ಶ್ರೀರಾಮ ಮಂದಿರ ಭೂಮಿ ಪೂಜೆಗೆ ಸಾಕ್ಷಿಯಾದ PM Modi ತಾಯಿ... ಈ ಅದ್ಭುತ ಕ್ಷಣವನ್ನು ನೀವೂ ಕಣ್ತುಂಬಿಕೊಳ್ಳಿ
ಪ್ರಧಾನಿ ನರೇಂದ್ರ ಮೋದಿಯವರ ಸುಮಾರು 100 ವರ್ಷದ ತಾಯಿ ಹೀರಾ ಬೆನ್ ಅವರು ಅಯೋಧ್ಯೆಯ ರಾಮ್ ಮಂದಿರ ಭೂಮಿ ಪೂಜೆಗೆ ಸಾಕ್ಷಿಯಾಗಿದ್ದಾರೆ. ಅವರು ಇಡೀ ಪೂಜಾ ಕಾರ್ಯಕ್ರಮವನ್ನು ಟಿವಿಯಲ್ಲಿ ನೇರಪ್ರಸಾರದ ಮೂಲಕ ವಿಕ್ಷೀಸಿದ್ದಾರೆ.
ನವದೆಹಲಿ: ಇಂದಿನ ದಿನ ಇತಿಹಾಸದ ಪುಟಗಳಲ್ಲಿ ಚಿನ್ನದ ಅಕ್ಷರಗಳಲ್ಲಿ ದಾಖಲಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು 'ಶ್ರೀ ರಾಮ್ ಜನಮಭೂಮಿ ದೇವಸ್ಥಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಶುಭ ಕ್ಷಣಕ್ಕಾಗಿ ದೇಶ ಮಾತ್ರವಲ್ಲ ವಿಶ್ವದಾದ್ಯಂತ ಜನರು ಕಾಯುತ್ತಿದ್ದರು. ಕರೋನಾದ ಕಾರಣದಿಂದಾಗಿ, ಈ ಸಮಾರಂಭದಲ್ಲಿ ಹೆಚ್ಚಿನ ಜನರಿಗೆ ಭಾಗವಹಿಸಲು ಅವಕಾಶವಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಜನರು ತಮ್ಮ ಮನೆಗಳಲ್ಲಿ ಕುಳಿತು ಈ ಐತಿಹಾಸಿಕ ಕ್ಷಣವನ್ನು ತಮ್ಮ ನೆನಪುಗಳಲ್ಲಿ ಟಿವಿ ಮೂಲಕ ಸೆರೆಹಿಡಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸುಮಾರು 100 ವರ್ಷದ ತಾಯಿ ಹೀರಾ ಬೆನ್ ಅವರು ಕೂಡ ಅಯೋಧ್ಯೆಯ ರಾಮ್ ಮಂದಿರ ಭೂಮಿ ಪೂಜೆಗೆ ಸಾಕ್ಷಿಯಾಗಿದ್ದಾರೆ. ಅವರು ಇಡೀ ಪೂಜಾ ಕಾರ್ಯಕ್ರಮದ ನೇರ ಪ್ರಸಾರವನ್ನು ಟಿವಿಯಲ್ಲಿ ವಿಕ್ಷೀಸಿದ್ದಾರೆ.. ಹೊರಬಂದ ಚಿತ್ರಗಳಲ್ಲಿ, ಪ್ರಧಾನಿ ಮೋದಿ ದೇವಾಲಯದ ನಿರ್ಮಾಣಕ್ಕಾಗಿ ಪೂಜೆ ಸಲ್ಲಿಸುತ್ತಿದ್ದಾಗ ಮತ್ತು ಸ್ವತಃ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದಾಗ, ಪ್ರಧಾನಿ ಅವರ ತಾಯಿ ಹೀರಾ ಬೆನ್ ಕೂಡ ಟಿವಿಯ ಮುಂದೆ ಜೋಡಿಸಿದ ಕೈಗಳ ಮೂಲಕ ಕಾಣಿಸಿಕೊಂಡಿದ್ದಾರೆ.
ರಾಮ ಮಂದಿರ ಶಿಲಾನ್ಯಾಸ ಕ್ರಾರ್ಯಕ್ರಮದ ಬಳಿಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಶ್ರೀ ರಾಮನ ಮಂದಿರ ರಾಷ್ಟ್ರೀಯ ಏಕತೆ ಹಾಗೂ ರಾಷ್ಟ್ರೀಯ ಭಾವನೆಯ ಪ್ರತೀಕವಾಗಿದೆ ಹಾಗೂ ಇದರಿಂದ ಸಂಪೂರ್ಣ ಅಯೋಧ್ಯೆಯ ಅರ್ಥ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿದೆ. ಒಂದೆಡೆ ಸ್ವಾತಂತ್ರ್ಯ ದಿನಾಚರಣೆ ದೇಶದ ಲಕ್ಷಾಂತರ ಜನರ ಬಲಿದಾನ ಪ್ರತೀಕವಾಗಿದ್ದರೆ, ಶ್ರೀ ರಾಮನ ಮಂದಿರ ನಿರ್ಮಾಣ ಕೂಡ ಹಲವು ಪೀಳಿಗೆಗಳ ಅಖಂಡ ತಪ, ತ್ಯಾಗ ಹಾಗೂ ಸಂಕಲ್ಪಗಳ ಪ್ರೆತೀಕವಾಗಿದೆ ಎಂದಿದ್ದಾರೆ.