PUBG Mobile India Relaunch:ರೀಲಾಂಚ್ ಕುರಿತು RTI ಗೆ ಉತ್ತರಿಸಿದ ಸರ್ಕಾರ ಹೇಳಿದ್ದೇನು?

PUBG Mobile India Relaunch:ದೀಪಾವಳಿ ಹಬ್ಬದ ಕೆಲ ದಿನಗಳು ಮೊದಲು PUBG ತನ್ನ ಅಧಿಕೃತ ಫೇಸ್ ಬುಕ್ ಪುಟದಲ್ಲಿ PUBG Mobile India ಅನ್ನು ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಾಗುವುದು ಎಂದು ಘೋಷಣೆ ಮಾಡಿತ್ತು.

Written by - Nitin Tabib | Last Updated : Dec 18, 2020, 06:05 PM IST
  • PUBG ರೀಲಾಂಚ್ ಕುರಿತು ಪ್ರಕಟಗೊಂಡ ವರದಿ.
  • ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ.
  • ಸರ್ಕಾರ ಹೇಳಿದ್ದೇನು? ಇಲ್ಲಿದೇ ವಿವರ.
PUBG Mobile India Relaunch:ರೀಲಾಂಚ್ ಕುರಿತು RTI ಗೆ ಉತ್ತರಿಸಿದ ಸರ್ಕಾರ ಹೇಳಿದ್ದೇನು? title=
PUBG Mobile India Relaunch (Photo: File Image)

ನವದೆಹಲಿ: PUBG Mobile India Relaunch: ಕಳೆದ ಹಲವು ತಿಂಗಳಿನಿಂದ ಮೊಬೈಲ್ ಗೇಮ್ಸ್ ಪ್ರಿಯರು PUBG ಆಟ ವಾಪಸಾತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇತ್ತೆಚೆಗಷ್ಟೇ KRAFTON, ಭಾರತದಲ್ಲಿ PUBG ರಿಲಾಂಚ್ ಉಲ್ಲೇಖ ಕೂಡ ಮಾಡಿ, ಗೇಮ್ಸ್ ಪ್ರಿಯರಲ್ಲಿ ಭಾರಿ ಭರವಸೆ ಮೂಡಿಸಿತ್ತು. ಆದರೆ, ಇದೀಗ ಈ ಆಟದ ಭಾರತ ಬಿಡುಗಡೆಯ ಕುರಿತು ನಿರಾಶಾಜನಕ ಸುದ್ದಿಯೊಂದು ಹೊರಬಂದಿದೆ. ರೈಟ್ ಟು ಇನ್ಫಾರ್ಮಶನ್ ಅಡಿ ಕೇಳಲಾಗಿರುವ ಮಾಹಿತಿಗೆ ಸರ್ಕಾರ ಬೇರೆಯೇ ಮಾಹಿತಿ ನೀಡಿದೆ.

ಇದನ್ನು ಓದಿ-ಮರು ಪ್ರಾರಂಭದ ನಿರೀಕ್ಷೆಯಲ್ಲಿರುವ PUBG Mobile India ಗೆ ಕಹಿ ಸುದ್ದಿ ...!

PUBG ಮರುಬಿಡುಗಡೆಗೆ ಅನುಮತಿ ನಿರಾಕರಿಸಲಾಗಿದೆ
RTI ನಿಂದ ಕೇಳಲಾಗಿರುವ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಕೇಂದ್ರ ಸರ್ಕಾರ PUBG ಆಟದ ಮರುಬಿಡುಗಡೆಗೆ ಸರ್ಕಾರ ಇದುವರೆಗೆ ಯಾವುದೇ ಅನುಮತಿಯನ್ನು ನೀಡಿಲ್ಲ. ನಮ್ಮ ಸಹಯೋಗಿ ವೆಬ್ ಸೈಟ್ ನಲ್ಲಿ dnaindia.com ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ PUBG ಮರುಬಿಡುಗಡೆಗೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆಗೆ ಅನುಮತಿ ನೀಡಲಾಗಿಲ್ಲ.

ಇದನ್ನು ಓದಿ- PUBG ಗೆ ಟಕ್ಕರ್ ನೀಡಿದ FAU-G: ಮೂರೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ನೋಂದಣಿ

ಯಾವುದೇ ಆಪ್ ಗೆ ವಿಶೇಷ ರಿಯಾಯಿತಿ ನೀಡಲಾಗುವುದಿಲ್ಲ
ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಸರ್ಕಾರ ಚೀನಾ ಮೂಲದ ಒಟ್ಟು 118 ಆಪ್ ಗಳ ಮೇಲೆ ಸಂಪೂರ್ಣ ನಿಷೇಧ ವಿಧಿಸಿದೆ. ಹೀಗಾಗಿ ಯಾವುದೇ ಒಂದು ಆಪ್ ಗೆ ವಿಶೇಷ ರಿಯಾಯಿತಿ ನೀಡುವುದು ಅಥವಾ ನಿಯಮಗಳಲ್ಲಿ ಬದಲಾವಣೆ ಮಾಡುವುದು ಸಂಭವವಿಲ್ಲ. ಹೀಗಾಗಿ PUBG Mobile India ಮರುಬಿಡುಗಡೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನು ಓದಿ- PUBG Mobile India ವೆಬ್ ಸೈಟ್ ಮೇಲೆ ಕಾಣಿಸಿಕೊಂಡ Download Link! ನಿಜಾನಾ?

ದೀಪಾವಳಿ ಹಬ್ಬದ ಕೆಲ ದಿನಗಳು ಮೊದಲು PUBG ತನ್ನ ಅಧಿಕೃತ ಫೇಸ್ ಬುಕ್ ಪುಟದಲ್ಲಿ PUBG Mobile India ಅನ್ನು ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಾಗುವುದು ಎಂದು ಘೋಷಣೆ ಮಾಡಿತ್ತು. ಅಷ್ಟೇ ಅಲ್ಲ ಕಂಪನಿ ಫೇಸ್ ಬುಕ್ ಮೇಲೆ PUBG Mobile India ಅಧಿಕೃತ ಪುಟವನ್ನು ಸಹ ತೆರೆದಿತ್ತು. ಇದರ ಜೊತೆಗೆ ಕಂಪನಿ ಭಾರತದಲ್ಲಿ ಶಾಖೆ ತೆರೆಯುವುದಾಗಿ ಕೂಡ ಹೇಳಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದುಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ

Android Link - https://bit.ly/3hDyh4G

Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News