ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಕೋಟ್ಯಂತರ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿ ವಜ್ರ ವ್ಯಾಪಾರಿ ನೀರವ್ ಮೋದಿ ವಿರುದ್ಧ ಸರ್ಕಾರ ಮತ್ತಷ್ಟು ಕಠಿಣ ಕ್ರಮ ಕೈಗೊಂಡಿದ್ದು, ಮಹಾರಾಷ್ಟ್ರದ ರಾಯ್‍ಗಡ್ ಜಿಲ್ಲೆಯ ಆಲಿಬಾಗ್ ನಲ್ಲಿದ್ದ ನೀರವ್ ಮೋದಿಗೆ ಸೇರಿದ ಐಷಾರಾಮಿ ಬಂಗಲೆಯನ್ನು ಸ್ಫೋಟಕಗಳನ್ನು ಬಳಸಿ ದ್ವಂಸ ಮಾಡಿದೆ.


COMMERCIAL BREAK
SCROLL TO CONTINUE READING

ಕರಾವಳಿ ನಿಯಂತ್ರಣ ವಲಯ ನಿಯಮಗಳು ಹಾಗೂ ಮಹಾರಾಷ್ಟ್ರದ ರಾಜ್ಯದ ನಿಯಮಾವಳಿಗಳನ್ನು ಉಲ್ಲಂಘಿಸಿ 33,000 ಚದರ ಅಡಿಯ 100 ಕೋಟಿ ರೂ. ಬೆಲೆಬಾಳುವ ಐಷಾರಾಮಿ ಬಂಗಲೆಯನ್ನು ಕಹಿಂ ಬೀಚ್ ಸಮಿಪದಲ್ಲಿ ನೀರವ್ ಮೋದಿ ಅನಧಿಕೃತವಾಗಿ ನಿರ್ಮಿಸಿದ್ದರು. ಈ ಸಂಬಂಧ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ಬಳಿಕ ಶುಕ್ರವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ರಾಯಗಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಜಯ್ ಸೂರ್ಯವಂಶಿ ನೇತೃತ್ವದಲ್ಲಿ ಇಂಜಿನಿಯರುಗಳ ತಂಡ ಸ್ಫೋಟಕಗಳನ್ನು ಬಳಸಿ ರೂಪಣ್ಯ ಹೆಸರಿನ ಬಂಗಲೆಯನ್ನು ನೆಲಕ್ಕುರುಳಿಸಿದೆ. 



ಶಂಬುರಾಜೆ ಯುವ ಕ್ರಾಂತಿ ಎಂಬ ಹೆಸರಿನ ಎನ್‌ಜಿಒವೊಂದು 2009ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಪರಿಸರ ವಲಯನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡ ಹಾಗೂ ಬಂಗಲೆಗಳನ್ನು ಕಡವಲು ಬಾಂಬೆ ಹೈಕೋರ್ಟ್‌ ಆದೇಶಿಸಿತ್ತು. ಇದರಲ್ಲಿ ನೀರವ್‌ ಮೋದಿಗೆ ಸೇರಿದ ಅಲಿಬಾಗ್‌ ಬಂಗಲೆಯೂ ಸೇರಿತ್ತು.