ಮತ್ತೆ ಆರಂಭವಾಗಲಿದೆ ಪ್ರಧಾನಿ ಮೋದಿಯವರ ಜನಪ್ರಿಯ `ಮನ್ ಕಿ ಬಾತ್`
ಲೋಕಸಭಾ ಚುನಾವಣೆಗಿಂತ ಮುಂಚಿತವಾಗಿ ರೇಡಿಯೋ ಕಾರ್ಯಕ್ರಮ `ಮನ್ ಕಿ ಬಾತ್`ನ ಕೊನೆಯ ಸಂಚಿಕೆಯ ಫೆಬ್ರವರಿಯಲ್ಲಿ ಪ್ರಸಾರವಾಗಿತ್ತು.
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ 'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮ ಜೂನ್ 30 ರಂದು ಮತ್ತೆ ಆರಂಭವಾಗಲಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿತ್ತು.
"ಪ್ರಧಾನಿ ನರೇಂದ್ರ ಮೋದಿ ಎರಡನೆಯ ಅವಧಿಗೆ ಅಧಿಕಾರ ವಹಿಸಿಕೊಂಡ ಬಳಿಕ ಮನ್ ಕಿ ಬಾತ್ ಮತ್ತೆ ನಿಮ್ಮ ಕತೆಗಳು, ಕಲ್ಪನೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಲು ಜೂನ್ 30, 2019 ರಿಂದ ಪ್ರಾರಂಭವಾಗಲಿದೆ" ಎಂದು MyGovIndia ಟ್ವೀಟ್ನಲ್ಲಿ ತಿಳಿಸಿದೆ.
ಪ್ರಸಾರ ಭಾರತಿ ನ್ಯೂಸ್ ಸರ್ವಿಸಸ್ ಕೂಡ ಟ್ವೀಟ್ನಲ್ಲಿ ಕಾರ್ಯಕ್ರಮದ ಬಗ್ಗೆ ಜನರಿಂದ ಸಲಹೆಗಳನ್ನು ಕೇಳಿದೆ. "ಮತ್ತೆ ಪ್ರಧಾನಿ ಮೋದಿ ಅವರ ಮನ್ ಕಿ ಬಾತ್! ನಿಮ್ಮ ಯೋಜನೆಗಳು / ಮನ್ ಕಿ ಬಾತ್ನಲ್ಲಿ ತಿಳಿಸಲು ಬಯಸುವಿರಾ, ಅವುಗಳನ್ನು mygov.in ನಲ್ಲಿ ಹಂಚಿಕೊಳ್ಳಿ ಅಥವಾ 1800-11-7800 ಕ್ಕೆ ಡಯಲ್ ಮಾಡಿ" ಎಂದು ಹೇಳಿದೆ.
ಲೋಕಸಭಾ ಚುನಾವಣೆಗಿಂತ ಮುಂಚಿತವಾಗಿ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ ಕೊನೆಯ ಸಂಚಿಕೆಯ ಫೆಬ್ರವರಿಯಲ್ಲಿ ಪ್ರಸಾರವಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಚುನಾವಣೆಯಲ್ಲಿ ತಮ್ಮ ಪಕ್ಷದ ವಿಜಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಚುನಾವಣೆಯ ನಂತರ ರೇಡಿಯೋ ಕಾರ್ಯಕ್ರಮ ಪುನರಾರಂಭಗೊಳ್ಳಲಿದೆ ಎಂದು ಪ್ರಧಾನಿ ಮೋದಿ ಆಶ್ವಾಸನೆ ನೀಡಿದ್ದರು.
'ಮನ್ ಕಿ ಬಾತ್' ಒಂದು ಜನಪ್ರಿಯ ರೇಡಿಯೋ ಕಾರ್ಯಕ್ರಮವಾಗಿದ್ದು, ಪ್ರತಿ ತಿಂಗಳ ಕೊನೆಯ ಭಾನುವಾರ ಈ ಕಾರ್ಯಕ್ರಮ ಪ್ರಸಾರವಾಗುತ್ತದೆ.