Narendra Modi vs Rahul Gandhi: ಚುನಾವಣಾ ಆಯೋಗವು ಈ ತಿಂಗಳು ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಲಿದೆ. ಇದಕ್ಕೂ ಮುನ್ನ ರಾಜಕೀಯ ಪಕ್ಷಗಳಲ್ಲಿ ಸಂಚಲನ ಹೆಚ್ಚಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕೆಲ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಒಡಿಶಾದಿಂದ ಪ್ರಯಾಣ ಬೆಳೆಸಿ ದಕ್ಷಿಣದ ಮೂಲಕ ಬಂಗಾಳ ತಲುಪಿದ್ದಾರೆ.


COMMERCIAL BREAK
SCROLL TO CONTINUE READING

ಬೆಳಗ್ಗೆ ಕೋಲ್ಕತ್ತಾದಲ್ಲಿ ದೇಶದ ಮೊದಲ ನೀರೊಳಗಿನ ಮೆಟ್ರೋವನ್ನು ಉದ್ಘಾಟಿಸಿದರು. ಜೊತೆಗೆ ಬರಾಸತ್‌ನಲ್ಲಿ ನಾರಿ ಶಕ್ತಿ ವಂಗನ್ ಅಭಿನಂದನ್ ಕಾರ್ಯಕ್ರಮಕ್ಕೆ ಕೂಡ ಮೋದಿ ಆಗಮಿಸಿದ್ದರು.


ಇದನ್ನೂ ಓದಿ: ಸಾಫ್ಟ್ವೇರ್ ಉನ್ನತೀಕರಣ: ರಾಜ್ಯದ ಎಲ್ಲಾ ಎಸ್ಕಾಂ ಆನ್ಲೈನ್ ಸೇವೆಗಳು 10 ದಿನಗಳ ಕಾಲ ಅಲಭ್ಯ


ಅಂದಹಾಗೆ ಈ ಮೂಲಕ ಪ್ರಧಾನಿ ಮೋದಿ ಲೋಕಸಭೆ ಗೆಲ್ಲಲು ಸಿದ್ಧತೆ ನಡೆಸುತ್ತಿದ್ದಾರೆ. ಬಂಗಾಳದಲ್ಲಿ ಆಯೋಜನೆಗೊಂಡ 'ನಾರಿ ಶಕ್ತಿ ಸಮ್ಮಾನ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಹಿಳೆಯರ ಕಲ್ಯಾಣಕ್ಕೆ ಮೋದಿ ಸರ್ಕಾರ ಎಂದೆಂದೂ ಬದ್ಧವಾಗಿರುತ್ತದೆ ಮಹಿಳೆಯರು ಪ್ರಗತಿಯಾದರೆ ದೇಶ ಪ್ರಗತಿಯಾಗುತ್ತದೆ” ಎಂಬುದನ್ನು ಒತ್ತಿ ಹೇಳಿದರು.


ಇತ್ತೀಚೆಗೆಯಷ್ಟೇ ಬಂಗಾಳದ ಸಂದೇಶಖಾಲಿಯಲ್ಲಿ ಟಿಎಂಸಿ ನಾಯಕ ಷಹಜಹಾನ್ ಶೇಖ್ ಎಂಬಾತ ಮಹಿಳೆಯರಿಗೆ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿತ್ತು. ಅಷ್ಟೇ ಅಲ್ಲದೆ, ಮಮತಾ ಸರ್ಕಾರವು ಆತನಿಗೆ ಶಿಕ್ಷೆ ನೀಡಿಲ್ಲ ಎಂದು ಆರೋಪಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ, ಪ್ರಧಾನಿ ಬಂಗಾಳದಲ್ಲಿ ಮಹಿಳಾ ಶಕ್ತಿ ವಂದನ್ ಕಾರ್ಯಕ್ರಮ ನಡೆಸಿ, ಮಹಿಳಾ ಮತವನ್ನು ಸೆಳೆಯಲು ಪ್ರಯತ್ನಿಸಿದ್ದಾರೆ.


ಈ ಕಾರ್ಯಕ್ರಮದ ಬಳಿಕ ಮೋದಿ ಬಿಹಾರಕ್ಕೆ ತೆರಳಲಿದ್ದಾರೆ. ಒಂದು ವಾರದೊಳಗೆ ಎರಡನೇ ಬಾರಿಗೆ ಪ್ರಧಾನಿ ಬಿಹಾರ ಪ್ರವಾಸ ಕೈಗೊಂಡಿದ್ದಾರೆ. ಮಧ್ಯಾಹ್ನ ಪಶ್ಚಿಮ ಚಂಪಾರಣ್ ಜಿಲ್ಲಾ ಕೇಂದ್ರ ಬೆಟ್ಟಿಯಾದಲ್ಲಿ 12,800 ಕೋಟಿ ರೂಪಾಯಿಗಳ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ.


ಚುನಾವಣಾ ಆಯೋಗವು ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲು ಮತ್ತು ಮಾದರಿ ನೀತಿ ಸಂಹಿತೆ ಜಾರಿಗೆ ಬರಲು ಕೆಲವೇ ದಿನಗಳು ಬಾಕಿ ಉಳಿದಿರುವಾಗ ಪ್ರಧಾನಿಯವರು ದೇಶದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡಿ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುತ್ತಿದ್ದಾರೆ.


ರಾಹುಲ್ ಗಾಂಧಿ ಮತ್ತೆ ಅಮೇಠಿಯಿಂದ ಸ್ಪರ್ಧೆ:


ಮತ್ತೊಂದೆಡೆ ಅಮೇಠಿಯಿಂದ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಇದೆ. ನವದೆಹಲಿಯಲ್ಲಿ ಸಭೆ ಮುಗಿಸಿ ಹಿಂತಿರುಗಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರದೀಪ್ ಸಿಂಘಾಲ್, ಅಮೇಠಿಯಿಂದ ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಭ್ಯರ್ಥಿ.  ಚುನಾವಣೆಗೆ ಸಿದ್ಧತೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. ಕಾರ್ಯಕರ್ತರು ತಮ್ಮ ಜವಾಬ್ದಾರಿಗಳನ್ನು ಪೂರೈಸಲು ತಯಾರಿ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ 2002 ರಿಂದ 2019 ರವರೆಗೆ ಅಮೇಥಿಯಿಂದ ಸಂಸದರಾಗಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಎದುರು ಸೋತಿದ್ದರು. ಪ್ರಸ್ತುತ ಅವರು ಕೇರಳದ ವಯನಾಡಿನ ಸಂಸದರಾಗಿದ್ದಾರೆ.


ಇಂದು ಭಾರತ್ ಜೋಡೋ ನ್ಯಾಯ್ ಯಾತ್ರೆಯ 53 ನೇ ದಿನ. ರಾಹುಲ್ ಗಾಂಧಿ ಯಾತ್ರೆಯೊಂದಿಗೆ ಮಧ್ಯಪ್ರದೇಶದ ಬದ್ನಾವರ್‌ ತಲುಪಿದ್ದಾರೆ.


ನಾಳೆ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಶ್ರೀನಗರದ ಬಕ್ಷಿ ಸ್ಟೇಡಿಯಂನಲ್ಲಿ ನಡೆಯುವ ಸಮಾರಂಭದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಕೃಷಿ-ಆರ್ಥಿಕತೆಯನ್ನು ಹೆಚ್ಚಿಸಲು ಸುಮಾರು 5,000 ಕೋಟಿ ರೂಪಾಯಿಗಳ 'ಸಂಯೋಜಿತ ಕೃಷಿ ಅಭಿವೃದ್ಧಿ ಕಾರ್ಯಕ್ರಮ'ವನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.


ಇದನ್ನೂ ಓದಿ:  ಕಾಂಗ್ರೆಸ್ ಅಭಿವೃದ್ಧಿ ನೋಡಿ ಬಿಜೆಪಿಯವರಿಗೆ ಭ್ರಮನಿರಸನವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್


ಸ್ವದೇಶ್ ದರ್ಶನ್ ಮತ್ತು ಪ್ರಸಾದ್ (Pilgrimage Rejuvenation and Spiritual, Heritage Enhancement Campaign) ಯೋಜನೆಯಡಿಯಲ್ಲಿ 1,400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ ಎಂದು ಪಿಎಂಒ ತಿಳಿಸಿದೆ. ಇದರಲ್ಲಿ 'ಹಜರತ್‌ಬಾಲ್ ತೀರ್ಥಯಾತ್ರೆಯ ಸಮಗ್ರ ಅಭಿವೃದ್ಧಿ' ಕೂಡ ಸೇರಿದೆ. ಪ್ರಧಾನಿಯವರು ಜಮ್ಮು ಮತ್ತು ಕಾಶ್ಮೀರದ ಸುಮಾರು 1,000 ಯುವಕರಿಗೆ ನೇಮಕಾತಿ ಪತ್ರಗಳನ್ನು ನೀಡಲಿದ್ದಾರೆ. ಇದಾದ ಬಳಿಕ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ