ನವದೆಹಲಿ: ಜನವರಿ 1, 2024 ರೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಸಿದ್ಧವಾಗಲಿದೆ ಎಂದು ಘೋಷಿಸಿದ್ದಕ್ಕಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಭಾನುವಾರ (ಜನವರಿ 8, 2023) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಬಿಜೆಪಿ ಸಂಸದ ಮನವಿ
"ಈ ವಿಷಯವು (ರಾಮ ಮಂದಿರ ತೆರೆಯುವ ದಿನಾಂಕ) ಕೇಂದ್ರ ಗೃಹ ಸಚಿವರಿಗೆ ಸಂಬಂಧಿಸಿದೆ ಎಂದು ನನಗೆ ಖಚಿತವಿಲ್ಲ.ರಾಮಮಂದಿರದ ಪೂಜಾರಿ ಇದನ್ನು ಹೇಳಿದ್ದರೆ ಅದು ಉತ್ತಮವಾಗಿರುತ್ತಿತ್ತು, ಆದರೆ ಅಮಿತ್ ಶಾ ಪೂಜಾರಿ ಜವಾಬ್ದಾರಿ ಕೈಗೆತ್ತಿಕೊಂಡರೆ ಯಾವುದೇ ಅಭ್ಯಂತರವಿಲ್ಲ’ ಎಂದು ಪವಾರ್ ವ್ಯಂಗವಾಡಿದರು.ನಿಜವಾದ ಸಮಸ್ಯೆಗಳನ್ನು ಬೇರೆಡೆಗೆ ತಿರುಗಿಸಲು ರಾಮಮಂದಿರದಂತಹ ವಿಷಯಗಳನ್ನು ಎತ್ತಲಾಗುತ್ತಿದೆ ಎಂದು ಪವಾರ್ ಹೇಳಿದರು.
ಇದನ್ನೂ ಓದಿ: "ಬಾಕಿ ಸಾಲ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಮನ್ನಾಮಾಡ್ತಿನಿ"
ಕಳೆದ ವಾರದ ಆರಂಭದಲ್ಲಿ, ತ್ರಿಪುರಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ಲೋಕಸಭೆ ಚುನಾವಣೆ ನಡೆಯುವ ಮುಂದಿನ ಜನವರಿಯೊಳಗೆ ರಾಮಮಂದಿರ ಸಿದ್ಧವಾಗಲಿದೆ ಎಂದು ಹೇಳಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.