ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವರ್ಷ ಐದು ರಾಜ್ಯಗಳಲ್ಲಿ ಮತ್ತು 2024 ರ ಲೋಕಸಭಾ ಚುನಾವಣೆಗೂ ಮುನ್ನ ತಮ್ಮ ಸಂಪುಟವನ್ನು ಬದಲಾಯಿಸುವ ಸಾಧ್ಯತೆ ಇದೆ.ನೂತನವಾಗಿ ರಚನೆಯಾಗುವ ಈ ಸಚಿವ ಸಂಪುಟದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಇರಲಿದ್ದಾರೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಅಸ್ಸಾಂ ಸರ್ಬಾನಂದ ಸೋನೊವಾಲ್, ಲೋಕ ಜನಶಕ್ತಿ ಪಕ್ಷದ ಪಶುಪತಿ ಪರಾಸ್, ಅವರು ಕೂಡ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.ಬಿಹಾರ ನಾಯಕ ಸುಶೀಲ್ ಮೋದಿ, ಮಹಾರಾಷ್ಟ್ರ ನಾಯಕ ನಾರಾಯಣ್ ರಾಣೆ ಮತ್ತು ಭೂಪೇಂದ್ರ ಯಾದವ್ ಕೂಡ ಮೋದಿ ಸಂಪುಟಕ್ಕೆ ಸೇರುವ ಸಾಧ್ಯತೆ ಇದೆ.


ಇದನ್ನೂ ಓದಿ- Ishant Sharma Finger Injury: ವೇಗದ ಬೌಲರ್ ಇಶಾಂತ್ ಶರ್ಮಾ ಬಲಗೈ ಬೆರಳಿಗೆ ಗಾಯ


ಈ ಎಲ್ಲ ಹೆಸರುಗಳನ್ನು ಒಂದು ತಿಂಗಳ ಪರಿಶೀಲನೆಯ ಬಳಿಕ ಅಂತಿಮಗೊಳಿಸಲಾಗಿದೆ.ಪ್ರಧಾನಿ ಮೋದಿ (PM Narendra Modi) ವಿವಿಧ ಸಚಿವಾಲಯಗಳ ಕಾರ್ಯದಕ್ಷತೆಯನ್ನು ಪರಿಶೀಲಿಸಿದ್ದಾರೆ ಎನ್ನಲಾಗಿದೆ.ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಇರುವ ಹಿನ್ನಲೆಯಲ್ಲಿ ಅಲ್ಲಿಗೆ ಹೆಚ್ಚಿನ ಪ್ರಾತಿನಿಧ್ಯತೆ ಸಚಿವ ಸಂಪುಟದಲ್ಲಿ ಸಿಗಲಿದೆ ಎನ್ನಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.


ವರುಣ್ ಗಾಂಧಿ, ರಾಮ್‌ಶಂಕರ್ ಕ್ಯಾಥೇರಿಯಾ, ಅನಿಲ್ ಜೈನ್, ರೀಟಾ ಬಹುಗುಣ ಜೋಶಿ ಮತ್ತು ಜಾಫರ್ ಇಸ್ಲಾಂ ಅವರು ಕೂಡ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸುವ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.ಉತ್ತರಾಖಂಡದಿಂದ, ಅಜಯ್ ಭಟ್ ಅಥವಾ ಅನಿಲ್ ಬಲೂನಿ ಯಾಗುವ ಸಾಧ್ಯತೆ ಇದ್ದಾರೆ. ಪ್ರತಾಪ್ ಸಿಂಹ ಅವರು ಕರ್ನಾಟಕದಿಂದ ಸಚಿವ ಸಂಪುಟದಲ್ಲಿ ಪ್ರತಿನಿಧಿಸಲಿದ್ದಾರೆ ಎನ್ನಲಾಗುತ್ತಿದೆ.


ಪಿಎಂ ಮೋದಿಯವರು ಬಂಗಾಳದ ನಾಯಕರನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ, ಜಗನ್ನಾಥ ಸರ್ಕಾರ್, ಶಾಂತನು ಠಾಕೂರ್ ಮತ್ತು ನಿಥೀತ್ ಪ್ರಮಣಿಕ್ ಹೆಸರುಗಳು ಸಚಿವ ಸ್ಥಾನಕ್ಕೆ ಚಾಲ್ತಿಯಲ್ಲಿರುವ ಹೆಸರುಗಳಾಗಿವೆ. ಇತರ ಸಾಧ್ಯತೆಗಳೆಂದರೆ - ಬ್ರಿಜೇಂದ್ರ ಸಿಂಗ್ (ಹರಿಯಾಣ), ರಾಹುಲ್ ಕಸ್ವಾನ್ (ರಾಜಸ್ಥಾನ), ಅಶ್ವನಿ ವೈಷ್ಣವ್ (ಒಡಿಶಾ), ಪೂನಂ ಮಹಾಜನ್ ಅಥವಾ ಪ್ರೀತಮ್ ಮುಂಡೆ (ಮಹಾರಾಷ್ಟ್ರ) ಮತ್ತು ಪರ್ವೇಶ್ ವರ್ಮಾ ಅಥವಾ ಮೀನಾಕ್ಷಿ ಲೇಖಿ (ದೆಹಲಿ) ಎನ್ನಲಾಗಿದೆ.


ಇದನ್ನೂ ಓದಿ : Anganwadi Recruitment 2021: ಪರೀಕ್ಷೆಯಿಲ್ಲದೆಯೇ ಅಂಗನವಾಡಿಯಲ್ಲಿ ಕೆಲಸ, ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ


ಮೈತ್ರಿ ಪಾಲುದಾರರ ವಿಷಯದಲ್ಲಿ, ನಿತೀಶ್ ಕುಮಾರ್ ಅವರ ಸಂಯುಕ್ತ  ಜನತಾದಳ ಕೇಂದ್ರ ಸಚಿವ ಸಂಪುಟಕ್ಕೆ ಸೇರುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 2019 ರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಒಂದು ಸಚಿವಾಲಯದ ಬಿಜೆಪಿಯ ಪ್ರಸ್ತಾಪವನ್ನು ತಿರಸ್ಕರಿಸಿ ಕೇಂದ್ರ ಸರ್ಕಾರದಿಂದ ಹೊರಗುಳಿದಿದ್ದರು.ನಿತೀಶ್ ಕುಮಾರ್ ಕನಿಷ್ಠ ಎರಡು ಸಚಿವಾಲಯಗಳ ನಿರೀಕ್ಷೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೆಡಿಯು ನಾಯಕರಾದ ಲಲ್ಲನ್ ಸಿಂಗ್, ರಾಮನಾಥ ಠಾಕೂರ್ ಮತ್ತು ಸಂತೋಷ್ ಕುಶ್ವಾಹ ಅವರು ಸ್ಪರ್ಧೆಯಲ್ಲಿದ್ದಾರೆ ಎಂದು ವರದಿಯಾಗಿದೆ.


ಬಿಜೆಪಿಯ ಉತ್ತರ ಪ್ರದೇಶದ ಮಿತ್ರ ಅಪ್ನಾ ದಳದ ಅನುಪ್ರಿಯಾ ಪಟೇಲ್ ಅವರನ್ನೂ ಆಹ್ವಾನಿಸಬಹುದು.ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಹೆಸರುಗಳನ್ನು ಅಂತಿಮಗೊಳಿಸಲು ಸರಣಿ ಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಎಲ್ಲಾ ಸಚಿವಾಲಯಗಳ ಕಾರ್ಯಕ್ಷಮತೆಯನ್ನು ವ್ಯಾಪಕವಾಗಿ ಪರಿಶೀಲಿಸಲಾಗುತ್ತಿದೆ.


ಹೆಚ್ಚುವರಿ ಜವಾಬ್ದಾರಿಯನ್ನು ಒಂಬತ್ತು ಮಂತ್ರಿಗಳನ್ನು ಸಚಿವಾಲಯಗಳಿಂದ ಮುಕ್ತಗೊಳಿಸಬಹುದು ಎನ್ನಲಾಗಿದೆ ಇವರಲ್ಲಿ ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ, ಹರ್ಶ್ ವರ್ಧನ್, ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ ಮತ್ತು ಹರ್ದೀಪ್ ಸಿಂಗ್ ಪುರಿ ಸೇರಿದ್ದಾರೆ.


ಕೇಂದ್ರ ಸಚಿವ ಸಂಪುಟ 81 ಸದಸ್ಯರನ್ನು ಹೊಂದಬಹುದು ಮತ್ತು ಪ್ರಸ್ತುತ 53 ಮಂತ್ರಿಗಳಿದ್ದಾರೆ. ಇದರರ್ಥ ಇನ್ನೂ 28 ಮಂತ್ರಿಗಳನ್ನು ಸೇರಿಸಬಹುದು.


ಇದನ್ನೂ ಓದಿ : Corona Vaccine: 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೂ ಸಿದ್ಧವಾಯ್ತು ಕರೋನಾ ಲಸಿಕೆ ! ಡಿಜಿಸಿಐ ಅನುಮೋದನೆ ಕೋರಿದೆ ಈ ಕಂಪನಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.