ನವದೆಹಲಿ: ವರ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತದ ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ (Ishant Sharma) ಗಾಯಗೊಂಡಿದ್ದಾರೆ. ಅವರ ಬೌಲಿಂಗ್‌ನಲ್ಲಿ ಫೀಲ್ಡಿಂಗ್ ಮಾಡುವಾಗ, ಇಶಾಂತ್ ಅವರ ಬಲಗೈ ಬೆರಳುಗಳಿಗೆ ಚೆಂಡು ಬಿದ್ದ ನಂತರ ತೀವ್ರವಾಗಿ ನೋವಾಗಿದ್ದು ರಕ್ತಸ್ರಾವವಾಗಲು ಪ್ರಾರಂಭಿಸಿತು. ಪಂದ್ಯದ ನಂತರ, ವೈದ್ಯರು ಅವರ ಬೆರಳಿಗೆ ಮೂರು ಹೊಲಿಗೆಗಳನ್ನು ಹಾಕಿದರು. ಆದಾಗ್ಯೂ, ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಯವರೆಗೆ ಅವರು ಗುಣಮುಖರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಪಂದ್ಯದ ಮೀಸಲು ದಿನದಂದು ಇಶಾಂತ್ ಶರ್ಮಾ (Ishant Sharma) ತಮ್ಮ ಬೌಲಿಂಗ್‌ನಲ್ಲಿ ಡ್ರೈವ್ ಶಾಟ್ ನಿಲ್ಲಿಸಲು ಪ್ರಯತ್ನಿಸುತ್ತಿದ್ದರು. ಈ ಸಮಯದಲ್ಲಿ, ಇಶಾಂತ್ ಶರ್ಮಾ ಅವರ ಬಲಗೈಯಲ್ಲಿ ಮಧ್ಯ ಮತ್ತು ನಾಲ್ಕನೇ ಬೆರಳಿಗೆ ತೀವ್ರ ಗಾಯವಾಗಿರುವ ಕಾರಣ ಹೊಲಿಗೆ ಹಾಕಲಾಗಿದೆ. ಆದಾಗ್ಯೂ, ಇದು ತುಂಬಾ ಗಂಭೀರವಾಗಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಸುಮಾರು 10 ದಿನಗಳಲ್ಲಿ ಅವರ ಗಾಯ ಸರಿಹೋಗಬಹುದು ಎಂದು ನಿರೀಕ್ಷಿಸಲಾಗಿದ್ದು, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮೊದಲು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.
ಇದನ್ನೂ ಓದಿ- IND vs NZ, World Test Championship Final 2021: ಟೆಸ್ಟ್ ತಂಡದಲ್ಲಿ ಬದಲಾವಣೆ ಸಾಧ್ಯತೆ, ಕೊಹ್ಲಿ ಹೇಳಿದ್ದೇನು?
ಸುಮಾರು 6 ವಾರಗಳ ನಂತರ ಭಾರತ ಮುಂದಿನ ಟೆಸ್ಟ್ ಪಂದ್ಯವನ್ನು (India vs England Test Series) ಆಡಬೇಕಿದೆ ಮತ್ತು ಆ ಹೊತ್ತಿಗೆ ಭಾರತದ ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ (Ishant Sharma) ಆಡಲು ಸಂಪೂರ್ಣವಾಗಿ ಫಿಟ್ ಆಗಬಹುದು ಎಂದು ಹೇಳಲಾಗುತ್ತಿದೆ.
ಸೌತಾಂಪ್ಟನ್ ಟೆಸ್ಟ್‌ನಲ್ಲಿ ಸೋಲು ಅನುಭವಿಸಿದ ನಂತರ ಭಾರತ ತಂಡವು ಗುರುವಾರ ಲಂಡನ್ ತಲುಪಿದ್ದು, ಈಗ ತಂಡದ ಆಟಗಾರರು ತಂಡದಿಂದ ಬೇರ್ಪಡಿಸಲು ಮತ್ತು ಮುಂದಿನ ಮೂರು ವಾರಗಳವರೆಗೆ ತಮ್ಮ ಅನುಕೂಲಕ್ಕಾಗಿ ಇಂಗ್ಲೆಂಡ್‌ನಲ್ಲಿರುವ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ- WTC Final 2021: ನ್ಯೂಜಿಲೆಂಡ್ ಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಟ್ಟ
ಭಾರತ ಮಂಗಳವಾರ ಡಬ್ಲ್ಯುಟಿಸಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಎಂಟು ವಿಕೆಟ್‌ಗಳಿಂದ ಸೋತಿದೆ ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮೊದಲು ಲಂಡನ್‌ಗೆ ಪ್ರಯಾಣಿಸಿದೆ ಎಂದು ವರದಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.