ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಒಂದು ವಿಶೇಷ ಪೋಲಿಸ್ ಅಧಿಕಾರಿಯೊಬ್ಬರು ಎಕೆ47 ಶಸ್ತ್ರಾಸ್ತ್ರ ಸಮೇತ ನಾಪತ್ತೆಯಾಗಿದ್ದು, ಅವರ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಯೋಧ ಔರಂಗಜೇಬ್‌ ಅವರನ್ನು ಉಗ್ರರು ಅಪಹರಿಸಿ ಹತ್ಯೆಗೈದ ಘಟನೆ ನಡೆದ ಕೆಲ ದಿನಗಳಲ್ಲೇ ಕಾಶ್ಮೀರದ ವಿಶೇಷ ಪೊಲೀಸ್‌ ಅಧಿಕಾರಿಯೊಬ್ಬರು ಎಕೆ 47 ಶಸ್ತ್ರಾಸ್ತ್ರ ಸಮೇತ ನಾಪತ್ತೆಯಾಗಿದ್ದು, ಅವರನ್ನು ಕಳ್ಳ ಎಂದು ಪರಿಗಣಿಸಿ ಹುಡುಕುವಂತೆ ಅಲರ್ಟ್ ಜಾರಿ ಮಾಡಲಾಗಿದೆ. ಪಾಂಪೋರ್‌ ಠಾಣೆಗೆ ಇತ್ತೀಚೆಗೆ ನಿಯೋಜಿಸಲ್ಪಟ್ಟಿದ್ದ ಎಸ್‌ಪಿಓ ಪೋಲಿಸ್ ಠಾಣೆಯಿಂದ ಹೊರಟಿದ್ದು, ಮಾರ್ಗಮಧ್ಯದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. 


ಈ ರೀತಿ ಪೊಲೀಸ್ ಪೇದೆಗಳು, ಅಧಿಕಾರಿಗಳು ಜಮ್ಮು-ಕಾಶ್ಮೀರದಲ್ಲಿ ನಾಪತ್ತೆಯಾಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಿಂಗಳಲ್ಲಿ ಓರ್ವ ಪೋಲಿಸ್ ಅಧಿಕಾರಿ ನಾಪತ್ತೆಯಾಗುವುದು ಸಾಮಾನ್ಯವಾಗಿಬಿಟ್ಟಿದೆ. ಈ ಹಿಂದೆ ಭಾರತೀಯ ಸೇನೆಯ ಲೈಟ್ ಇನ್ಫೆಂಟ್ರಿ ಯುನಿಟ್'ನ ಯೋಧನೊಬ್ಬ ನಾಪತ್ತೆಯಾಗಿ, ನಂತರದ ದಿನಗಳಲ್ಲಿ ಆತ ಉಗ್ರರ ಸಂಘಟನೆಯೊಂದರಲ್ಲಿ ಸೇರ್ಪಡೆಗೊಂಡಿದ್ದ ಎಂಬುದಾಗಿ ಪೋಲಿಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.