ನವದೆಹಲಿ : ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆ ಅಸಂಘಟಿತ ವಲಯದ ಕಾರ್ಮಿಕರಿಗೆ ಉತ್ತಮ ಯೋಜನೆಯಾಗಿದೆ. ಇದರ ಅಡಿಯಲ್ಲಿ, ಬೀದಿ ವ್ಯಾಪಾರಿಗಳು, ರಿಕ್ಷಾ ಡ್ರೈವರ್ ಗಳು, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಇತರ ಅನೇಕ ಕೆಲಸಗಳಲ್ಲಿ ತೊಡಗಿರುವ ಜನರು ತಮ್ಮ ವೃದ್ಧಾಪ್ಯದಲ್ಲಿ ಆರ್ಥಿಕ ಸಾಯಕ್ಕೆ ಈ ಯೋಜನೆ ತುಂಬಾ ಸಹಾಯಕವಾಗಲಿದೆ. ವಾಸ್ತವವಾಗಿ, ಈ ಯೋಜನೆಯಡಿ ಸರ್ಕಾರವು ಕಾರ್ಮಿಕರಿಗೆ ಪಿಂಚಣಿಯ ಖಾತರಿಯನ್ನು ನೀಡುತ್ತದೆ. ಈ ಯೋಜನೆಯಲ್ಲಿ, ನೀವು ದಿನಕ್ಕೆ 2 ರೂ. ಉಳಿತಾಯ ಮಾಡುವ ಮೂಲಕ ವಾರ್ಷಿಕ 36000 ರೂ. ಪಿಂಚಣಿ ಪಡೆಯಬಹುದು.


COMMERCIAL BREAK
SCROLL TO CONTINUE READING

ತಿಂಗಳಿಗೆ 55 ರೂ. ಜಮಾ ಮಾಡಬೇಕು :


ಈ ಯೋಜನೆ(PM Shram Yogi Mandhan Yojana)ಯಲ್ಲಿ ನೀವು ಪ್ರತಿ ತಿಂಗಳು 55 ರೂ. ಜಮಾ ಮಾಡಬೇಕು. ಅಂದರೆ, 18ನೇ ವಯಸ್ಸಿನಲ್ಲಿ ದಿನಕ್ಕೆ ಸುಮಾರು 2 ರೂ. ಉಳಿತಾಯ ಮಾಡಿ, ನೀವು ವಾರ್ಷಿಕ 36000 ರೂ. ಪಿಂಚಣಿ ಪಡೆಯಬಹುದು. ಈ ಯೋಜನೆ ಆರಂಭಿಸಲು ಅಂದಾಜು 40 ವಯಸ್ಸಾಗಿರಬೇಕು. ನೀವು ಪ್ರತಿ ತಿಂಗಳು 200 ರೂ. ಜಮಾ ಮಾಡಬೇಕು. ನೀವು ವೃದ್ಧಾಪ್ಯದಲ್ಲಿ ಅಥವಾ 60 ವರ್ಷಗಳ ನಂತರ ಪಿಂಚಣಿ ಪಡೆಯಬಹುದು. 60 ವರ್ಷಗಳ ನಂತರ, ನೀವು ತಿಂಗಳಿಗೆ 3000 ರೂ. ಪಿಂಚಣಿ, ಅಂದರೆ ವರ್ಷಕ್ಕೆ  36000 ರೂ. ಪಡೆಯಬಹದು.


ಇದನ್ನೂ ಓದಿ : Narendra Modi : ಬಡವರ ಹಸಿವು ನೀಗಿಸಿದ 'ಉಚಿತ ಪಡಿತರ' : ಪ್ರಧಾನಿ ಮೋದಿ


ಈ ಯೋಜನೆಗೆ ಬೇಕಾದ ಅಗತ್ಯ ದಾಖಲೆಗಳು :


ಈ ಯೋಜನೆಯ ಲಾಭ ಪಡೆಯಲು, ನೀವು ಬ್ಯಾಂಕ್ ಅಕೌಂಟ್(Bank Account) ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು. ವ್ಯಕ್ತಿಯ ವಯಸ್ಸು 18 ವರ್ಷಗಳಿಗಿಂತ ಕಡಿಮೆಯಿರಬಾರದು ಮತ್ತು 40 ವರ್ಷಗಳಿಗಿಂತ ಹೆಚ್ಚಿರಬಾರದು.


ಇಲ್ಲಿ ನೋಂದಣಿ ಮಾಡಿ :


ಇದಕ್ಕಾಗಿ, ನೀವು ಸಾಮಾನ್ಯ ಸೇವಾ ಕೇಂದ್ರದಲ್ಲಿ (CSC) ನೋಂದಾಯಿಸಿಕೊಳ್ಳಬೇಕಾಗುತ್ತದೆ. ಕಾರ್ಮಿಕರು ಸಿಎಸ್‌ಸಿ ಕೇಂದ್ರದಲ್ಲಿರುವ ಪೋರ್ಟಲ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಸರ್ಕಾರವು ಈ ಯೋಜನೆಗಾಗಿ ವೆಬ್ ಪೋರ್ಟಲ್ ಅನ್ನು ರಚಿಸಿದೆ. ಈ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿರುವ ಎಲ್ಲಾ ಮಾಹಿತಿಯು ಭಾರತ ಸರ್ಕಾರಕ್ಕೆ ಹೋಗುತ್ತದೆ.


ಈ ಮಾಹಿತಿಯನ್ನು ನೀಡಬೇಕು :


ನೋಂದಣಿಗಾಗಿ, ನಿಮ್ಮ ಆಧಾರ್ ಕಾರ್ಡ್, ಉಳಿತಾಯ ಅಥವಾ ಜನ್ ಧನ್ ಬ್ಯಾಂಕ್ ಖಾತೆ(Jan Dhan Bank Account)ಯ ಪಾಸ್‌ಬುಕ್, ಮೊಬೈಲ್ ಸಂಖ್ಯೆ ಅಗತ್ಯವಿದೆ. ಇದರ ಹೊರತಾಗಿ, ಒಪ್ಪಿಗೆ ಪತ್ರವನ್ನು ನೀಡಬೇಕಾಗುತ್ತದೆ ಮತ್ತು ಅದನ್ನು ಬ್ಯಾಂಕ್ ಶಾಖೆಯಲ್ಲಿ ನೀಡಬೇಕಾಗುತ್ತದೆ, ಅಲ್ಲಿ ಕೆಲಸಗಾರನು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು, ಇದರಿಂದ ಪಿಂಚಣಿಗಾಗಿ ಸಕಾಲದಲ್ಲಿ ಅವನ ಬ್ಯಾಂಕ್ ಖಾತೆಯಿಂದ ಹಣವನ್ನು ಕಡಿತಗೊಳಿಸಬಹುದು.


ಇದನ್ನೂ ಓದಿ : Narendra Modi : ಬಡವರ ಹಸಿವು ನೀಗಿಸಿದ 'ಉಚಿತ ಪಡಿತರ' : ಪ್ರಧಾನಿ ಮೋದಿ


ಯಾರು ಯೋಜನೆಯ ಲಾಭ ಪಡೆಯಬಹುದು?


ಪ್ರಧಾನ ಮಂತ್ರಿ ಶ್ರಮ ಯೋಗಿ ಮಹಾಂಧನ್ ಪಿಂಚಣಿ ಯೋಜನೆ(Pension Scheme)ಯಡಿಯಲ್ಲಿ, ಯಾವುದೇ ಅಸಂಘಟಿತ ವಲಯದ ಕೆಲಸಗಾರ, ಅವರ ವಯಸ್ಸು 40 ವರ್ಷಕ್ಕಿಂತ ಕಡಿಮೆ ಮತ್ತು ಯಾವುದೇ ಸರ್ಕಾರಿ ಯೋಜನೆಯ ಲಾಭವನ್ನು ಪಡೆಯದಿದ್ದರೂ, ಲಾಭ ಪಡೆಯಬಹುದು. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ವ್ಯಕ್ತಿಯ ಮಾಸಿಕ ಆದಾಯವು 15 ಸಾವಿರ ರೂಪಾಯಿಗಳಿಗಿಂತ ಕಡಿಮೆ ಇರಬೇಕು.


ಟೋಲ್ ಫ್ರೀ ನಂಬರ್ ನಿಂದ ಕೂಡ ಮಾಹಿತಿ ಪಡೆಯಿರಿ :


ಈ ಯೋಜನೆಗಾಗಿ, ಕಾರ್ಮಿಕ ಇಲಾಖೆLabour Department(), ಎಲ್‌ಐಸಿ, ಇಪಿಎಫ್‌ಒಗಳ ಕಛೇರಿಯನ್ನು ಸರ್ಕಾರವು ಶ್ರಮಿಕ್ ಫೆಸಿಲಿಟೇಶನ್ ಕೇಂದ್ರವನ್ನಾಗಿ ಮಾಡಿದೆ. ಇಲ್ಲಿಗೆ ಹೋಗುವ ಮೂಲಕ, ಕಾರ್ಮಿಕರು ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಈ ಯೋಜನೆಗಾಗಿ ಸರ್ಕಾರ 18002676888 ಟೋಲ್ ಫ್ರೀ ಸಂಖ್ಯೆಯನ್ನು ನೀಡಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನೀವು ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ