ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸೆಪ್ಟೆಂಬರ್ 9 ರಿಂದ 17 ರವರೆಗೆ ಐಸ್ಲ್ಯಾಂಡ್, ಸ್ವಿಟ್ಜರ್ಲೆಂಡ್ ಮತ್ತು ಸ್ಲೊವೇನಿಯಾ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಹವಾಮಾನ ಬದಲಾವಣೆ ಮತ್ತು ಯುರೋಪಿನೊಂದಿಗೆ ಹೆಚ್ಚುತ್ತಿರುವ ಒಡಂಬಡಿಕೆಗಳ ಬಗ್ಗೆ ಗಮನ ಹರಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾಹಿತಿ ನೀಡಿರುವ ರಾಷ್ಟ್ರಪತಿಗಳ ಪತ್ರಿಕಾ  ಉಪ ಕಾರ್ಯದರ್ಶಿ ಡಾ.ನಿಮಿಶ್ ರುಸ್ತಗಿ, "ರಾಷ್ಟ್ರಪತಿಗಳು ತಮ್ಮ ಸಹವರ್ತಿಗಳೊಂದಿಗೆ ಒಡಂಬಡಿಕೆಗೆ ಮತ್ತು ವ್ಯಾಪಾರ ಸಮುದಾಯದೊಂದಿಗೆ ಒಡಂಬಡಿಕೆಗೆ ಎದುರು ನೋಡುತ್ತಿದ್ದಾರೆ" ಎಂದು ಹೇಳಿದರು.


"ರಾಷ್ಟ್ರೀಯ ಕಾಳಜಿಗಳ ಪ್ರಾದೇಶಿಕ, ಅಂತರರಾಷ್ಟ್ರೀಯ, ಜಾಗತಿಕ ಬಹುಪಕ್ಷೀಯ ವಿಷಯಗಳ ಬಗ್ಗೆ ಆ ರಾಷ್ಟ್ರಗಳ ನಾಯಕರ ಆಜೊತೆ ರಾಷ್ಟ್ರಪತಿ ಕೋವಿಂದ್ ಚರ್ಚಿಸುವ ಯೋಜನೆಯಿದೆ. ಹಾಗೆಯೇ ಭಯೋತ್ಪಾದನೆಗೆ ಸಂಬಂಧಿಸಿದಂತೆ ಮೂರೂ ದೇಶಗಳು ಭಾರತದ ಬಹಳ ಸಹಾನುಭೂತಿ ಹೊಂದಿದ್ದು, ಈ ವರ್ಷ ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ" ಗೀತೇಶ್ ಶರ್ಮಾ ಹೇಳಿದ್ದಾರೆ.


ಇದರ ಬಳಿಕ ಸೆಪ್ಟೆಂಬರ್ 11 ರಿಂದ 15 ರವರೆಗೆ ಸ್ವಿಟ್ಜರ್ಲೆಂಡ್‌ಗೆ ಭೇಟಿ ನೀಡಲಿದ್ದು, 1931ರಲ್ಲಿ ಮಹಾತ್ಮ ಗಾಂಧಿ ಅವರು  ವಿಲ್ಲೆನ್ಯೂವ್‌ನಲ್ಲಿ ಭೇಟಿ ನೀಡಿದ ಸ್ಥಳದಲ್ಲಿ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಬಳಿಕ ಈ ಬಗ್ಗೆ ಬರ್ನ್ ವಿಶ್ವವಿದ್ಯಾಲಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಸೆಪ್ಟೆಂಬರ್ 15 ರಿಂದ 17 ರವರೆಗೆ ಸ್ಲೊವೇನಿಯಾಗೆ ರಾಷ್ಟ್ರಪತಿ ಭೇಟಿ ನೀಡಲಿದ್ದಾರೆ.