Maharashtra Politics: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಇತ್ತೀಚಿಗೆ ಔರಂಗಾಬಾದ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಅನಾವರಣಗೊಳಿಸಿದ್ದರು. ಇಂದು ಎನ್‌ಸಿಪಿಯ ಯುವ ಘಟಕದ ಮುಖಂಡರು ಪ್ರತಿಮೆಯನ್ನು ಸ್ವಚ್ಛಗೊಳಿಸಿ, ಹಾಲಿನ ಸ್ನಾನ ಮಾಡಿಸಿದ್ದಾರೆ. ಈ ಪ್ರತಿಮೆಯನ್ನು ದೇಶದ್ರೋಹಿ ಮುಖ್ಯಮಂತ್ರಿ ಅನಾವರಣಗೊಳಿಸಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ. ಇದೇ ಕಾರಣ ಹೀಗೆ ಮಾಡಿದ್ದು ಎಂದು ಹೇಳಿದ್ದಾರೆ. ವಾಸ್ತವದಲ್ಲಿ, ಈ ಸಂಪೂರ್ಣ ಪ್ರಕರಣ ಆಹ್ವಾನ ಪತ್ರಿಕೆಯಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ವಿದ್ಯಾರ್ಥಿ ಸಂಘಟನೆಗಳ ನಿರ್ಲಕ್ಷ್ಯಕ್ಕೆ ಸಂಬಂಧಿಸಿದೆ. ಆಡಳಿತ ಪಕ್ಷಕ್ಕೆ ಸಂಬಂಧಿಸಿದವರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ವಿರೋಧ ಪಕ್ಷದ ಉನ್ನತ ನಾಯಕರಿಗೆ ಆಹ್ವಾನ ನೀಡಲಾಗಿಲ್ಲ ಎಂದು ಆರೋಪಿಸಲಾಗಿದೆ. ಆದರೆ, ಈ ಪ್ರತಿಮೆ ಬಹು ನಿರೀಕ್ಷಿತ ಯೋಜನೆಯಾಗಿದೆ.

COMMERCIAL BREAK
SCROLL TO CONTINUE READING

ಈ ಘಟನೆ ಔರಂಗಾಬಾದ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣಕ್ಕೆ ಸಂಬಂಧಿಸಿದೆ. ಡಾ.ಬಾಳಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಛತ್ರಪತಿ ಪ್ರತಿಮೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದಾರೆ. ಸೆಪ್ಟೆಂಬರ್ 16 ರಂದು ಸಿಎಂ ಶಿಂಧೆ ಪ್ರತಿಮೆ ಅನಾವರಣಗೊಳಿಸಿದ್ದು, ಮಾರನೆ ದಿನವಾದ ಇಂದು, ಎನ್‌ಸಿಪಿಯ ಯುವ ಘಟಕಕ್ಕೆ ಸಂಬಂಧಿಸಿದ ಮುಖಂಡರು ಕಾಲೇಜಿಗೆ ಬಂದು ಪ್ರತಿಮೆಯನ್ನು ನೀರಿನಿಂದ ತೊಳೆಯಲು ಪ್ರಾರಂಭಿಸಿದ್ದಾರೆ.


ಇದನ್ನೂ ಓದಿ-ವೃದ್ಧಾಪ್ಯದಲ್ಲಿ ಖಚಿತ ಆದಾಯ: 1000 ರೂ. ಹೂಡಿಕೆಯಿಂದ ಪ್ರತಿ ತಿಂಗಳು 20 ಸಾವಿರ ಪಿಂಚಣಿ!


ಸಿಎಂ ವಿರುದ್ಧ ದೇಶದ್ರೋಹದ ಆರೋಪ
ಈ ಪ್ರತಿಮೆಯನ್ನು ದೇಶದ್ರೋಹಿಯಾಗಿರುವ ಮುಖ್ಯಮಂತ್ರಿ ಅನಾವರಣಗೊಳಿಸಿದ್ದಾರೆ ಎಂದು ಎನ್‌ಸಿಪಿ ನಾಯಕರು ಆರೋಪಿಸಿದ್ದಾರೆ. ಹೀಗಾಗಿ ವಿಗ್ರಹಕ್ಕೆ ಮೊದಲು ಅವರು ಕ್ಷೀರಾಭಿಷೇಕ ಮಾಡಿಸಿ ನಂತರ ನೀರಿನಿಂದ ಶುದ್ಧೀಕರಣ ನೆರವೇರಿಸಿದ್ದಾರೆ.


ಇದನ್ನೂ ಓದಿ-ಏಮ್ಸ್ ಹೆಸರು ಬದಲಾಯಿಸಲು ಮುಂದಾದ ಕೇಂದ್ರ ಸರ್ಕಾರ..! ಅಧ್ಯಾಪಕರ ಕಳವಳ


ವಿರೋಧ ಪಕ್ಷದ ನಾಯಕರನ್ನು ಕರೆಯದಿದ್ದಕ್ಕೆ ಕೋಪ
ವಾಸ್ತವದಲ್ಲಿ , ನಿನ್ನೆ ಸಿಎಂ ಶಿಂಧೆ ಅವರು ಪುತ್ಥಳಿ ಅನಾವರಣಗೊಳಿಸಿದಾಗ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಹಾಗೂ ಇತರ ಹಲವು ಮುಖಂಡರ ಹೆಸರು ಸೇರಿಸಲಾಗಿರಲಿಲ್ಲ. ಈ ಕಾರಣ ವಿದ್ಯಾರ್ಥಿ ಸಂಘ ಆಕ್ರೋಶ ವ್ಯಕ್ತಪಡಿಸಿತ್ತು. ಪುತ್ಥಳಿ ಅನಾವರಣ ಆಮಂತ್ರಣ ಪತ್ರಿಕೆ ಬಗ್ಗೆಯೂ ವಿವಾದವಿದೆ. ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆ, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಾಗವತ್ ಕರಾಡ್, ಸಚಿವ ಸಂದೀಪನ್ ಬುಮ್ರೆ, ಸಚಿವ ಅಬ್ದುಲ್ ಸತ್ತಾರ್, ಉದಯ್ ಸಾಮಂತ್, ಅತುಲ್ ಸಾವೇ ಆಹ್ವಾನದಲ್ಲಿದ್ದರೆ, ಮತ್ತೊಂದೆಡೆ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಅವರ ಹೆಸರು ಇರಲಿಲ್ಲ. ಇದಲ್ಲದೇ ವಿದ್ಯಾರ್ಥಿ ಸಂಘಟನೆಗಳಿಗೆ ಆಹ್ವಾನ ಪತ್ರಿಕೆ ನೀಡದಿರುವ ಬಗ್ಗೆ ವಾಗ್ವಾದ ನಡೆದಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.