President Election : ರಾಷ್ಟ್ರಪತಿ ಚುನಾವಣೆಯಲ್ಲಿ ಜಾರ್ಖಂಡ್‌ನ ಮಾಜಿ ರಾಜ್ಯಪಾಲರು ಹಾಗೂ ಬುಡಕಟ್ಟು ಜನಾಂಗದ ನಾಯಕಿ ದ್ರೌಪದಿ ಮುರ್ಮು ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಮುರ್ಮು ಎದುರು ಎದುರಾಳಿ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಕಣಕ್ಕಿಳಿಯಲಿದ್ದಾರೆ. ದ್ರೌಪದಿ ಮುರ್ಮು ಚುನಾವಣೆಯಲ್ಲಿ ಗೆದ್ದರೆ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ ಮೊದಲ ಆದಿವಾಸಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.


COMMERCIAL BREAK
SCROLL TO CONTINUE READING

ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಿರುವುದು ಎನ್‌ಡಿಎಯ ಮಾಸ್ಟರ್‌ಸ್ಟ್ರೋಕ್ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಎನ್‌ಡಿಎ ಇವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಒಂದೇ ಬಾಣದಿಂದ ಹಲವು ಹಕ್ಕಿಗಳನ್ನು ಹೊಡೆದಿದೆ. ಕೇಂದ್ರದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ನರೇಂದ್ರ ಮೋದಿ ಅವರು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಘೋಷಣೆ ಮೂಲಕ ಸರ್ಕಾರವನ್ನ ನಡೆಸುತ್ತಿದ್ದಾರೆ. 2017ರಲ್ಲಿ ದಲಿತ ನಾಯಕನನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಮೂಲಕ ಹೊಸ ಎಲ್ಲರೂ ಸಮಾನರು ಎಂದು ತಿಳಿಸಿದ್ದರು. ಇದೀಗ ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಈ ಹುದ್ದೆಗೆ ಅರ್ಹನಾದರೆ ಎಲ್ಲರಿಗೂ ಈ ಒಂದು ಹುದ್ದೆ ಒಲಿಯಲಿದೆ ಎಂದು ತಿಳಿಸಿದ್ದಾರೆ. 


ಇದನ್ನೂ ಓದಿ : Presidential Election: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಆಗಿ ದ್ರೌಪದಿ ಮುರ್ಮು ಹೆಸರು ಘೋಷಣೆ


ದೇಶದಲ್ಲಿ ಆದಿವಾಸಿ ಸಮುದಾಯಗಳ ಜನಸಂಖ್ಯೆ 12 ಕೋಟಿಗೂ ಹೆಚ್ಚಿದೆ. ಇತರ ಸಮುದಾಯಗಳಿಗೆ ಹೋಲಿಸಿದರೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಂಗದಲ್ಲಿ ಆದಿವಾಸಿಗಳ ಭಾಗವಹಿಸುವುದು ತುಂಬಾ ಕಡಿಮೆ. ಹೀಗಾಗಿ, ದ್ರೌಪದಿ ಮುರ್ಮು ಹೆಸರನ್ನು ಘೋಷಣೆ ಮಾಡುವ ಮೂಲಕ ಎನ್‌ಡಿಎ ತನ್ನ ಕಾರ್ಯಸೂಚಿಯಲ್ಲಿ ಸಾಮರಸ್ಯ ಮತ್ತು ಸರ್ವವ್ಯಾಪಿ ಸಮಾಜದ ಪರಿಕಲ್ಪನೆಯೇ ಪ್ರಧಾನ ಎಂಬ ಸಂದೇಶವನ್ನು ನೀಡಲು ಪ್ರಯತ್ನಿಸಿದೆ.


2014 ರಲ್ಲಿ ರಾಜ್ಯಪಾಲರಾಗಿ ನೇಮಕಗೊಂಡಿದ್ದ ದ್ರೌಪದಿ ಮುರ್ಮು


2014 ರಲ್ಲಿ ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ, ಬಿಜೆಪಿಯು ಬುಡಕಟ್ಟು ಜನಾಂಗದವರಲ್ಲದ ನಾಯಕನಿಗೆ ರಾಜ್ಯದ ಅಧಿಕಾರವನ್ನು ನೀಡಿತು. ರಘುವರ ದಾಸ್ ಸಿಎಂ ಆದರೂ, ಇನ್ನೊಂದೆಡೆ ಆದಿವಾಸಿಗಳ ಕೆಂಗಣ್ಣಿಗೆ ಗುರಿಯಾಗುವುದು ಬೇಡ ಎಂದು ಬಿಜೆಪಿಯವರು ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲರನ್ನಾಗಿ ಮಾಡಿದರು.


ಸಂತಾಲ್ ಬುಡಕಟ್ಟು ಸಮುದಾಯದಿಂದ ಬಂದ ಮುರ್ಮು ಅವರು ತಮ್ಮ ಅಧಿಕಾರಾವಧಿಯಲ್ಲಿ ವಿರೋಧ ರಾಜಕಾರಣ ಮಾಡುತ್ತಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾದ ಮೇಲೂ ಪ್ರಭಾವ ಬೀರಿದರು. ಇದು ರಾಷ್ಟ್ರಪತಿ ಚುನಾವಣೆ ಮೇಲೆ ಪರಿಣಾಮ ಬೀರಬಹುದು. ಜಾರ್ಖಂಡ್‌ನಲ್ಲಿ ಅಧಿಕಾರದಲ್ಲಿರುವ ಜಾರ್ಖಂಡ್ ಮುಕ್ತಿ ಮೋರ್ಚಾದ ಶಾಸಕರ ಸಂಖ್ಯೆ 30 ಆಗಿದೆ.


ಹೇಮಂತ್ ಸೋರೆನ್ ಅವರ ಪಕ್ಷವು ಲೋಕಸಭೆಯಲ್ಲಿ ಒಬ್ಬರು ಮತ್ತು ರಾಜ್ಯಸಭೆಯಲ್ಲಿ ಒಬ್ಬರು ಸದಸ್ಯರನ್ನು ಹೊಂದಿದೆ. ಹೇಮಂತ್ ಸೊರೇನ್ ಮತ್ತು ದ್ರೌಪದಿ ಮುರ್ಮು ನಡುವೆ ಉತ್ತಮ ಬಾಂಧವ್ಯವಿದ್ದು, ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎಗೆ ಲಾಭವಾಗಬಹುದು ಎನ್ನಲಾಗಿದೆ.


ಮುರ್ಮು ವಿರುದ್ಧ ಸೊರೇನ್ ಪಕ್ಷ ಮುಂದಾದರೆ ಬಿಜೆಪಿಗೆ ಜೆಎಂಎಂಗೆ ಅವಕಾಶ ಸಿಗಲಿದೆ. ಹೇಮಂತ್ ಸೋರೆನ್ ಮುರ್ಮು ಜೊತೆ ಹೋದರೆ ಕಾಂಗ್ರೆಸ್‌ಗೆ ಭಾರಿ ನಷ್ಟವಾಗಲಿದೆ. ಹೇಮಂತ್ ಸೋರೆನ್ ಅವರು ಪ್ರತಿಪಕ್ಷಗಳನ್ನು ಬೆಂಬಲಿಸಿದರೆ ಭವಿಷ್ಯದಲ್ಲಿ ರಾಜಕೀಯ ನಷ್ಟದ ಭಯ ಕಾಡಲಿದೆ.


ಇದನ್ನೂ ಓದಿ : ಮಹಾರಾಷ್ಟ್ರ ಸರ್ಕಾರಕ್ಕೆ ತಲೆನೋವಾದ ಏಕನಾಥ್ ಶಿಂಧೆ ; ಇಂದು ಮಹತ್ವದ ನಡೆ ಸಾಧ್ಯತೆ


ಜಾರ್ಖಂಡ್ ವಿಧಾನಸಭೆಯ 81 ಸ್ಥಾನಗಳಲ್ಲಿ 28 ಬುಡಕಟ್ಟು ಜನಾಂಗದವರಿಗೆ ಮೀಸಲಾಗಿದೆ. ಇದರಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಪ್ರಸ್ತುತ 26 ಸ್ಥಾನಗಳನ್ನು ಹೊಂದಿವೆ. ಜಾರ್ಖಂಡ್‌ಗೆ ಹೊಂದಿಕೊಂಡಿರುವ ಒಡಿಶಾದಲ್ಲಿ ಬಿಜು ಜನತಾ ದಳ (ಬಿಜೆಡಿ) ಸರ್ಕಾರವಿದೆ.


ದ್ರೌಪದಿ ಮುರ್ಮು ಹೆಸರಿನಲ್ಲಿ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಬೆಂಬಲಿಸಲು ಸುಲಭವಾಗಿ ಮುಂದೆ ಬರಬಹುದು. ಒಡಿಶಾದಲ್ಲಿ 28 ವಿಧಾನಸಭಾ ಸ್ಥಾನಗಳು ಆದಿವಾಸಿಗಳಿಗೆ ಮೀಸಲಾಗಿದೆ. ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲೂ ಇದು ಪರಿಣಾಮಕಾರಿ ಹೆಜ್ಜೆಯಾಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.