ಕೋಲ್ಕತಾ: ಹೆಲ್ಮೆಟ್ ಧರಿಸದವರ ವಿರುದ್ಧ ಕೋಲ್ಕತಾ ಪೊಲೀಸರು ಈಗ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಇದರ ಅಡಿಯಲ್ಲಿ ಡಿಸೆಂಬರ್ 8 ರಿಂದ 'ನೋ ಹೆಲ್ಮೆಟ್ ನೋ ಪೆಟ್ರೋಲ್' ನಿಯಮವನ್ನು ಜಾರಿಗೆ ತರಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಕೋಲ್ಕತಾ ಪೊಲೀಸರ ಈ ನಿಯಮವನ್ನು ಅನುಸರಿಸಿ ಇನ್ನುಮುಂದೆ ವಾಹನ ಸವಾರರು ಹೆಲ್ಮೆಟ್ ಇಲ್ಲದೆಯೇ ಪೆಟ್ರೋಲ್ ಪಂಪ್ ಬಳಿ ಹೋದರೆ 'ನೋ ಹೆಲ್ಮೆಟ್, ನೋ ಪೆಟ್ರೋಲ್' ನಿಯಮದಡಿ ಪೆಟ್ರೋಲ್ (Petrol) ನೀಡಲಾಗುವುದಿಲ್ಲ.


ಈ ವ್ಯವಸ್ಥೆಯು ಮೊದಲೇ ಇತ್ತು ಮತ್ತು ಈಗ ಕೋಲ್ಕತಾ (Kolkata) ಪೊಲೀಸರು ಅದನ್ನು ಮತ್ತೆ ಕಾರ್ಯಗತಗೊಳಿಸಲು ಹೊರಟಿದ್ದಾರೆ ಎಂಬುದು ಗಮನಾರ್ಹ.


ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು ಡಿಸೆಂಬರ್ 8 ರಿಂದ 'ಹೆಲ್ಮೆಟ್ ಇಲ್ಲ, ಪೆಟ್ರೋಲ್ ಇಲ್ಲ' ಎಂಬ ನಿಯಮ ಅನ್ವಯವಾಗಲಿದೆ ಮತ್ತು ಮುಂದಿನ 60 ದಿನಗಳವರೆಗೆ ಇದು ಮುಂದುವರಿಯಲಿದೆ ಎಂದು ಹೇಳಿದರು.


ಮಳೆ-ಬಿಸಿಲು ಎನ್ನದೆ ಮರ ಹತ್ತಿ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವ ಈ ಶಿಕ್ಷಕನಿಗೆ ಹ್ಯಾಟ್ಸ್ ಆಫ್


ಕೋಲ್ಕತಾ ಪೊಲೀಸ್ ಆಯುಕ್ತ ಅನುಜ್ ಶರ್ಮಾ ಅವರು ಶುಕ್ರವಾರ ಹೊರಡಿಸಿದ ಆದೇಶದಲ್ಲಿ, "ಅನೇಕ ಸಂದರ್ಭಗಳಲ್ಲಿ ದ್ವಿಚಕ್ರ ವಾಹನಗಳನ್ನು ಓಡಿಸುವ ಅಥವಾ ಹಿಂದೆ ಕುಳಿತುಕೊಳ್ಳುವ ಜನರು ಹೆಲ್ಮೆಟ್ ಧರಿಸುವುದಿಲ್ಲ ಮತ್ತು ನಿಯಮಗಳ ಉಲ್ಲಂಘನೆ ಅನೇಕ ಹಂತಗಳಲ್ಲಿ ಹೆಚ್ಚಾಗಿದೆ ಎಂದು ಕಂಡುಬಂದಿದೆ" ಎಂದು ಹೇಳಿದರು.


Mamata Banerjee: 'ಯಾರು ಬೇಕಾದ್ರೂ ಪಕ್ಷ ಬಿಟ್ಟು ಹೋಗ್ಲಿ ಹೋಗುವಾಗ ನನ್ನ ಸಾವಿಗಾಗಿ ಪ್ರಾರ್ಥಿಸಿ'


ಇದಕ್ಕೂ ಮೊದಲು 2016 ರ ಜುಲೈನಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೆಲ್ಮೆಟ್ ಧರಿಸದ ಬೈಕು ಸವಾರರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ನಗರ ಪೊಲೀಸರು  'ಹೆಲ್ಮೆಟ್ ಇಲ್ಲದಿದ್ದರೆ, ಪೆಟ್ರೋಲ್ ಇಲ್ಲ' ಎಂಬ ನಿಯಮವನ್ನು ಜಾರಿಗೆ ತಂದರು. ಬಳಿಕ ನಗರದಲ್ಲಿ ಹೆಲ್ಮೆಟ್ ಧರಿಸದವರ ಸಂಖ್ಯೆ ಬಹಳ ಕಡಿಮೆಯಾಗಿತ್ತು.