ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಕಳೆದ ಆರುತಿಂಗಳಿಂದ ಉದ್ವಿಗ್ನತೆ ಉಂಟಾಗಿದರ ನಡುವೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪದೇ ಪದೇ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿಯಾಗುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.‌ 


COMMERCIAL BREAK
SCROLL TO CONTINUE READING

ಇತ್ತೀಚೆಗಷ್ಟೇ (ನವೆಂಬರ್ 10) ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ಶಾಂಗೈ ಕೋಅಪರೇಷನ್ ಆರ್ಗನೈಸೇಷನ್‌ (Shanghai Coorporation Organisation) ಆಯೋಜಿಸಿದ್ದ ವರ್ಚ್ಯಯಲ್ ಸಮಿತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಇಂದು 12ನೇ ಬ್ರಿಕ್ಸ್ ಸಮಿತ್ ನಲ್ಲಿ (BRICS summit) ಮತ್ತೆ ಕ್ಸಿ ಜಿನ್ ಪಿಂಗ್ (Xi Jinping) ಜೊತೆ ವರ್ಚ್ಯುಯಲ್ ವೇದಿಕೆಯಲ್ಲಿರಲಿದ್ದಾರೆ.


ಬ್ರಿಕ್ಸ್ ಸದಸ್ಯ ರಾಷ್ಟ್ರಗಳಲ್ಲಿ ಒಂದಾದ ರಷ್ಯಾ 12ನೇ ಬ್ರಿಕ್ಸ್ ಸಮಿತ್ ಅನ್ನು ಆಯೋಜಿಸುತ್ತಿದೆ. ಇದು ನರೇಂದ್ರ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಒಂದೇ ವೇದಿಕೆಗೆ ಬರಲು ಅವಕಾಶ ಮಾಡಿಕೊಟ್ಟಿದೆ. ಹಿಂದೆ ಶಾಂಗೈ ಕೋಅಪರೇಷನ್ ಆರ್ಗನೈಸೇಷನ್‌ ಆಯೋಜಿಸಿದ್ದ ವರ್ಚ್ಯಯಲ್ ಸಮಿತ್ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi), 'ಶಾಂಗೈ ಕೋಅಪರೇಷನ್ ಆರ್ಗನೈಸೇಷನ್ ನ ಎಲ್ಲಾ ಸದಸ್ಯ ರಾಷ್ಟ್ರಗಳು ಪರಸ್ಪರರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು' ಎಂದು ಹೇಳಿದ್ದರು. ಭಾರತ-ಚೀನಾ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಈ ಹೇಳಿಕೆಯು ಭಾರೀ ಮಹತ್ವ ಪಡೆದುಕೊಂಡಿತ್ತು.


ಭಾರತದ ಹೊಡೆತಕ್ಕೆ ಸಾವಿರಾರು ಕೋಟಿ ನಷ್ಟ ಅನುಭವಿಸಿದ ಚೀನಾ


ಇಂದು 12ನೇ ಬ್ರಿಕ್ಸ್ ಸಮಿತ್ ನಲ್ಲಿ ಭಾಗವಹಿಸುವಂತೆ ರಷ್ಯಾ ಅಧ್ಯಕ್ಷ ವಾದಿಮಿರ್ ಪುಟಿನ್ (Vladimir Putin) ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದಾರೆ. ಪುಟಿನ್ ಆಹ್ವಾನದ ಮೇರೆಗೆ ಮೋದಿ ಸಮಿತ್ ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆ (The Ministry of External Affairs) ತಿಳಿಸಿದೆ. ಜೊತೆಗೆ ಈ ಬಾರಿಯ ಸಮಿತ್ ‘ಜಾಗತಿಕ ಸ್ಥಿರತೆ, ಭದ್ರತೆಯ ಹಂಚಿಕೆ ಮತ್ತು ಹೊಸ ಆವಿಷ್ಕಾರ' ಎಂಬ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದೆ.


ಹಿಮಾಲಯದ ನೆರಳಲ್ಲಿ ಡ್ರ್ಯಾಗನ್ ಸಮರವ್ಯೂಹ, ಅರುಣಾಚಲದ ಗಡಿ ಸಮೀಪದಲ್ಲೇ ಓಡಲಿದೆ ಚೀನಾ ರೈಲು


ಯುನೈಟೆಡ್ ನೇಷನ್ ನ 75ನೇ ವಾರ್ಷಿಕೋತ್ಸವ ಹಾಗೂ COVID -19 ಸಾಂಕ್ರಾಮಿಕ ರೋಗದ ನಡುವೆಯೂ 12ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ನಾಯಕರು ಬಹುಪಕ್ಷೀಯ ವ್ಯವಸ್ಥೆಯ ಸುಧಾರಣೆ ಸೇರಿದಂತೆ ಜಾಗತಿಕ ಸಂದರ್ಭದಲ್ಲಿ ಅಂತರ್-ಬ್ರಿಕ್ಸ್ ಸಹಕಾರ ಮತ್ತು ಜಾಗತಿಕವಾಗಿ ನಡೆಯುತ್ತಿರುವ ಇನ್ನಿತರ ಪ್ರಮುಖ ವಿದ್ಯಮಾನಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.