ನವದೆಹಲಿ: ದೇಶದ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ ಕೇಂದ್ರ ಸರ್ಕಾರ ಸದ್ಯದಲ್ಲೇ ಮತ್ತೆ ಹಣ ಹಾಕಲಿದೆ. ಈ ವಿಷಯವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ 'ಕಿಸಾನ್ ಕಲ್ಯಾಣ್' ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡುವಾಗ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

'ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು (ಡಿ. 25) ನಾನು ಮತ್ತೆ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದೇನೆ. ಅದೇ ದಿನ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮತ್ತೊಂದು ಕಂತಿನ ಹಣವನ್ನು ದೇಶದ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು' ಎಂದು ಪ್ರಧಾನಿ ಮೋದಿ(PM Modi) ಹೇಳಿದರು.


ರೈಲ್ವೆ ಪ್ರಯಾಣದಲ್ಲಿ ಇನ್ಮುಂದೆ ಇರಲ್ಲ ವೇಟಿಂಗ್​ ಲಿಸ್ಟ್! ಯಾಕೆ ಗೊತ್ತಾ?


ಪ್ರತಿ ವರ್ಷ ರೈತರಿಗೆ ತಲಾ 6 ಸಾವಿರ ರೂ.ಗಳನ್ನು ಕೇಂದ್ರ ಸರ್ಕಾರ ಮೂರು ಕಂತುಗಳಲ್ಲಿ ನೀಡುತ್ತಿದೆ. ಅದರ ಒಂದು ಕಂತಾಗಿ ತಲಾ 2 ಸಾವಿರ ರೂ.ಗಳು ಡಿ. 25ರಂದು ರೈತರ ಖಾತೆಗಳಿಗೆ ಜಮಾ ಆಗಲಿವೆ. ಇದೇ ವಿಷಯವನ್ನು ಪ್ರಧಾನಿ ಟ್ವಿಟರ್ ಮೂಲಕವೂ ಸ್ಪಷ್ಟಪಡಿಸಿದ್ದಾರೆ. 2019ರಲ್ಲಿ ಮೋದಿ ಈ ಯೋಜನೆಯನ್ನು ಆರಂಭಿಸಿದ್ದಾರೆ. ಪ್ರಸ್ತುತ 14.5 ಕೋಟಿ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.


'ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ': ರೈತರಿಗೆ ಪ್ರಧಾನಿ ಮೋದಿ ಮನವಿ


ಇದೇ ವೇಳೆ ಮೂರು ಕೃಷಿ ಕಾನೂನುಗಳ ಬಗ್ಗೆ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಪ್ರಧಾನಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿಯೂ ಇದೇ ಕಾನೂನಿನ ಬಗ್ಗೆ ಉಲ್ಲೇಖಿಸಿ ಇದೀಗ ರೈತರನ್ನು ದಾರಿ ತಪ್ಪಿಸಬಾರದು ಎಂದು ರಾಜಕೀಯ ಪಕ್ಷಗಳಿಗೆ ಹೇಳಿದರು.


PUBG Mobile India Relaunch:ರೀಲಾಂಚ್ ಕುರಿತು RTI ಗೆ ಉತ್ತರಿಸಿದ ಸರ್ಕಾರ ಹೇಳಿದ್ದೇನು?