ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಜಾಗತಿಕ ಮಟ್ಟದಲ್ಲೂ ಛಾಪು ಮೂಡಿಸಿದೆ. ಜಾಗತಿಕ ನಾಯಕರ ಅನುಮೋದನಾ ರೇಟಿಂಗ್‌ನಲ್ಲಿ ಪ್ರಧಾನಿ ಮೋದಿಯವರು ಅಗ್ರಸ್ಥಾನದಲ್ಲೇ ಮುಂದುವರೆಯುತ್ತಿದ್ದಾರೆ. ಹೌದು, ಡಿಸೆಂಬರ್ 7ರಂದು ಅಮೆರಿಕ ಮೂಲದ ಸಲಹಾ ಸಂಸ್ಥೆ 'ಮಾರ್ನಿಂಗ್ ಕನ್ಸಲ್ಟ್' ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಪ್ರಧಾನಿ ಮೋದಿಯವರು ಶೇ.76ರ ಅನುಮೋದನೆಯೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶೇ.66ರ ಅನುಮೋದನೆಯ ರೇಟಿಂಗ್‌ನೊಂದಿಗೆ ೨ನೇ ಸ್ಥಾನದಲ್ಲಿದ್ದಾರೆ. ಸ್ವಿಸ್ ಒಕ್ಕೂಟದ ಅಧ್ಯಕ್ಷ ಅಲೈನ್ ಬರ್ಸೆಟ್ ಶೇ.58 ಅನುಮೋದನೆಯೊಂದಿಗೆ ೩ನೇ ಸ್ಥಾನವನ್ನು ಪಡೆದ್ದಾರೆ. ಬ್ರೆಜಿಲ್‌ನ ಲುಲಾ ಡ ಸಿಲ್ವಾ ಮತ್ತು ಆಸ್ಟ್ರೇಲಿಯಾದ ಆಂಥೋನಿ ಅಲ್ಬನೀಸ್ ಕ್ರಮವಾಗಿ ೪ ಮತ್ತು ೫ನೇ ಸ್ಥಾನಗಳಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಶೇ. 37ರ ಅನುಮೋದನೆ ರೇಟಿಂಗ್‌ನೊಂದಿಗೆ ೮ನೇ ಸ್ಥಾನದಲ್ಲಿದ್ದರೆ , ಜೆಕ್ ಗಣರಾಜ್ಯದ ಪ್ರಧಾನ ಮಂತ್ರಿ ಪೆಟ್ರ್ ಫಿಯಾಲಾ ಶೇ.16ರಷ್ಟು ಕಡಿಮೆ ಅನುಮೋದನೆ ರೇಟಿಂಗ್ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್ ಅವರ ಅನುಮೋದನೆ ರೇಟಿಂಗ್ ಶೇ.25 ರಷ್ಟಿದೆ. ಅಸಮ್ಮತಿ ರೇಟಿಂಗ್‌(Disapproval Ratings)ಗಳಿಗೆ ಬರುವುದಾದರೆ  ಪ್ರಧಾನಿ ಮೋದಿಯವರ ಸಂಖ್ಯೆಯು ಶೇ.18ರಷ್ಟಿದ್ದರೆ, ಮೆಕ್ಸಿಕೋದ ಒಬ್ರಡಾರ್ ಅವರದು ಶೇ.29ರಷ್ಟಿದೆ. ಮಾರ್ನಿಂಗ್ ಕನ್ಸಲ್ಟ್‌ನ ಇತ್ತೀಚಿನ ಅನುಮೋದನೆ ರೇಟಿಂಗ್‌ಗಳು 2023ರ ನವೆಂಬರ್ 29ರಿಂದ ಡಿಸೆಂಬರ್ 5ರವರೆಗೆ ಸಂಗ್ರಹಿಸಲಾದ ಡೇಟಾವನ್ನು ಆಧರಿಸಿವೆ. 


ಇದನ್ನೂ ಓದಿ: NIA Riad: ಕರ್ನಾಟಕ & ಮಹರಾಷ್ಟ್ರದ 40ಕ್ಕೂ ಹೆಚ್ಚು ಸ್ಥಳಗಳಲ್ಲಿ NIA ದಾಳಿ, 13 ಶಂಕಿತ ಉಗ್ರರ ಬಂಧನ!


ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.


ಇದನ್ನೂ ಓದಿ: GK Questions Answers: ಜಗತ್ತಿನ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ ಯಾವುದು..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ