ಮಥುರಾ: ಮಥುರಾದಲ್ಲಿ ಹೋಳಿ ಆಡುವ ಸಂದರ್ಭದಲ್ಲಿ ಭುಗಿಲೆದ್ದ ವಿವಾದ ಓರ್ವನ ಹತ್ಯೆಯಲ್ಲಿ ಅಂತ್ಯವಾದ ಅಮಾನುಷ ಘಟನೆ ನಡೆದಿದೆ. ಹೋಳಿ ವೇಳೆ ಉಂಟಾದ ವಿವಾದದ ವೇಳೆ ಪೊಲೀಸ್ ಪೇದೆಯೊಬ್ಬ ಯುವಕನನ್ನು ಗುಂಡಿಕ್ಕಿ ಕೊಂದಿದ್ದಾನೆ. ಘಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿ ಪೇದೆಯನ್ನು ಸದ್ಯ ಗೌತಮ್ ಬುದ್ಧನಗರ್ ಜಿಲ್ಲಾ ಠಾಣೆಯಲ್ಲಿ ಇರಿಸಲಾಗಿದೆ. ಆರೋಪಿ ಸಮಾಜವಾದಿ ಪಕ್ಷದ ನಾಯಕ ರಾಮಗೋಪಾಲ್ ಯಾದವ್ ಅವರ ಹತ್ತಿರದ ಸಂಬಂಧಿ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಮಾಹಿತಿ ಪ್ರಕಾರ, ಆರೋಪಿ ರೋಹಿತ್ ಯಾದವ್ ಅಲಿಯಾಸ್ ಟಿಲ್ಲೂ ಹೋಳಿ ಪ್ರಯುಕ್ತ ತನ್ನ ಕಾರಿನಲ್ಲಿ ಮೇಲೆ ವೃಂದಾವನಕ್ಕೆ ಬಂದಿದ್ದರು. ಬಾಬಾ ದೇವಾಲಯದ ಸಮೀಪ ರೋಹಿತ್ ಮತ್ತು ಮಥುರಾ ನಿವಾಸಿ ರಜತ್ ಶರ್ಮಾರೊಂದಿಗೆ ಹೋಳಿ ಆಡುವ ವಿಷಯಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಯಿತು. ಸಣ್ಣದರಲ್ಲಿ ಪ್ರಾರಂಭವಾದ ಈ ವಿವಾದ ಹತ್ಯೆಯಲ್ಲಿ ಕೊನೆಗೊಂಡು, ಸ್ವಲ್ಪ ಸಮಯದಲ್ಲೇ ದೊಡ್ಡ ತಿರುವು ಪಡೆದುಕೊಂಡಿತು. ಯುವಕನ ಹತ್ಯೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿದರು ಮತ್ತು ಆಸ್ಪತ್ರೆಗೆ ಕರೆದೊಯ್ಯಿದರು, ಅಲ್ಲಿ ವೈದ್ಯರು ರಜತ್ ಸತ್ತಿರುವುದಾಗಿ ಘೋಷಿಸಿದರು. ಈ ಘಟನೆಯ ನಂತರ, ಆ ಪ್ರದೇಶದಲ್ಲಿ ಒಂದು ಉದ್ವಿಗ್ನತೆಯುಂಟಾಯಿತು. 


ಈ ಘಟನೆಯ ನಂತರ ಪೊಲೀಸರು ಆರೋಪಿ ರೋಹಿತ್ ಯಾದವ್ ಅವರನ್ನು ಬಂಧಿಸಿದ್ದು, ವೃತ್ತಿಯಲ್ಲಿ ಪೊಲೀಸ್ ಆಗಿರುವ ರೋಹಿತ್ ಯಾದವ್ ಇತಾವಾದ ಸ್ಥಳೀಯ ನಿವಾಸಿ ಮತ್ತು ಪ್ರಸ್ತುತ ನೋಯ್ಡಾದಲ್ಲಿದ್ದಾರೆ. ಅವರು ಮೊದಲು ಮಥುರಾ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.


ಇದೀಗ ಮೃತ ವ್ಯಕ್ತಿಯ ಸಂಬಂಧಿಕರನ್ನು ಭೇಟಿ ಮಾಡಲು ಪೊಲೀಸರು ಕಾಯುತ್ತಿದ್ದಾರೆ. ಅವರ ಮಾಹಿತಿ ಆಧಾರದ ಮೇರೆಗೆ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.