ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೊವಿಂದ್ ಶನಿವಾರದಂದು ಮೆಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ರಷ್ಟು ಮೀಸಲಾತಿಯನ್ನು ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ನೀಡುವ ಕುರಿತಾದ 124 ಮಸೂದೆಗೆ ಈಗ ಅಂಕಿತ ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಆ ಮೂಲಕ ಈಗ ಮೇಲ್ವರ್ಗದ ಬಡವರಿಗೆ ಶೇ 10 ರಷ್ಟು ಮೀಸಲಾತಿ ಈಗ ಅಧಿಕೃತವಾಗಿದೆ. ಇದರಿಂದ ಸದ್ಯದ ಮೀಸಲಾತಿ ಪ್ರಮಾಣ ಶೇ 60 ಆಗುತ್ತದೆ. ಆದರೆ ಇನ್ನೊಂದು ಕಡೆ ಸುಪ್ರಿಂಕೋರ್ಟ್ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೆ ಮಾತ್ರ ನಿಗಧಿಪಡಿಸಿದೆ.



ಬುಧುವಾರವಷ್ಟೇ ಸಂಸತ್ತಿನಲ್ಲಿ ಲೋಕಸಭಾ ಮತ್ತು ರಾಜ್ಯಸಭಾದಲ್ಲಿ ಬಹುಮತದಿಂದ ಪಾಸಾಗಿದ್ದ ಈ ಮಸೂದೆಯನ್ನು ರಾಷ್ಟ್ರಪತಿಯವರ ಸಹಿಗೆ ಕಳುಹಿಸಲಾಗಿತ್ತು.ಈಗ ರಾಷ್ಟ್ರಪತಿ ಕೊವಿಂದ್ ರವರು ಮಸೂದೆಗೆ ಅಧಿಕೃತ ಮುದ್ರೆಯನ್ನು ಹಾಕಿದ್ದಾರೆ.


ಈ ಮೀಸಲಾತಿಯ ಪ್ರಯೋಜನ ಪ್ರಮುಖವಾಗಿ ಯಾರ ಆಧಾಯ 8 ಲಕ್ಷಕ್ಕಿಂತ ಕಡಿಮೆ ಇರುತ್ತದೆಯೋ ಮತ್ತು ಐದು ಎಕರೆಗಿಂತ ಕಡಿಮೆ ಜಮೀನನ್ನು ಹೊಂದಿರುತ್ತಾರೋ ಅಂತಹವರು ಈ ಸೌಲಭ್ಯವನ್ನು ಪಡೆಯಲಿದ್ದಾರೆ. 


ಇನ್ನೊಂದೆಡೆ ಈ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ.