ನವದೆಹಲಿ: ತಿಂಗಳ ಹಿಂದಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಪ್ರಶಾಂತ್ ಕಿಶೋರ್ ಸೇರುವ ಬಗ್ಗೆ ಸಾಕಷ್ಟು ವದಂತಿಗಳು ಹರಡಿದ್ದವು, ಆದರೆ ಕಾಲಾಂತರದಲ್ಲಿ ಅವರು ಕಾಂಗ್ರೆಸ್ ಗೆ ಸೇರುವ ನಿರ್ಧಾರದಿಂದ ಹಿಂದೆ ಸರಿದಿದ್ದರು.ಈಗ ಅವರು ತಾವು ಕಾಂಗ್ರೆಸ್ ಪಕ್ಷದ ಜೊತೆ ಯಾಕೆ ಕೆಲಸ ಮಾಡುವುದಿಲ್ಲ ಎನ್ನುವುದರ ಕುರಿತಾಗಿ ಬಹಿರಂಗವಾಗಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ತಮ್ಮ ತವರು ರಾಜ್ಯ ಬಿಹಾರದಲ್ಲಿ ಪರ್ಯಾಯ ಸರ್ಕಾರದ ರಚನೆಯ ಕುರಿತಾಗಿ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಲು ಮುಂದಾಗಿರುವ ಪ್ರಶಾಂತ್ ಕಿಶೋರ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಎಂದಿಗೂ ಕಾಂಗ್ರೆಸ್ ದೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಕೈ ಮುಗಿದು ಹೇಳಿದ್ದಾರೆ.


​ಇದನ್ನು ಓದಿ: ‘ವಿಕ್ರಾಂತ್ ರೋಣ’ಗೆ ಸಲ್ಮಾನ್ ಸಾಥ್ : ಬಾಲಿವುಡ್ ಅಂಗಳದಲ್ಲಿ ಕಿಚ್ಚನ ಹವಾ!


'2015 ರಲ್ಲಿ ಬಿಹಾರದಲ್ಲಿ ಗೆದ್ದೆವು. 2017ರಲ್ಲಿ ಪಂಜಾಬ್ ನಲ್ಲಿ ಗೆದ್ದೆವು. 2019 ರಲ್ಲಿ ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ಗೆದ್ದೆವು.ತಮಿಳುನಾಡು ಮತ್ತು ಬಂಗಾಳದಲ್ಲಿ ಗೆದ್ದೆವು.11 ವರ್ಷಗಳಲ್ಲಿ ನಾವು ಸೋತಿದ್ದು ಒಂದೇ ಒಂದು ಚುನಾವಣೆ.ಅದೂ 2017ರ ಉತ್ತರ ಪ್ರದೇಶ ಚುನಾವಣೆ.ಅದಕ್ಕಾಗಿಯೇ ನಾನು ಎಂದಿಗೂ ಕಾಂಗ್ರೆಸ್‌ನೊಂದಿಗೆ ಕೆಲಸ ಮಾಡಬಾರದು ಎಂದು ನಿರ್ಧರಿಸಿದೆ' ಎಂದು ಪ್ರಶಾಂತ್ ಕಿಶೋರ್ ಕೈ ಮುಗಿದು ಹೇಳಿದರು.ಕಾಂಗ್ರೆಸ್ ಎಂದಿಗೂ ಒಗ್ಗಟ್ಟಾಗದ ಪಕ್ಷ ಹಾಗೂ ಈಗಿನ ಕಾಂಗ್ರೆಸ್ ನಾಯಕರು ಎಲ್ಲರನ್ನು ಮುಳುಗಿಸುತ್ತಾರೆ, ನಾನು ಹೋಗಿದ್ದಲ್ಲಿ ನಾನು ಕೂಡ ಮುಳುಗೇಳುತ್ತೇನೆ 'ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು.ಪ್ರೀತಿ, ಕಂಬನಿ, ಭಾವನೆಗಳ ಬೆಲೆ ಹೇಳಲಿದ್ದಾನೆ ನಮ್ಮ 'ಚಾರ್ಲಿ'..!


ಇದಕ್ಕೂ ಮೊದಲು, ರಾಜಸ್ಥಾನದ ಉದಯಪುರದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಚಿಂತನ್ ಶಿವರ್ ವನ್ನು ವೈಫಲ್ಯದ ಶಿಬಿರ ಹೇಳಿದ್ದಲ್ಲದೆ ಈ ವರ್ಷದ ಕೊನೆಯಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಪಕ್ಷವು ಹಿನ್ನೆಡೆಯನ್ನು ಅನುಭವಿಸಲಿದೆ ಎಂದು ಅವರು ಹೇಳಿದ್ದರು.


ಕಾಂಗ್ರೆಸ್ ಪುನರುಜ್ಜೀವನ ಯೋಜನೆ ಕುರಿತು ನಡೆದ ಚರ್ಚೆಯಲ್ಲಿ ಪ್ರಶಾಂತ್ ಕಿಶೋರ್ ಅವರು 600-ಸ್ಲೈಡ್ ಪ್ರಸ್ತುತಿಯನ್ನು ಹಿರಿಯ ನಾಯಕರ ಸಮ್ಮುಖದಲ್ಲಿ ಮಾಡಿದ್ದರು, ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ, ಕೊನೆಗೆ ಕಾಂಗ್ರೆಸ್ ಸೇರ್ಪಡೆಯಾಗುವ ನಿರ್ಧಾರದಿಂದ ಅವರು ಹಿಂದಕ್ಕೆ ಸರಿದಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ