ನವದೆಹಲಿ: ಮೋದಿ ಸರ್ಕಾರ-2ರ ಮೊದಲ ಸಚಿವ ಸಂಪುಟ ಸಭೆ ಬುಧವಾರ ನಡೆಯಲಿದೆ. ಈ ಸಭೆಯಲ್ಲಿ ಮಂತ್ರಿಗಳಿಗೆ ವಹಿಸಿಲಾದ ಜವಾಬ್ದಾರಿ ಹಾಗೂ ಸರ್ಕಾರದ ದೀರ್ಘಾವಧಿ ಅಜೆಂಡಾವನ್ನು ಚರ್ಚಿಸುವ ಸಾಧ್ಯತೆಯಿದೆ. ಈ ಸಭೆಯ ನಂತರ, ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಜುಲೈ 5 ರಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಸಿದ್ಧತೆಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ಮಂಡಿಸಲಾಗುತ್ತಿರುವ ಮೊದಲ ಕೇಂದ್ರ ಬಜೆಟ್ ಬಗ್ಗೆ ಸಮಾಲೋಚನೆ ನಡೆಯುವ ಸಾಧ್ಯತೆಯಿದೆ. ಇದಲ್ಲದೆ ಸರ್ಕಾರದ ಮುಂದಿನ ಐದು ವರ್ಷಗಳ ಯೋಜನೆ ಬಗ್ಗೆ ನಕ್ಷೆ ರೂಪಿಸಬಹುದು ಎನ್ನಲಾಗಿದೆ. ಸರ್ಕಾರದ ಕಾರ್ಯಸೂಚಿಯಲ್ಲಿ  ಮುಂದಿನ ವಾರ ಪ್ರಾರಂಭವಾಗಲಿರುವ ಸಂಸತ್ತಿನ ಅಧಿವೇಶನದಲ್ಲಿ ಮಂಡಿಸಬೇಕಾದ ಹಲವಾರು ಪ್ರಮುಖ ವಿಧೆಯೇಕಗಳ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.


ರಾಜ್ಯ ಸಚಿವರ ಪಾತ್ರ:
ರಾಜ್ಯ ಸಚಿವರ ಪಾತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವಿವರಿಸಬಹುದು ಮತ್ತು ಕ್ಯಾಬಿನೆಟ್ ಮಂತ್ರಿಗಳನ್ನು ಅವರ ಸಹಾಯಕರಿಗೆ ಸೂಕ್ತ ಜವಾಬ್ದಾರಿಗಳನ್ನು ನೀಡಲು ಕೇಳಬಹುದು ಎಂದು ಮಂಗಳವಾರ ಮೂಲಗಳು ತಿಳಿಸಿವೆ.