ವೃದ್ಧಾಪ್ಯದಲ್ಲಿ ಖಚಿತ ಆದಾಯ: 1000 ರೂ. ಹೂಡಿಕೆಯಿಂದ ಪ್ರತಿ ತಿಂಗಳು 20 ಸಾವಿರ ಪಿಂಚಣಿ!

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ನಿಮ್ಮ ಸಣ್ಣ ಮೊತ್ತದ ಹೂಡಿಕೆಯು ಭವಿಷ್ಯದಲ್ಲಿ ನಿಮ್ಮನ್ನು ಕೋಟ್ಯಧಿಪತಿಯನ್ನಾಗಿ ಮಾಡುತ್ತದೆ.

Written by - Puttaraj K Alur | Last Updated : Sep 17, 2022, 04:03 PM IST
  • ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ 20ನೇ ವಯಸ್ಸಿನಿಂದ ಹೂಡಿಕೆ ಪ್ರಾರಂಭಿಸಿ
  • ಪ್ರತಿ ತಿಂಗಳು ಕೇವಲ 1000 ರೂ.ಗಳನ್ನು ನಿರಂತರವಾಗಿ ಹೂಡಿಕೆ ಮಾಡಿ
  • ನಿವೃತ್ತಿಯ ವೇಳೆ ಪ್ರತಿ ತಿಂಗಳು 21,140 ರೂ. ಪಿಂಚಣಿ ಜೊತೆಗೆ ದೊಡ್ಡ ಮೊತ್ತದ ಲಾಭ ಪಡೆಯಿರಿ
ವೃದ್ಧಾಪ್ಯದಲ್ಲಿ ಖಚಿತ ಆದಾಯ: 1000 ರೂ. ಹೂಡಿಕೆಯಿಂದ ಪ್ರತಿ ತಿಂಗಳು 20 ಸಾವಿರ ಪಿಂಚಣಿ!    title=
ರಾಷ್ಟ್ರೀಯ ಪಿಂಚಣಿ ಯೋಜನೆ

ನವದೆಹಲಿ: ನೀವು ಯಾವುದಾದರೂ ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ಇಂದು ನಾವು ಒಂದು ಉತ್ತಮ ಸರ್ಕಾರಿ ಯೋಜನೆಯ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇಲ್ಲಿ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಸುಂದರ ವೃದ್ಧಾಪ್ಯವನ್ನು ಕಳೆಯಬಹುದು. ನಿವೃತ್ತಿಯ ನಂತರ ಈ ಯೋಜನೆ ನಿಮಗೆ ಹೆಚ್ಚು ಉಪಯೋಗವಾಗಬಹುದು. ಈ ಯೋಜನೆಯಿಂದ ನೀವು ಉತ್ತಮ ಪಿಂಚಣಿ ಪಡೆಯುತ್ತೀರಿ. ನಿವೃತ್ತಿಯ ನಂತರವೂ ನೀವು ನಿಯಮಿತ ಆದಾಯ ಗಳಿಸುತ್ತೀರಿ. ಈ ವಿಶೇಷ ಯೋಜನೆಯ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಹೂಡಿಕೆಯಲ್ಲಿ ಯಾವುದೇ ಅಪಾಯವಿಲ್ಲ

ನಾವು ರಾಷ್ಟ್ರೀಯ ಪಿಂಚಣಿ ಯೋಜನೆ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಸರ್ಕಾರಿ ಯೋಜನೆಯಾಗಿದ್ದು, ವಿಶೇಷವಾಗಿ ವೃದ್ಧರಿಗೆ ಅನುಕೂಲ ಕಲ್ಪಿಸಲೆಂದೇ ರೂಪಿಸಲಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಯಾವುದೇ ಅಪಾಯವಿಲ್ಲ. ಈ ಯೋಜನೆಯನ್ನು ಜನವರಿ 2004ರಲ್ಲಿ ಸರ್ಕಾರಿ ನೌಕರರಿಗಾಗಿ ಪ್ರಾರಂಭಿಸಲಾಯಿತು. ನಂತರ 2009ರಲ್ಲಿ ಇದನ್ನು ಎಲ್ಲಾ ವರ್ಗದ ಜನರಿಗಾಗಿ ತೆರೆಯಲಾಯಿತು. ಈ ಯೋಜನೆಯಡಿ ನಿಮ್ಮ ಕೆಲಸದ ವೇಳೆ ನೀವು ದೀರ್ಘಾವಧಿಯವರೆಗೆ ಹೂಡಿಕೆ ಮಾಡಬೇಕು. ಈ ಯೋಜನೆಯಲ್ಲಿ ನೀವು ವರ್ಷಾಶನದಲ್ಲಿ ಶೇ.40 ಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕು. ವರ್ಷಾಶನದ ಮೊತ್ತದಿಂದ ನೀವು ನಂತರ ಪಿಂಚಣಿ ಪಡೆಯುತ್ತೀರಿ.

ಇದನ್ನೂ ಓದಿಸೆನ್ಸೆಕ್ಸ್‌ನಲ್ಲಿ ಭಾರಿ ಕುಸಿತ : 17,500 ನಿಫ್ಟಿ ನಷ್ಟದೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ

20 ಸಾವಿರ ರೂ. ಪಿಂಚಣಿ ಸಿಗಲಿದೆ

ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಕೇವಲ 1000 ರೂ.ಗಳ ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು. 18 ರಿಂದ 70 ವರ್ಷದೊಳಗಿನವರು ಈ ಯೋಜನೆಯ ಲಾಭ ಪಡೆಯಬಹುದು. ನೀವು 20ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ತಿಂಗಳಿಗೆ 1000 ರೂ. ಹೂಡಿಕೆ ಮಾಡಬೇಕು. ನೀವು ಮಾಡಿದ ಹೂಡಿಕೆಗೆ ವರ್ಷಕ್ಕೆ ಶೇ.25-40ರಷ್ಟು ರಿಟರ್ನ್ಸ್ ದೊರೆತರೆ ನೀವು ಪ್ರತಿ ತಿಂಗಳು 21,140 ರೂ. ಪಿಂಚಣಿ ಪಡೆಯುತ್ತೀರಿ. ಇದಲ್ಲದೆ ನೀವು ಪ್ರತಿ ತಿಂಗಳು ನಿರಂತರವಾಗಿ ಹೂಡಿಕೆ ಮಾಡುತ್ತಲೇ ಬಂದರೆ ನಿವೃತ್ತಿ ವೇಳೆಗೆ ದೊಡ್ಡ ಮೊತ್ತವನ್ನು ಪಡೆಯುವಿರಿ.

ನೀವು ಈ ಪ್ರಯೋಜನಗಳನ್ನು ಪಡೆಯುತ್ತೀರಿ

  • ನೀವು NPSನಲ್ಲಿ ಹೂಡಿಕೆ ಮಾಡಿದರೆ ಅಂತಿಮ ಹಿಂಪಡೆಯುವಿಕೆಯ ಮೇಲೆ ಶೇ.60ರಷ್ಟು ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.
  • NPS ಖಾತೆಯಲ್ಲಿನ ಕೊಡುಗೆ ಮಿತಿಯು ಶೇ.14ರಷ್ಟು ಆಗಿರುತ್ತದೆ
  • ವರ್ಷಾಶನದ ಖರೀದಿಯಲ್ಲಿ ಹೂಡಿಕೆ ಮಾಡಿದ ಮೊತ್ತವು ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿಯಿಂದ ಕೂಡಿರುತ್ತದೆ
  • ಯಾವುದೇ NPS ಚಂದಾದಾರರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80CCD(1) ಅಡಿಯಲ್ಲಿ ಒಟ್ಟು ಆದಾಯದ ಶೇ.10 ರವರೆಗೆ ತೆರಿಗೆ ಕಡಿತವದ ಲಾಭ ಪಡೆಯಬಹುದು. ಇದು ಸೆಕ್ಷನ್ 80CCE ಅಡಿ 1.5 ರೂ.ಗಳ ಒಟ್ಟು ಮಿತಿಗೆ ಒಳಪಟ್ಟಿರುತ್ತದೆ.
  • ಚಂದಾದಾರರು ಸೆಕ್ಷನ್ 80CCE ಅಡಿಯಲ್ಲಿ 50 ಸಾವಿರ ರೂ.ವರೆಗೆ ಹೆಚ್ಚುವರಿ ಕಡಿತದ ಲಾಭ ಪಡೆಯಬಹುದು.

ಇದನ್ನೂ ಓದಿ: TATA SUV: ಮತ್ತೊಂದು ಅದ್ಭುತ SUV ಬಿಡುಗಡೆ ಮಾಡಿದ ಟಾಟಾ, ಬೆಲೆ & ವೈಶಿಷ್ಟ್ಯ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News