯವರು ಸ್ವತಃ ತಮ್ಮ ಕೈಯಿಂದಲೇ ಭರಿಸಿದ್ದಾರೆಂದು ಪಿಎಂಒ ಮಾಹಿತಿ ನೀಡಿದೆ. ಈ ಬಗ್ಗೆ ಮಾತನಾಡಿರುವ ಆರ್‍ಟಿಐ ಕಾರ್ಯಕರ್ತ ಪ್ರಫುಲ್ ಸರ್ದಾ, ‘ಪಿಎಂ ಮೋದಿಯವರು ಫಿಟ್ ಇಂಡಿಯಾ ಆಂದೋಲನದ ಮೂಲಕ ದೇಶದ ಜನರಿಗೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಈ ಮೂಲಕ 135 ಕೋಟಿ ಭಾರತೀಯರನ್ನು ಫಿಟ್ ಆಗಿರಲು ಪ್ರೇರೇಪಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: Trending Video : ಅರೆ.. ಸೀರೆಯುಟ್ಟು ಜಿಮ್‌ನಲ್ಲಿ ವರ್ಕೌಟ್‌! ಹೇ ನಾರಿ ನಿನಗ್ಯಾರೇ ಸಾಟಿ?


‘ತೆರಿಗೆದಾರರ ಹಣವನ್ನು ಪ್ರಧಾನಿ ಮೋದಿ ಯಾವುದೇ ವೈಯಕ್ತಿಕ ಕೆಲಸಗಳಿಗೆ ಬಳಸುತ್ತಿಲ್ಲ. ಇದು ಆಡಳಿತದಲ್ಲಿ ನಮ್ಮ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಂಸದರು ಮತ್ತು ಶಾಸಕರು ತಮ್ಮ ವೈಯಕ್ತಿಕ ಚಿಕಿತ್ಸಾ ವೆಚ್ಚವನ್ನು ಯಾವುದಾದರೂ ಇದ್ದರೆ ತಾವೇ ಭರಿಸುವ ಮೂಲಕ ಅದೇ ಮಾರ್ಗವನ್ನು ಅನುಸರಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.