Mukhyamantri Kanyadan Yojane: ಮಧ್ಯಪ್ರದೇಶದ ದಿಂಡೋರಿಯಲ್ಲಿ ಮುಖ್ಯಮಂತ್ರಿ ಕನ್ಯಾದಾನ ಯೋಜನೆಯಡಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಮದುವೆಗೆ ಆಗಮಿಸಿದ್ದ ಕೆಲ ಬಾಲಕಿಯರಿಗೆ ಗರ್ಭಧಾರಣೆ ಪರೀಕ್ಷೆ ನಡೆಸಲಾಗಿದ್ದು, ಈ ಕುರಿತು ideega ರಾಜಕೀಯ ವಿವಾದ ಭುಗಿಲೆದ್ದಿದೆ. ಸಾಮೂಹಿಕ ವಿವಾಹಕ್ಕೂ ಮುನ್ನ ಬಾಲಕಿಯರ ಗರ್ಭಧಾರಣೆ ಪರೀಕ್ಷೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಮಧ್ಯಪ್ರದೇಶ ಸರ್ಕಾರವನ್ನು ಗುರಿಯಾಗಿಸಿದೆ ಮತ್ತು ಪಿಸಿಸಿ ಮುಖ್ಯಸ್ಥ ಕಮಲ್ ನಾಥ್ ಅವರು ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. ಇದರೊಂದಿಗೆ, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಐ-ಎಂ) ಕೂಡ ಇದು ಮಹಿಳೆಯರಿಗೆ ಮಾಡಿದ ಅವಮಾನ ಎಂದು ಬಣ್ಣಿಸಿದೆ ಮತ್ತು ಇಡೀ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಡಿ.ಶರ್ಮಾ ಇದನ್ನು ಅಲ್ಲಗಳೆದಿದ್ದಾರೆ.


COMMERCIAL BREAK
SCROLL TO CONTINUE READING

ಬಾಲಕಿಯರಿಗೆ ಗರ್ಭಧಾರಣೆ ಪರೀಕ್ಷೆ 
ಏಪ್ರಿಲ್ 22 ರಂದು, ಮುಖ್ಯಮಂತ್ರಿ ಕನ್ಯಾದಾನ ಯೋಜನೆಯಡಿ ಮಧ್ಯಪ್ರದೇಶದ ದಿಂಡೋರಿಯಲ್ಲಿ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ, ಇದರಲ್ಲಿ 219 ಹುಡುಗಿಯರಿಗೆ ಗರ್ಭಧಾರಣೆಯ ಪರೀಕ್ಷೆಯನ್ನು ನಡೆಸಲಾಗಿದೆ. ಪರೀಕ್ಷೆಯ ನಂತರ ಗರ್ಭಿಣಿ ಎಂದು ಕಂಡುಬಂದ 4 ವಧುಗಳನ್ನು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸೇರಿಸಿಕೊಳ್ಳಲಾಗಿಲ್ಲ.  ಈ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಹೆಣ್ಣುಮಕ್ಕಳಿಗೆ ಗರ್ಭಧಾರಣೆ ಪರೀಕ್ಷೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಇದೀಗ ಹಲವು ರೀತಿಯ ಪ್ರಶ್ನೆಗಳು ಎದ್ದಿವೆ.


ಈ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ
ಆಡಳಿತವನ್ನು ಸಮರ್ಥಿಸಿಕೊಂಡ ದಿಂಡೋರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಕಾಸ್ ಮಿಶ್ರಾ, ಗಡಸರಾಯ್‌ನಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ 219 ಜೋಡಿಗಳಿಗೆ ಆನುವಂಶಿಕ ಕಾಯಿಲೆ 'ಸಿಕಲ್ ಸೆಲ್'ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 'ಸಿಕೆಲ್ ಸೆಲ್ ಕಾಯಿಲೆಯ ತನಿಖೆಯ ಸಮಯದಲ್ಲಿ, ವೈದ್ಯರು ನಾಲ್ವರು ಹುಡುಗಿಯರ ಗರ್ಭಧಾರಣೆಯ ಪರೀಕ್ಷೆಯನ್ನು ನಡೆಸಿದರು ಏಕೆಂದರೆ ಅವರು ತಮ್ಮ ಮಾಸಿಕ ಋತುಬಂಧ ನಿಂತುಹೋಗಿರುವ ಕುರಿತು ಮಾಹಿತಿ ನೀಡಿದ್ದರು. ಈ ಬಗ್ಗೆ ಆಡಳಿತ ಮಟ್ಟದಿಂದ ಯಾವುದೇ ಸೂಚನೆ ನೀಡಿಲ್ಲ. ಸಿಕೆಲ್ ಸೆಲ್ ರೋಗ ಪತ್ತೆಹಚ್ಚಲು ಯಾವ ವಿಧಾನಗಳು ಮತ್ತು ಪರೀಕ್ಷೆಗಳನ್ನು ನಡೆಸುತ್ತಾರೆ ಎಂಬುದು ವೈದ್ಯರಿಗೆ ಬಿಟ್ಟ ವಿಷಯ. ವೈದ್ಯರ ವರದಿ ನಂತರ, ಸಾಮೂಹಿಕ ವಿವಾಹದಲ್ಲಿ ಅಂತಹ ನಾಲ್ಕು ಜೋಡಿಗಳನ್ನು ಸೇರಿಸಲಾಗಿಲ್ಲ ಎಂದು ಹೇಳಿದ್ದಾರೆ.


 ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಕಮಲ್ ನಾಥ್
ಈ ಹಿನ್ನೆಲೆ ಇದೀಗ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿರುವ ಅವರು, ಯಾರ ಆದೇಶದ ಮೇರೆಗೆ ಮಧ್ಯಪ್ರದೇಶದ ಹೆಣ್ಣು ಮಕ್ಕಳನ್ನು ಈ ರೀತಿ ಅವಮಾನಿಸಲಾಗಿದೆ? ಎಂದು ಅವರು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪ್ರಶ್ನಿಸಿದ್ದು, ಈ ಸುದ್ದಿ ನಿಜವೇ ಎಂದು ಮುಖ್ಯಮಂತ್ರಿಯಿಂದಲೇ ತಿಳಿಯಬೇಕು. ಈ ಸುದ್ದಿ ನಿಜವೇ ಆಗಿದ್ದರೆ ಯಾರ ಆದೇಶದ ಮೇರೆಗೆ ಮಧ್ಯಪ್ರದೇಶದ ಹೆಣ್ಣುಮಕ್ಕಳಿಗೆ ಇಂತಹ ಘೋರ ಅವಮಾನ ಎಸಗಲಾಗಿದೆ? ಬಡವರ ಮತ್ತು ಬುಡಕಟ್ಟು ಸಮುದಾಯದ ಮಗಳಿಗೆ ಮುಖ್ಯಮಂತ್ರಿಗಳ ದೃಷ್ಟಿಯಲ್ಲಿ ಘನತೆ ಇಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ-Yogi Adityanath: ಅತೀತಕ್ಕೆ ಜಾರಿದ ಮಾಫಿಯಾಗಳು, ಯುಪಿ ಇದೀಗ ಸುರಕ್ಷತೆಯ ಪ್ರತೀಕ, ಸಹಾರನ್ಪುರ್ ನಲ್ಲಿ ಯೋಗಿಯ ಘರ್ಜನೆ


ಇದಕ್ಕೂ ಮುಂದುವರೆದು ಮಾತನಾಡಿರುವ ಅವರು, 'ಶಿವರಾಜ್ ಸರ್ಕಾರ ಕಾಲದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ವಿಷಯದಲ್ಲಿ ಮಧ್ಯಪ್ರದೇಶ ಈಗಾಗಲೇ ದೇಶದಲ್ಲಿ ಅಗ್ರಸ್ಥಾನದಲ್ಲಿದೆ. ಇಡೀ ಪ್ರಕರಣದ ಬಗ್ಗೆ ನ್ಯಾಯಯುತ ಮತ್ತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ನಾನು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸುತ್ತೇನೆ. ಈ ವಿಷಯವು ಗರ್ಭಧಾರಣೆಯ ಪರೀಕ್ಷೆಯ ಬಗ್ಗೆ ಮಾತ್ರವಲ್ಲ, ಇಡೀ ಸ್ತ್ರೀ ಜಾತಿಯ ಬಗ್ಗೆ ದುರುದ್ದೇಶಪೂರಿತ ಮನೋಭಾವದ ಬಗ್ಗೆಯೂ ಇದೆ ಎಂದು  ಅವರು ಹೇಳಿದ್ದಾರೆ.


ಇದನ್ನೂ ಓದಿ-Chardham Yatra 2023: ನಾಲ್ಕು ಧಾಮಗಳ ಯಾತ್ರೆಗೆ 17 ಲಕ್ಷ ಭಕ್ತಾದಿಗಳ ಹೆಸರು ನೋಂದಣಿ, ಸಿದ್ಧತೆ ಹೇಗಿದೆ ಇಲ್ಲಿ ತಿಳಿದುಕೊಳ್ಳಿ


ಈ ರೀತಿಯ ಘಟನೆಯನ್ನು ಬಿಜೆಪಿ ತಳ್ಳಿಹಾಕಿದೆ
ದಿಂಡೂರಿನಲ್ಲಿ ಮುಖ್ಯಮಂತ್ರಿ ಕನ್ಯಾದಾನ ಯೋಜನೆಯಡಿ ಹೆಣ್ಣು ಮಕ್ಕಳ ಗರ್ಭಧಾರಣೆ ಪರೀಕ್ಷೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಡಿ.ಶರ್ಮಾ ತಳ್ಳಿಹಾಕಿದ್ದಾರೆ. ಸಿಕಲ್ ಸೆಲ್ ಅನೀಮಿಯಾ ಬಗ್ಗೆ ಪರೀಕ್ಷೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ದಿಂಡೂರಿನ ಆಡಳಿತ ಮಂಡಳಿಯೂ ಈ ಸ್ಪಷ್ಟನೆ ನೀಡಿದೆ. ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಯನ್ನು ತೆಗೆದುಕೊಳ್ಳಲಾಗುವುದು. ಕಾಂಗ್ರೆಸ್ ನಾಯಕರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.