CNG Price: ಅಕ್ಟೋಬರ್‌ನಲ್ಲಿ ಎರಡನೇ ಬಾರಿಗೆ ಸಿಎನ್‌ಜಿ ಬೆಲೆ ಏರಿಕೆ

CNG Price: ದುಬಾರಿ ಪೆಟ್ರೋಲ್ ಮತ್ತು ಡೀಸೆಲ್ ನಿಂದಾಗಿ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಇದೆ. ದೆಹಲಿ-ಎನ್‌ಸಿಆರ್ ಸೇರಿದಂತೆ ಅನೇಕ ನಗರಗಳಲ್ಲಿ ಇಂದಿನಿಂದ ಸಿಎನ್‌ಜಿ ಬೆಲೆಗಳನ್ನು ಹೆಚ್ಚಿಸಲಾಗಿದೆ.

Written by - Yashaswini V | Last Updated : Oct 13, 2021, 07:55 AM IST
  • ದೆಹಲಿಯಲ್ಲಿ CNG ಮತ್ತೆ ದುಬಾರಿಯಾಗಿದೆ
  • ಬುಧವಾರ ಬೆಳಿಗ್ಗೆಯಿಂದ ಹೊಸ ದರಗಳು ಅನ್ವಯ
  • ಈ ತಿಂಗಳಲ್ಲಿ ಎರಡನೇ ಬಾರಿಗೆ ಎರಡನೇ ಸಿಎನ್‌ಜಿ ಬೆಲೆ ಹೆಚ್ಚಳ
CNG Price: ಅಕ್ಟೋಬರ್‌ನಲ್ಲಿ ಎರಡನೇ ಬಾರಿಗೆ ಸಿಎನ್‌ಜಿ ಬೆಲೆ ಏರಿಕೆ title=
CNG Price hike again: ಅಕ್ಟೋಬರ್‌ನಲ್ಲಿ ಎರಡನೇ ಬಾರಿಗೆ ಸಿಎನ್‌ಜಿ ಬೆಲೆ ಏರಿಕೆ

ನವದೆಹಲಿ: CNG Price-  ಈಗಾಗಲೇ ದುಬಾರಿ ಪೆಟ್ರೋಲ್ ಮತ್ತು ಡೀಸೆಲ್ ವೆಚ್ಚವನ್ನು ಎದುರಿಸುತ್ತಿರುವ ಸಾಮಾನ್ಯ ಜನರ ಜೇಬಿಗೆ ಮತ್ತೊಂದು ಬೆಲೆ ಏರಿಕೆ ಹೊರೆಯಾಗಲಿದೆ. ದೆಹಲಿ-ಎನ್‌ಸಿಆರ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜನರ ಮೇಲೆ ಹಣದುಬ್ಬರದ ಮತ್ತೊಂದು ಹೊಡೆತ ಬೀಳಲಿದೆ. ಬುಧವಾರದಿಂದ, ರಾಷ್ಟ್ರ ರಾಜಧಾನಿಯಲ್ಲಿ ಸಿಎನ್‌ಜಿಯ ಬೆಲೆ ಹೆಚ್ಚಾಗಿದ್ದು, ಈಗ ದೆಹಲಿಯಲ್ಲಿ ಸಿಎನ್‌ಜಿಯ ದರ ಪ್ರತಿ ಕೆಜಿಗೆ 49.76 ರೂ. ತಲುಪಿದೆ. ಗಮನಾರ್ಹ ಸಂಗತಿ ಎಂದರೆ ಅಕ್ಟೋಬರ್‌ನಲ್ಲಿ ಎರಡನೇ ಬಾರಿಗೆ ಸಿಎನ್‌ಜಿ ಬೆಲೆ ಏರಿಕೆ ಆಗಿದೆ.

ಹೊಸ ದರಗಳು ಬೆಳಿಗ್ಗೆ 6 ರಿಂದ ಅನ್ವಯವಾಗುತ್ತವೆ: 
ರಾಜಧಾನಿ ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಸಿಎನ್‌ಜಿ ಬೆಲೆಯನ್ನು (CNG Price) ಹೆಚ್ಚಿಸಲು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (Indraprastha Gas Ltd) ನಿರ್ಧರಿಸಿದೆ. ದೆಹಲಿಯಲ್ಲಿ ಸಿಎನ್‌ಜಿಗಾಗಿ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಪ್ರತಿ ಕೆಜಿಗೆ 49.76 ರೂ. ಪಾವತಿಸಬೇಕಾಗುತ್ತದೆ. ಅಕ್ಟೋಬರ್ 13 ರ ಬೆಳಗ್ಗೆ 6 ಗಂಟೆಯಿಂದ ದೆಹಲಿಯಲ್ಲಿ ಸಿಎನ್‌ಜಿ ದರ ಪ್ರತಿ ಕೆಜಿಗೆ 49.76 ರೂ. ತಲುಪಲಿದೆ ಎಂದು ಕಂಪನಿ ಟ್ವೀಟ್ ಮಾಡಿದೆ. ಸಿಎನ್‌ಜಿ ಬೆಲೆಯನ್ನು 12 ದಿನಗಳಲ್ಲಿ ಎರಡನೇ ಬಾರಿಗೆ ಹೆಚ್ಚಿಸಲಾಗಿದ್ದು, ಇದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದನ್ನೂ ಓದಿ- Coal Crisis: ದಿನೇ ದಿನೇ ಆಳವಾಗುತ್ತಿದೆಯೇ ವಿದ್ಯುತ್ ಬಿಕ್ಕಟ್ಟು? ಇಲ್ಲಿದೆ ಸತ್ಯಾಸತ್ಯತೆ

ಮತ್ತೊಂದೆಡೆ, ಸಿಎನ್‌ಜಿ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ 56.02 ರೂ.  ಮತ್ತು ಗುರುಗ್ರಾಮದಲ್ಲಿ ಪ್ರತಿ ಕೆಜಿಗೆ 58.20 ರೂ.ಗಳಿಗೆ ಮಾರಾಟವಾಗುತ್ತಿದೆ.  ಮುಜಾಫರ್‌ನಗರದಲ್ಲಿ ಸಿಎನ್‌ಜಿ ಬೆಲೆ (CNG Price) ಪ್ರತಿ ಕೆಜಿಗೆ 63.28 ರೂ. ಆಗಿದ್ದರೆ,  ಮೀರತ್, ಶಾಮ್ಲಿಯಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 63.28  ರೂ. ಆಗಿದೆ. ಕಾನ್ಪುರ್, ಫತೇಪುರದಲ್ಲಿ ಸಿಎನ್‌ಜಿಯ ಬೆಲೆ ಪ್ರತಿ ಕೆಜಿಗೆ 66.54 ರೂ. ಅದೇ ಸಮಯದಲ್ಲಿ, ಹಮೀರ್‌ಪುರದಲ್ಲಿ ಸಿಎನ್‌ಜಿಯ ಬೆಲೆ ಪ್ರತಿ ಕೆಜಿಗೆ 66.54 ರೂ. ತಲುಪಿದೆ.

PNG ಬೆಲೆಯಲ್ಲಿ ಬದಲಾವಣೆ:
CNG ಹೊರತಾಗಿ, ಮನೆಗಳಲ್ಲಿ ಬಳಸುವ PNG ಬೆಲೆಯೂ ಹೆಚ್ಚಾಗಿದೆ. ಹೊಸ ದರದ ಪ್ರಕಾರ, ದೆಹಲಿ- NCR ನಲ್ಲಿ ಪ್ರತಿ SCM ಗೆ 35.11 ದರದಲ್ಲಿ ಗ್ಯಾಸ್ ಲಭ್ಯವಿರುತ್ತದೆ. ಇದರ ಹೊರತಾಗಿ, ಈ ಬೆಲೆ ಗುರುಗ್ರಾಮ್‌ನಲ್ಲಿ ಪ್ರತಿ SCM ಗೆ 33.31 ದರದಲ್ಲಿ ಲಭ್ಯವಿರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ- Indian Economy: ಆರ್ಥಿಕತೆಯ ವಿಷಯದಲ್ಲಿ ಡ್ರ್ಯಾಗನ್ ಹಿಂದಿಕ್ಕಿದ ಭಾರತ

ಈ ಹಿಂದೆ ಅಕ್ಟೋಬರ್ 2 ರಂದು ಕೂಡ ಸಿಎನ್‌ಜಿ ಬೆಲೆಯನ್ನು ಹೆಚ್ಚಿಸಲಾಗಿತ್ತು. ನಂತರ ಸಿಎನ್‌ಜಿಯ ಬೆಲೆಯನ್ನು ದೆಹಲಿಯಲ್ಲಿ ಪ್ರತಿ ಕೆಜಿಗೆ ರೂ 2.28 ಮತ್ತು ನೋಯಿಡಾ-ಗಾಜಿಯಾಬಾದ್‌ನಲ್ಲಿ ಪ್ರತಿ ಕೆಜಿಗೆ 2.55 ರೂ. ಏರಿಕೆ ಮಾಡಲಾಗಿತ್ತು. ಮೊದಲು, ನೈಸರ್ಗಿಕ ಅನಿಲದ ಬೆಲೆಯನ್ನು ಶೇಕಡಾ 62 ರಷ್ಟು ಹೆಚ್ಚಿಸಲಾಗಿತ್ತು. ಇದರೊಂದಿಗೆ, ಸಿಎನ್‌ಜಿ, ಪಿಎನ್‌ಜಿ ಬೆಲೆಗಳೂ ಕೂಡ ದುಬಾರಿಯಾಗಿರುವುದು ಗ್ರಾಹಕರಿಗೆ ಮತ್ತೊಂದು ಹೊರೆ ಹೆಚ್ಚಾದಂತಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News