ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಈಗ ರಾಷ್ಟ್ರಪತಿ ರಾಮ್ ನಾಥ್ ಸಿಂಗ್ 27 ಆಮ್ ಆದ್ಮಿ ಪಾರ್ಟಿ ಶಾಸಕರನ್ನು ಅನರ್ಹಗೊಳಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದಾರೆ.ಆ ಮೂಲಕ ಈಗ ಆಮ್ ಆದ್ಮಿ ಪಕ್ಷಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. 


COMMERCIAL BREAK
SCROLL TO CONTINUE READING

ಆಪ್ ಶಾಸಕರು ರೋಗಿ ಕಲ್ಯಾಣ ಸಮಿತಿಯ ವಿವಿಧ ಆಸ್ಪತ್ರೆಯಲ್ಲಿ ಲಾಭದಾಯಕ ಹುದ್ದೆ ಹೊಂದಿರುವ ಕಾರಣಕ್ಕೆ ಅವರನ್ನು ಶಾಸಕ ಹುದ್ದೆಯಿಂದ ವಜಾಗೊಳಿಸಬೇಕೆಂದು ಅರ್ಜಿಯನ್ನು ಸಲ್ಲಿಸಲಾಗಿತ್ತು.


2016 ರಲ್ಲಿ ವಕೀಲರೊಬ್ಬರು ಚುನಾವಣಾ ಆಯೋಗದಲ್ಲಿ 27 ಶಾಸಕರ ಅನರ್ಹತೆಯನ್ನು ಕೋರಿ ಅರ್ಜಿ ಸಲ್ಲಿಸಿದ್ದರು.ದೂರಿನಲ್ಲಿ ಪ್ರಮುಖವಾಗಿ ಈ ಶಾಸಕರು ಈ ಆಸ್ಪತ್ರೆಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದು ವಕೀಲರು ದೂರಿದ್ದರು.


ಈಗ ಚುನಾವಣಾ ಆಯೋಗದ ಶಿಫಾರಸ್ಸಿನನ್ವಯ ರಾಷ್ಟ್ರಪತಿ ರಾಮನಾಥ್ ಕೊವಿಂದ ಅವರು ಅರ್ಜಿಯನ್ನು ತಿರಸ್ಕರಿಸಿದ್ದಾರೆ.