Pre-wedding shoot: ಪ್ರೀ ವೆಡ್ಡಿಂಗ್ ಶೂಟ್ ವೇಳೆ ಜಲಪಾತದಲ್ಲಿ ಸಿಲುಕಿ ಒದ್ದಾಡಿದ ದಂಪತಿ..!
ರಾಜಸ್ಥಾನ್ ಮೂಲದ ಜೋಡಿ ತಮ್ಮ ವಿವಾಹಪೂರ್ವ ಫೋಟೋ ಶೂಟ್ ಮಾಡಲು ಹೋಗಿ ಸಾವಿನ ದವಡೆಗೆ ಸಿಲುಕಿ ಬದುಕುಳಿದಿದ್ದಾರೆ.
ಜೈಪುರ: ಪ್ರೀ ವೆಡ್ಡಿಂಗ್ ಶೂಟ್(Pre-Wedding Shoot) ವೇಳೆ ಅನೇಕ ದುರಂತಗಳು ನಡೆದಿರುವ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಅದ್ಭುತವಾಗಿ ಫೋಟೋಶೂಟ್ ಮಾಡಿಸಿಕೊಳ್ಳಲು ಹೋಗಿ ನವದಂಪತಿ ದುರಂತ ಅಂತ್ಯಕಂಡ ಅನೇಕ ಘಟನೆಗಳು ನಡೆದಿವೆ. ಆದರೂ ಜನರು ಎಚ್ಚೆತ್ತುಕೊಳ್ಳುತಿಲ್ಲ. ಪದೇ ಪದೇ ಈ ರೀತಿ ಘಟನೆಗಳು ಮರುಕಳಿಸುತ್ತಿದ್ದರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಅದೇ ರೀತಿಯ ಮತ್ತೊಂದು ಘಟನೆ ರಾಜಸ್ಥಾನದಲ್ಲಿ ನಡದಿದೆ.
ಹೌದು, ಅದೊಂದು ಸಾಹಸಮಯ ಪ್ರೀ ವೆಡ್ಡಿಂಗ್ ಶೂಟ್ ಆಗಿತ್ತು. ಆದರೆ ಈ ಫೋಟೋಶೂಟ್ ವೇಳೆ ಯಡವಟ್ಟಾಗಿಬಿಟ್ಟಿದೆ. ರಾಜಸ್ಥಾನ್ ಮೂಲದ ಜೋಡಿ ತಮ್ಮ ವಿವಾಹಪೂರ್ವ ಫೋಟೋ ಶೂಟ್ ಮಾಡಲು ಹೋಗಿ ಸಾವಿನ ದವಡೆಗೆ ಸಿಲುಕಿ ಬದುಕುಳಿದಿದ್ದಾರೆ. ಈ ಜೋಡಿ ತಮ್ಮ ಪ್ರಿ ವೆಡ್ಡಿಂಗ್ ಶೂಟ್ ಗೆ ಆಯ್ಕೆ ಮಾಡಿಕೊಂಡಿದ್ದು ಧುಮ್ಮಿಕ್ಕುವ ಜಲಪಾತ(Chulia Falls)ವನ್ನು. ನೀರಿನ ಪ್ರವಾಹವು ತುಂಬಾ ಹೆಚ್ಚಿದ್ದ ಕಾರಣ ಅದರಡಿ ಸಿಲುಕಿ ಪರದಾಡಿದ್ದಾರೆ. ಸುಮಾರು 3 ಗಂಟೆಗಳ ಕಾಲ ಕಾರ್ಯಾಚರಣೆ ಬಳಿಕ ಅವರನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ: Aadhaar Update: ಆಫ್‌ಲೈನ್‌ನಲ್ಲಿಯೂ ಮಾಡಬಹುದು ಆಧಾರ್ ವೆರಿಫಿಕೆಶನ್, ಈ ಕೆಲಸ ಮಾಡಿದರೆ ಸಾಕು
ಚಿತ್ತೋರ್‌ಗಢ(Chittorgarh)ದ ರಾವತ್‌ಭಟ ಪ್ರದೇಶದಲ್ಲಿರುವ ಚುಲಿಯಾ ಫಾಲ್ಸ್ ನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳುತ್ತಿದ್ದ ವೇಳೆ ಹರಿಯುವ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಈ ವೇಳೆ ಛಾಯಾಗ್ರಾಹಕ ಹೇಗೋ ಹೊರಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಮಾರು 3 ಗಂಟೆಗಳ ಕಾಲ ನಡೆದ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ನಾಗರಿಕ ರಕ್ಷಣಾ ತಂಡ(Civil Defence Team)ವು ಜೋಡಿ ಸೇರಿದಂತೆ ಇತರ ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ(ನ.9) ಬೆಳಿಗ್ಗೆ ರಾಣಾ ಪ್ರತಾಪ್ ಸಾಗರ್ ಅಣೆಕಟ್ಟಿನ ಗೇಟ್‌ಗಳನ್ನು ತೆರೆಯಲಾಗಿತ್ತು. ಪರಿಣಾಮ ಚುಲಿಯಾ ಜಲಪಾತದಲ್ಲಿ ಇದ್ದಕ್ಕಿದ್ದಂತೆ ನೀರಿನ ಹರಿವು ಹೆಚ್ಚಳವಾಗಿದೆ. ಈ ವೇಳೆ ಪ್ರೀ ವೆಡ್ಡಿಂಗ್ ಶೂಟ್ ಗೆಂದು ತೆರಳಿದ್ದ ಕೋಟಾದ ವರ ಆಶಿಶ್ ಗುಪ್ತಾ (29) ಮತ್ತು ವಧು ಶಿಖಾ (27), ಅವರ ಸ್ನೇಹಿತ ಹಿಮಾಂಶು (22) ಮತ್ತು ವಧುವಿನ ಸೊಸೆ ಮಿಲನ್ (18) ನೀರಿನ ಸೆಳೆತಕ್ಕೆ ಸಿಲುಕಿಕೊಂಡರು ಎಂದು ಪ್ರದೇಶದ ಎಸ್‌ಎಚ್‌ಒ ರಾಜಾರಾಮ್ ಗುರ್ಜರ್ ಹೇಳಿದ್ದಾರೆ.
ಇದನ್ನೂ ಓದಿ: Vodafone-Idea: Vi ಯ ಅಗ್ಗದ ಯೋಜನೆ, ಉಚಿತ ಕರೆ ಮತ್ತು ಇಂಟರ್ನೆಟ್‌ನೊಂದಿಗೆ ಸಿಗಲಿದೆ ಹಲವು ಪ್ರಯೋಜನ
ನವಜೋಡಿ ಮತ್ತು ಅವರ ಸ್ನೇಹಿತರು ಜಲಪಾತದ ಬಂಡೆಗಳ ಮೇಲೆ ಕುಳಿತುಕೊಂಡು ಫೋಟೋಶೂಟ್(Pre-wedding shoot) ಮಾಡಿಕೊಳ್ಳುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ನೀರಿನಮಟ್ಟ ಏರಲು ಪ್ರಾರಂಭಿಸಿದೆ. ಗಾಬರಿಗೊಂಡ ಛಾಯಾಗ್ರಾಹಕ ಅವರನ್ನು ನೀರಿನಿಂದ ಹೊರಗೆ ಬರುವಂತೆ ಕೇಳಿಕೊಂಡರೂ ಅವರು ಕಿವಿಗೊಡಲಿಲ್ಲ. ಛಾಯಾಗ್ರಾಹಕ ಹೇಗೋ ಹೊರಬಂದಿದ್ದಾನೆ, ಆದರೆ ಅವರ ಕ್ಯಾಮೆರಾ ನೀರಿನಲ್ಲಿ ಬಿದ್ದಿದೆ. ಬಳಿಕ ನಾಲ್ವರೂ ನೀರಿನ ಸೆಳೆತಕ್ಕೆ ಸಿಲುಕಿ ತಮ್ಮನ್ನು ರಕ್ಷಿಸುವಂತೆ ಜೋರಾಗಿ ಕಿರುಚಾಡಿದ್ದಾರೆ. ನೀರಿನಿಂದ ಹೊರಬಂದ ತಕ್ಷಣ ಛಾಯಾಗ್ರಾಹಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅದೃಷ್ಟವಶಾತ್ ನಾಲ್ವರು ಕೂಡ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಈ ನವಜೋಡಿ ಡಿಸೆಂಬರ್ 1 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ