ಜೈಪುರ್ : Coronavirus Kappa Variant In India - ರಾಜಸ್ಥಾನದಲ್ಲಿ (Rajasthan) ಕೊರೊನಾ ವೈರಸ್ನ ಕಪ್ಪಾ ರೂಪಾಂತರಿ (Covid-19 Kappa Variant) ಸೋಂಕಿನ 11 ಪ್ರಕರಣಗಳು ಬೆಳಕಿಗೆ ಬಂದಿದ್ದು ಇದೀಗ ಆತಂಕ ಹೆಚ್ಚಿಸಿದೆ. ರಾಜ್ಯದ ಆರೋಗ್ಯ ಸಚಿವ ಡಾ. ರಘು ಶರ್ಮಾ ಮಂಗಳವಾರ ಈ ಮಾಹಿತಿ ನೀಡಿದ್ದಾರೆ. ಕಪ್ಪಾ ಕೊರೊನಾ ವೈರಸ್ ಸೋಂಕಿಗೆ ಗುರಿಯಾದ 11 ರೋಗಿಗಳಲ್ಲಿ ನಾಲ್ವರು ಅಲ್ವಾರ್ ಹಾಗೂ ಜೈಪುರ್ ಜಿಲ್ಲೆಯವರಾಗಿದ್ದರೆ, ಇಬ್ಬರು ಬಾರ್ಮರ್ ಹಾಗೂ ಒಬ್ಬರು ಬಿಲ್ವಾರಾ ಜಿಲ್ಲೆಗೆ ಸೇರಿದವರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಜಿನೋಮ್ ಸಿಕ್ವೆನ್ಸಿಂಗ್ (Genome Sequencing) ಬಳಿಕ ಈ ಪ್ರಕರಣಗಳು ದೃಢಪಟ್ಟಿವೆ ಎಂದು ಅವರು ಹೇಳಿದ್ದಾರೆ.
ನಂತರ ಕಪ್ಪಾ ರೂಪಾಂತರಿಯ ಅಪಾಯದ ಕುರಿತು ಮಾತನಾಡಿರುವ ಆರೋಗ್ಯ ಸಚಿವರು, ಇದು ಡೆಲ್ಟಾ ರೂಪಾಂತರಿಗಿಂತ (Covid-19 Delta Variant) ಕಡಿಮೆ ಮಾರಕವಾಗಿದೆ ಎಂದು ಹೇಳಿದ್ದಾರೆ. ರಾಜಸ್ಥಾನದಲ್ಲಿ ಕೊರೊನಾ ವೈರಸ್ (Covid-19) ಸೋಂಕಿನ 28 ಹೊಸ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯ ರಾಜಧಾನಿಯಲ್ಲಿ ಒಟ್ಟು 613 ಪ್ರಕರಣಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಕ್ಕೂ ಮೊದಲು ಉತ್ತರ ಪ್ರದೇಶದ (Uttar Pradesh) ಲಖನೌನ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನಲ್ಲಿ ಕಪ್ಪಾ ರೂಪಾಂತರಿಯ ಎರಡು ಪ್ರಕರಣಗಳು ಪತ್ತೆಯಾಗಿದ್ದವು.
ಇದನ್ನೂ ಓದಿ-Global Home Price Index 2021: ಭಾರತದಲ್ಲಿ ಮನೆಗಳ ಬೆಲೆಗಳಲ್ಲಿ ಭಾರಿ ಕುಸಿತ, ನಮ್ಮ ಬೆಂಗಳೂರಿನಲ್ಲಿ ಎಷ್ಟು ಕುಸಿತ?
ರಾಜಸ್ಥಾನದ ಕುರಿತು ಹೇಳುವುದಾದರೆ, ರಾಜ್ಯ ಆರೋಗ್ಯ ಇಲಾಖೆ (Health Department) ಮಂಗಳವಾರ ವೈದ್ಯಕೀಯ ಬುಲೆಟಿನ್ ಹೊರಡಿಸಿದ್ದು, ಈ ಬುಲೆಟಿನ್ ನಲ್ಲಿ ಕಳೆದ 24ಗಂಟೆಗಳಲ್ಲಿ 28 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ, ಮಹಾಮಾರಿಯ ಕಾರಣ ರಾಜ್ಯದಲ್ಲಿ ಯಾವುದೇ ಹೊಸ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಈ ಹೊಸ ಪ್ರಕರಣಗಳು ಒಳಗೊಂಡಂತೆ ರಾಜ್ಯದಲ್ಲಿ ಕೊರೊನಾ ವೈರಸ್ (Coronavirus) ಸೋಂಕಿಗೆ ಗುರಿಯಾದವರ ಒಟ್ಟು ಸಂಖ್ಯೆ 953,187ಕ್ಕೆ ತಲುಪಿದೆ. ಅಂಕಿ-ಅಂಶಗಳ ಪ್ರಕಾರ ಒಟ್ಟು 8,945 ಜನರು ಈ ಮಾರಕ ಸೋಂಕಿಗೆ ಬಲಿಯಾಗಿದ್ದರೆ, 613 ಸಕ್ರೀಯ ಪ್ರಕರಣಗಳಿವೆ.
ಇದನ್ನೂ ಓದಿ-WHO ಎಚ್ಚರಿಕೆ: ಕೋವಿಡ್ -19 ರ ಹೊಸ ರೂಪ 'ಡೆಲ್ಟಾ' ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ