PM GatiShakti National Master Plan: ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಗೆ ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಚಾಲನೆ ನೀಡಿದ್ದಾರೆ. ಇದು ಸುಮಾರು 100 ಲಕ್ಷ ಕೋಟಿ ಮೌಲ್ಯದ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಇದರ ಅಡಿಯಲ್ಲಿ, 16 ಸಚಿವಾಲಯಗಳು ಮತ್ತು ಇಲಾಖೆಗಳು ಆ ಎಲ್ಲ ಯೋಜನೆಗಳನ್ನು ಜಿಐಎಸ್ ಮೋಡ್‌ನಲ್ಲಿ ಇರಿಸಿದ್ದು, ಇವುಗಳನ್ನು 2024-25 ರೊಳಗೆ ಪೂರ್ಣಗೊಳಿಸಲಾಗುವುದು.


Kushinagar International Airport : ಮೋದಿ ಸರ್ಕಾರದಿಂದ ದೇಶಕ್ಕೆ ಮತ್ತೊಂದು 'ಅಂತರಾಷ್ಟ್ರೀಯ ವಿಮಾನ ನಿಲ್ದಾಣ'ದ ಉಡುಗೊರೆ!


COMMERCIAL BREAK
SCROLL TO CONTINUE READING

ಪಿಎಂ-ಗತಿಶಕ್ತಿ ಯೋಜನೆ (PM GatiShakti) ಬಹು-ಮಾದರಿ ಸಂಪರ್ಕವು ಜನರು, ಸರಕು ಮತ್ತು ಸೇವೆಗಳನ್ನು ಒಂದು ಸಾರಿಗೆ ವಿಧಾನದಿಂದ ಇನ್ನೊಂದಕ್ಕೆ ಸಾಗಿಸಲು ಸಮಗ್ರ ಮತ್ತು ತಡೆರಹಿತ ಸಂಪರ್ಕವನ್ನು (Multi-Modal Connectivity & New Exhibition Complexes Of ITPO) ಒದಗಿಸುತ್ತದೆ. ಇದು ಮೂಲಸೌಕರ್ಯದ ಅಂತಿಮ ಗಮ್ಯಸ್ಥಾನ ಸಂಪರ್ಕವನ್ನು ಸುಗಮಗೊಳಿಸಲು ಮತ್ತು ಜನರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


CNG Price: ಅಕ್ಟೋಬರ್‌ನಲ್ಲಿ ಎರಡನೇ ಬಾರಿಗೆ ಸಿಎನ್‌ಜಿ ಬೆಲೆ ಏರಿಕೆ


ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯ ವಿಶೇಷತೆ ಏನು? (What Are The Highlights)


>>  ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯನ್ನು ಪ್ರಧಾನಿ ಮೋದಿಯವರು 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಿದ್ದಾರೆ.


>>  ಗತಿ ಶಕ್ತಿ ಯೋಜನೆಯ ಒಟ್ಟು ಬಜೆಟ್ ಅನ್ನು 100 ಲಕ್ಷ ಕೋಟಿಗಳಿಗೆ ನಿಗದಿಪಡಿಸಲಾಗಿದೆ.


>> ಪಿಎಂ ಗತಿ ಶಕ್ತಿ ಯೋಜನೆ ಮೂಲಕ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲಾಗುವುದು.


>> ಈ ಯೋಜನೆಯು ಮೂಲಭೂತ ಸೌಕರ್ಯಗಳ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ.


>> ಸ್ಥಳೀಯ ಉತ್ಪಾದಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸಲಾಗುವುದು.


>> ಹೊಸ ಆರ್ಥಿಕ ವಲಯಗಳನ್ನು ಸಹ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು.


>> ಆಧುನಿಕ ಮೂಲಸೌಕರ್ಯದೊಂದಿಗೆ ಮೂಲಸೌಕರ್ಯ ನಿರ್ಮಾಣದಲ್ಲಿ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು.


>> ಈ ಯೋಜನೆಯ ಮೂಲಕ ಸಮಗ್ರ ಮೂಲಸೌಕರ್ಯದ ಅಡಿಪಾಯವನ್ನು ಹಾಕಲಾಗುವುದು.


ಇದನ್ನೂ ಓದಿ-Indian Economy: ಆರ್ಥಿಕತೆಯ ವಿಷಯದಲ್ಲಿ ಡ್ರ್ಯಾಗನ್ ಹಿಂದಿಕ್ಕಿದ ಭಾರತ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ