PMSBY Scheme : ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 1 ರೂ. ಠೇವಣಿ ಇಡಿ 2 ಲಕ್ಷ ಪಡೆಯಿರಿ: ಹೇಗೆ ವಿವರಗಳಿಗೆ ಇಲ್ಲಿ ನೋಡಿ
ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಪ್ರಾರಂಭಿಸಿತ್ತು. ಪಿಎಂಎಸ್‌ಬಿವೈ ವಾರ್ಷಿಕ ಪ್ರೀಮಿಯಂ ಕೇವಲ 12 ರೂ. ಇದರ ಪ್ರೀಮಿಯಂ ಅನ್ನು ಮೇ ತಿಂಗಳ ಕೊನೆಯಲ್ಲಿ ಠೇವಣಿ ಇಡಲಾಗುತ್ತದೆ.
ನವದೆಹಲಿ : ಅನೇಕ ಲಾಭದಾಯಕ ಯೋಜನೆಗಳನ್ನು ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗಾಗಿ ಜಾರಿಗೆ ತಂದಿದೆ. ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಕೂಡ ಅಂತಹ ಒಂದು ಸೂಪರ್ ಹಿಟ್ ಸ್ಕೀಮ್ ಆಗಿದೆ, ಇದರ ಅಡಿಯಲ್ಲಿ ನೀವು ಪ್ರತಿ ತಿಂಗಳು ಕೇವಲ ಒಂದು ರೂಪಾಯಿ ಅಥವಾ ವರ್ಷದಲ್ಲಿ ಕೇವಲ 12 ರೂಪಾಯಿಗಳನ್ನು ಠೇವಣಿ ಇರಿಸಿ ಪಡೆಯಿರಿ 2 ಲಕ್ಷ ರೂಪಾಯಿಗಳ ವಿಮೆ ಪಡೆಯಬಹುದು. ಈ ಯೋಜನೆಯು ಜೀವ ವಿಮೆಯನ್ನು ಕಡಿಮೆ ಪ್ರೀಮಿಯಂನಲ್ಲಿ ಒದಗಿಸುತ್ತದೆ. ಅದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳೋಣ.
ಮೇ ತಿಂಗಳಲ್ಲಿ ಪ್ರೀಮಿಯಂ :
ಗಮನಿಸಬೇಕಾದ ಸಂಗತಿಯೆಂದರೆ, ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ(PMSBY)ಯನ್ನು ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಪ್ರಾರಂಭಿಸಿತ್ತು. ಪಿಎಂಎಸ್‌ಬಿವೈ ವಾರ್ಷಿಕ ಪ್ರೀಮಿಯಂ ಕೇವಲ 12 ರೂ. ಇದರ ಪ್ರೀಮಿಯಂ ಅನ್ನು ಮೇ ತಿಂಗಳ ಕೊನೆಯಲ್ಲಿ ಠೇವಣಿ ಇಡಲಾಗುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಮೊತ್ತವನ್ನು ಮೇ 31 ರಂದು ನಿಮ್ಮ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಆದ್ದರಿಂದ ನೀವು PMSBY ತೆಗೆದುಕೊಂಡಿದ್ದರೆ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಇಡಬೇಡಿ ಎಂಬುದನ್ನು ನೆನಪಿನಲ್ಲಿಡಿ.
ಇದನ್ನೂ ಓದಿ : 7th Pay Commission : ಕೇಂದ್ರ ನೌಕರರ DA ಕುರಿತು ಬಿಗ್ ನ್ಯೂಸ್ : ಸೆಪ್ಟೆಂಬರ್‌ನಲ್ಲಿ ಸಿಗಲಿದೆ ಫುಲ್ ವೇತನ!
PMSBY ನಿಯಮಗಳು ಮತ್ತು ಷರತ್ತುಗಳು :
ಪಿಎಂಎಸ್‌ಬಿವೈ ಯೋಜನೆಯ ಪ್ರಯೋಜನಗಳಿಗಾಗಿ ಕೆಲವು ಷರತ್ತುಗಳನ್ನು ನೀಡಲಾಗಿದೆ. ಇದರ ಲಾಭ ಪಡೆಯಲು, ಅರ್ಜಿದಾರರ ವಯಸ್ಸನ್ನು 18-70 ವರ್ಷ ಎಂದು ನಿಗದಿಪಡಿಸಲಾಗಿದೆ. ಈ ಯೋಜನೆಯ ವಾರ್ಷಿಕ ಪ್ರೀಮಿಯಂ(Annual Premium) ಕೇವಲ 12 ರೂ. ಅಂದರೆ ತಿಂಗಳಿಗೆ ಕೇವಲ 1 ರೂ. ಪಿಎಂಎಸ್‌ಬಿವೈ ಪಾಲಿಸಿಯ ಪ್ರೀಮಿಯಂ ಅನ್ನು ನೇರವಾಗಿ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ, ಆದ್ದರಿಂದ ಬಾಕಿ ಹಣವನ್ನು ಬ್ಯಾಂಕಿನಲ್ಲಿ ಇರಿಸಿ. ಇದಲ್ಲದೆ, ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ಬ್ಯಾಂಕ್ ಖಾತೆಯನ್ನು ಪಿಎಂಎಸ್ಬಿವೈ ಜೊತೆ ಸಂಪರ್ಕಿಸಲಾಗಿದೆ. ಈ ಯೋಜನೆಯಡಿ, ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ ವಿಮೆಯನ್ನು ಖರೀದಿಸುವ ಗ್ರಾಹಕರ ಸಾವಿನ ಮೇಲೆ ಅವಲಂಬಿತರಿಗೆ 2 ಲಕ್ಷ ರೂ.
ಇದನ್ನೂ ಓದಿ : Coronavirus Kappa Variant In India: Delta+ ಬಳಿಕ ಇದೀಗ ಕಪ್ಪಾ ವೇರಿಯಂಟ್ ಆತಂಕ, ರಾಜಸ್ಥಾನದಲ್ಲಿ 11 ಪ್ರಕರಣಗಳು ಪತ್ತೆ
ಈ ಯೋಜನೆಯ ಲಾಭ ಪಡೆಯಲು, ನೀವು ಯಾವುದೇ ಬ್ಯಾಂಕ್ ಶಾಖೆಗೆ(Bank Branch) ಭೇಟಿ ನೀಡುವ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ನವರು ಪಿಎಂಎಸ್ಬಿವೈ ಯೋಜನೆಯ ಹಣವನ್ನು ಮನೆ ಮನೆಗೆ ತೆರಳಿ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ನೀವು ವಿಮಾ ಏಜೆಂಟರನ್ನು ಸಹ ಸಂಪರ್ಕಿಸಬಹುದು. ಸರ್ಕಾರಿ ವಿಮಾ ಕಂಪನಿಗಳು ಮತ್ತು ಅನೇಕ ಖಾಸಗಿ ವಿಮಾ ಕಂಪನಿಗಳು ಸಹ ಈ ಯೋಜನೆಯನ್ನು ತುಂಬಿಕೊಳ್ಳುತ್ತಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ