ಟೆಸ್ಟ್ ಕ್ರಿಕೆಟ್’ನಲ್ಲಿ ಭಾರತೀಯರೊಬ್ಬರು ಮಾಡಿದ ಅತ್ಯಧಿಕ ಸ್ಕೋರ್ ಸೇರಿದಂತೆ ಅನೇಕ ದಾಖಲೆಗಳು ಸೆಹ್ವಾಗ್ ಹೆಸರಿನಲ್ಲಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ (ಕೇವಲ 278 ಎಸೆತಗಳಲ್ಲಿ 300) ಅತ್ಯಂತ ವೇಗದ ಟ್ರಿಪಲ್ ಶತಕವ ಬಾರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್’ನಲ್ಲಿ ಎರಡು ಬಾರಿ 300 ದಾಟಿದ ವಿಶ್ವದ ನಾಲ್ವರು ಬ್ಯಾಟ್ಸ್ಮನ್’ಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೂ ಸೆಹ್ವಾಗ್ ಪಾತ್ರರಾಗಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ ಸೆಹ್ವಾಗ್, ವೈಯಕ್ತಿಕ ಜೀವನದಲ್ಲಿ ಕೊಂಚ ಕಷ್ಟವನ್ನು ಅನುಭವಿಸಿದ್ದರು ಎಂದರೆ ನೀವು ನಂಬುತ್ತೀರಾ? ಇಲ್ಲವಾದಲ್ಲಿ ಈ ವರದಿಯನ್ನೊಮ್ಮೆ ಓದಿ.
ವೀರೇಂದ್ರ ಸೆಹ್ವಾಗ್ ಕೇವಲ 7 ವರ್ಷದವರಾಗಿದ್ದಾಗ ಮೊದಲ ಬಾರಿಗೆ ತಮ್ಮ ಪತ್ನಿ ಆರತಿ ಅಹ್ಲಾವತ್ ಅವರನ್ನು ಭೇಟಿಯಾದರು. ಆರತಿ ಅಹ್ಲಾವತ್ ತಂದೆ ವಕೀಲರು. ಇನ್ನು ಆರತಿಯ ಚಿಕ್ಕಮ್ಮ ಸೆಹ್ವಾಗ್ ಅವರ ಸೋದರ ಸಂಬಂಧಿಯನ್ನು ಮದುವೆಯಾಗಿದ್ದರು. ಆದ್ದರಿಂದ ಎರಡೂ ಕುಟುಂಬಗಳು ಸಂಬಂಧ ಹೊಂದಿದ್ದವು. ಈ ಬಗ್ಗೆ ಆರತಿ ಅವರ ಅಕ್ಕ ಸಂದರ್ಶನವೊಂದರಲ್ಲಿ ಹೇಳಿದ್ದರು.
ವೀರೇಂದ್ರ ಸೆಹ್ವಾಗ್ ಕೇವಲ 7 ವರ್ಷದವರಾಗಿದ್ದಾಗ ಮೊದಲ ಬಾರಿಗೆ ತಮ್ಮ ಪತ್ನಿ ಆರತಿ ಅಹ್ಲಾವತ್ ಅವರನ್ನು ಭೇಟಿಯಾದರು. ಆರತಿ ಅಹ್ಲಾವತ್ ತಂದೆ ವಕೀಲರು. ಇನ್ನು ಆರತಿಯ ಚಿಕ್ಕಮ್ಮ ಸೆಹ್ವಾಗ್ ಅವರ ಸೋದರ ಸಂಬಂಧಿಯನ್ನು ಮದುವೆಯಾಗಿದ್ದರು. ಆದ್ದರಿಂದ ಎರಡೂ ಕುಟುಂಬಗಳು ಸಂಬಂಧ ಹೊಂದಿದ್ದವು. ಈ ಬಗ್ಗೆ ಆರತಿ ಅವರ ಅಕ್ಕ ಸಂದರ್ಶನವೊಂದರಲ್ಲಿ ಹೇಳಿದ್ದರು.
ಅಂದಹಾಗೆ ಸೆಹ್ವಾಗ್ ಮತ್ತು ಆರತಿ 2004 ರಲ್ಲಿ ವಿವಾಹವಾದರು. ಈ ಜೋಡಿಗೆ ಆರ್ಯವೀರ್ ಮತ್ತು ವೇದಾಂತ್ ಎಂಬ ಇಬ್ಬರು ಮಕ್ಕಳಿದ್ದಾರೆ. ಬಿಜೆಪಿಯ ಮಾಜಿ ನಾಯಕ ಅರುಣ್ ಜೇಟ್ಲಿ ಅವರ ಸರ್ಕಾರಿ ಬಂಗಲೆಯಲ್ಲಿ ಸೆಹ್ವಾಗ್ ಮದುವೆ ನಡೆದಿತ್ತು.
ಇನ್ನು 2002 ರಲ್ಲಿ, ಸೆಹ್ವಾಗ್ ತಮಾಷೆಯಾಗಿ ಆರತಿ ಅವರನ್ನು ಮದುವೆಯಾಗುತ್ತೀಯಾ ಎಂದು ಕೇಳಿದ್ದರಂತೆ. ಆದರೆ ಆರತಿ, ಗಂಭೀರವಾಗಿ ಪ್ರತಿಕ್ರಿಯಿಸಿ, ಹೌದು ಎಂದು ಒಪ್ಪಿಗೆ ನೀಡಿದ್ದರು ಎಂದು ಸ್ವತಃ ವೀರೂ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಆದರೆ ಈ ಮದುವೆಗೆ ಸೆಹ್ವಾಗ್ ಕುಟುಂಬ ಮಾತ್ರವಲ್ಲದೆ, ಆರತಿ ಕುಟುಂಬದಲ್ಲೂ ವಿರೋಧ ವ್ಯಕ್ತವಾಗಿತ್ತು. “ನಮ್ಮ ಕುಟುಂಬದಲ್ಲಿ ನಿಕಟ ಸಂಬಂಧಿಗಳ ನಡುವೆ ಯಾವುದೇ ವಿವಾಹ ನಡೆದಿರಲಿಲ್ಲ. ನಮ್ಮ ತಂದೆ-ತಾಯಿ ಕೂಡ ನಮ್ಮ ಮದುವೆಗೆ ವಿರೋಧಿಸಿದ್ದರು. ಸ್ವಲ್ಪ ಸಮಯ ಹಿಡಿಯಿತು, ಕಡೆಗೂ ಮದುವೆಗೆ ಒಪ್ಪಿದರು” ಎಂದು ಸೆಹ್ವಾಗ್ ಹೇಳಿದ್ದರು.
ಆರತಿ ಹೇಳುವಂತೆ “ನಮ್ಮ ಮನೆಯಲ್ಲಿ ಈ ಮದುವೆಯಿಂದ ಅನೇಕರಿಗೆ ಮನಸ್ತಾಪ ಕಂಡುಬಂದಿತ್ತು. ಬರೀ ನನ್ನ ಕುಟುಂಬದವರೇ ಆಗಿರಲಿಲ್ಲ, ವೀರೂ ಕುಟುಂಬದವರೂ ಕೂಡ ಈ ಮದುವೆಗೆ ಸಿಟ್ಟು ಮಾಡಿಕೊಂಡಿದ್ದರು. ಆದರೆ ನಮ್ಮಿಬ್ಬರ ಸಂಬಂಧದ ಮುಂದೆ ಕುಟುಂಬ ಸೋಲನ್ನು ಒಪ್ಪಿಕೊಂಡಿತು” ಎಂದಿದ್ದಾರೆ.