ನವದೆಹಲಿ: ಚುನಾವಣಾ ಮತ ಕೇಂದ್ರದಲ್ಲಿ  ಪ್ರಧಾನಿ ಮೋದಿ  ಕ್ಯಾಮರಾಗಳನ್ನು ಅಳವಡಿಸಿದ್ದಾರೆ.ಆದ್ದರಿಂದ ಯಾರು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ಬಿಜೆಪಿ ನಾಯಕ ರಮೇಶ್ ಕತರಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಗುಜರಾತಿನಲ್ಲಿ ದಾಹೋಡ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 



" ನೀವು ಮತಯಂತ್ರದಲ್ಲಿ ಜಸ್ವಂತ್ ಸಿಂಗ್ ಬಾಬೋರ್ ಅವರ ಫೋಟೋ ಮತ್ತು ಕಮಲದ ಚಿಹ್ನೆಯನ್ನು ನೋಡುತ್ತಿರಿ.ಅದನ್ನು ನೋಡಿ ನೀವು ಬಟನ್ ಒತ್ತಬೇಕು. ಈ ಸಾರಿ ಯಾವುದೇ ತಪ್ಪು ಆಗುವುದಿಲ್ಲ. ಏಕೆಂದರೆ ಮೋದಿ ಸಾಹೇಬ್ ಅವರು ಈ ಬಾರಿ ಕ್ಯಾಮರಾವನ್ನು ಅಳವಡಿಸಿದ್ದಾರೆ"  ಎಂದು ಹೇಳಿದ್ದಾರೆ.



ಇನ್ನು ಮುಂದುವರೆದು " ಯಾರು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ ಯಾರು ಬಿಜೆಪಿಗೆ ಹಾಕಿದ್ದಾರೆ ಎನ್ನುವುದು ಈಗ ನೋಡಬಹುದಾಗಿದೆ.ಈಗ ಎಲ್ಲ ಆದಾರ್ ಕಾರ್ಡ್ ಹಾಗೂ ಗುರುತಿನ ಚೀಟಿಗಳು ನಿಮ್ಮ ಫೋಟೋವನ್ನು ಹೊಂದಿವೆ. ಒಂದು ವೇಳೆ ನಿಮ್ಮ ಬೂತನಲ್ಲಿ ಕೆಲವೇ ಮಾತದಾರರಿದ್ದರೆ ಯಾರು ಮತ ಚಲಾಯಿಸಿಲ್ಲ ಎನ್ನುವುದು ತಿಳಿಯುತ್ತದೆ.ಆಗ ನಿಮಗೆ ಉದ್ಯೋಗ ಸಿಗುವುದಿಲ್ಲ" ವೆಂದು ಹೇಳಿದ್ದಾರೆ.


ಈಗ ಇವರ  ಹೇಳಿಕೆಗೆ ಪ್ರತಿಪಕ್ಷಗಳು ಕಿಡಿಕಾರಿವೆ. ಲಾಲೂ ಪ್ರಸಾದ್ ಯಾದವ್ ಟ್ವೀಟ್ ಮಾಡಿ "ಅಸಹಾಯಕ ಹಾಗೂ ಧ್ವನಿ ಇಲ್ಲದ ಜನರಿಗೆ  ಹೀಗೆ ಮತ ಹಾಕಲು ಹೇಳುತ್ತಿದ್ದಾರೆ. ಇಂತಹ ವಿಷಯಗಳು ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.