ನವದೆಹಲಿ: ರಾಜಕೀಯ ಹತ್ಯೆಗಳಿಗೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅಭಿಪ್ರಾಯಪಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಆಗಿರುವ ರಾಜಕೀಯ ಹತ್ಯೆಗಳನ್ನು ಖಂಡಿಸಿದ ಜಾವಡೇಕರ್ ."ಇದು ರಾಜಕೀಯ ಹತ್ಯೆಯಾಗಿದ್ದು, ಇಲ್ಲಿಯವರೆಗೆ 19 ಬಿಜೆಪಿ ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ.ಇತ್ತೀಚಿನ ಬಂಗಾಳದಲ್ಲಿ ನಡೆದ ಹತ್ಯೆಗಳು ಅಮಾನವೀಯವಾಗಿವೆ.ಈ ಕ್ರೂರ ರಾಜಕೀಯ ಹತ್ಯೆಯನ್ನು ಮತ್ತು ಇಂತಹ ಹತ್ಯೆಯ ಸಂಸ್ಕೃತಿಯನ್ನು ನಾವು ಖಂಡಿಸುತ್ತೇವೆ ಎಂದರು. 


ಇಂತಹ ಕೃತ್ಯಗಳನ್ನು ಕೈಗೊಳ್ಳುವವರಿಗೆ ಪಶ್ಚಿಮ ಬಂಗಾಳದ ಪಾಠ ಕಲಿಸುತ್ತಾರೆ.ಈ ರೀತಿಯ ಕೃತ್ಯ ಮತ್ತು ರಾಜಕೀಯ ಹತ್ಯೆಗಳಿಗೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಸ್ಥಾನವಿಲ್ಲ "ಎಂದು ಜಾವಡೇಕರ್ ತಿಳಿಸಿದರು.


ಶುಕ್ರವಾರದಂದು ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತ ದುಲಾಲ್ ಕುಮಾರ್ ಅವರ ದೇಹವು ಶನಿವಾರದಂದು  ಪುರುಲಿಯಾ ಜಿಲ್ಲೆಯ ಬಲರಾಮ್ಪುರ್ನಲ್ಲಿ ಪತ್ತೆಯಾಗಿತ್ತು. ಇದು ಒಂದು ವಾರದ ಹಿಂದೆ ಬಿಜೆಪಿ ಕಾರ್ಯಕರ್ತ ಟ್ರೈಲೋಚನ್ ಮಹಾಟೋ ಅವರ ದೇಹವು ಮೇ 30 ರಂದು ಅದೇ ಜಿಲ್ಲೆಯಲ್ಲಿ ಮರದಲ್ಲಿ ನೇಣು ಹಾಕಿದ ನಂತರ ಮತ್ತೆ ಈ ಘಟನೆ ಸಂಭವಿಸಿದೆ.


ಪಶ್ಚಿಮ ಬಂಗಾಳ ಪೊಲೀಸರ ಪ್ರಕಾರ, ಕುಮಾರ್ ಸಾವನ್ನು ತನಿಖೆಗೆ ಒಳಪಡಿಸಲು ಅಪರಾಧ ತನಿಖಾ ಇಲಾಖೆ (ಸಿಐಡಿ) ಗೆ ಹಸ್ತಾಂತರಿಸಲಾಗಿದೆ.