ನವದೆಹಲಿ: ಪ್ರಸಿದ್ಧ ವಾಹನ ತಯಾರಕ ಕಂಪನಿ ಟಾಟಾ ತನ್ನ ಎಲೆಕ್ಟ್ರಿಕ್ ವಾಹನ Tigor(EV) ಬೆಲೆಯನ್ನು ಬರೋಬ್ಬರಿ 80,000 ರೂ. ಕಡಿತಗೊಳಿಸಿದೆ. 


COMMERCIAL BREAK
SCROLL TO CONTINUE READING

ಇತ್ತೀಚೆಗೆ  ಜಿಎಸ್ಟಿ ಕೌನ್ಸಿಲ್ ಜಿಎಸ್ಟಿ ದರವನ್ನು ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ಟಾಟಾದ ಇವಿಗಳ ಬೆಲೆ ಕಡಿಮೆಯಾಗಿದೆ. ಈಬಗ್ಗೆ ಮಾತನಾಡಿರುವ ಟಾಟಾ ಮೋಟಾರ್ಸ್ ಅಧ್ಯಕ್ಷ (ಎಲೆಕ್ಟ್ರಿಕ್ ಮೊಬಿಲಿಟಿ ಬಿಸಿನೆಸ್ ಮತ್ತು ಕಾರ್ಪೊರೇಟ್ ಸ್ಟ್ರಾಟಜಿ) ಶೈಲೇಶ್ ಚಂದ್ರ, "ಸರ್ಕಾರ ಇತ್ತೀಚೆಗೆ ಜಿಎಸ್ಟಿ ದರದಲ್ಲಿ ಕಡಿತ ಪ್ರಕಟಿಸಿದ ನಂತರ, ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್ಟಿ ದರವನ್ನು ಶೇ.12 ರಿಂದ 5 ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು 80,000 ರೂ.ಗಳವರೆಗೆ ಕಡಿತಗೊಳಿಸಲಾಗಿದೆ" ಎಂದು ತಿಳಿಸಿದ್ದಾರೆ.


ಎಲೆಕ್ಟ್ರಿಕ್ ಕಾರುಗಳ ಮೇಲೆ ಜಿಎಸ್ಟಿ ಕಡಿತ
ಟಾಟಾ ಎಲೆಕ್ಟ್ರಿಕ್ ಕಾರಿನ ನೂತನ ಬೆಲೆಯೂ ಆಗಸ್ಟ್ 1, 2019ರಿಂದ ಜಾರಿಯಾಗಿದೆ. ಇತ್ತೀಚೆಗೆ, ಜಿಎಸ್ಟಿ ಕೌನ್ಸಿಲ್ ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್ಟಿ ದರವನ್ನು ಶೇ.12 ರಿಂದ ಶೇ.5ಕ್ಕೆ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಟೈಗರ್ EV, ಎಕ್ಸ್‌ಎಂ (ಪ್ರೀಮಿಯಂ) ಮತ್ತು ಎಕ್ಸ್‌ಟಿ (ಹೈ)ಯ ಎಲ್ಲಾ ರೂಪಾಂತರಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.


ಕಡಿಮೆ ಬೆಲೆ
ಈ ಹಿಂದೆ 12.35 ಲಕ್ಷ ರೂ.ಗಳಿಂದ 12.71 ಲಕ್ಷ ರೂ. ಇದ್ದ ಟೈಗರ್ ಇವಿ ಬೆಲೆ, ಜಿಎಸ್ಟಿ ದರ ಇಳಿಕೆಯಾದ ಕಾರಣ ಇದೀಗ ಗ್ರಾಹಕರಿಗೆ 11.58 ಲಕ್ಷದಿಂದ 11.92 ಲಕ್ಷ ರೂ.ವರೆಗೆ ಲಭ್ಯವಾಗಲಿದೆ. ಕಂಪನಿಯ ಎರಡೂ ಮಾದರಿಗಳು 16.2 kW ಬ್ಯಾಟರಿಯನ್ನು ಹೊಂದಿದ್ದು, ಇದು 4500 ಆರ್‌ಪಿಎಂನಲ್ಲಿ 30 kW (41 ಅಶ್ವಶಕ್ತಿ) ಶಕ್ತಿಯನ್ನು ನೀಡುತ್ತದೆ.


ಒಮ್ಮೆ ಫುಲ್ ಜಾರ್ಜ್ ಮಾಡಿದರೆ 142 ಕಿ.ಮೀ ಪ್ರಯಾಣ ಸಾಧ್ಯ
ಟಾಟಾದ ಎಲೆಕ್ಟ್ರಿಕ್ ಕಾರು 2500 ಆರ್‌ಪಿಎಂನಲ್ಲಿ 105 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಒಮ್ಮೆ ಫುಲ್ ಚಾರ್ಜ್ ಮಾಡಿದರೆ 142 ಕಿ.ಮೀ ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿದೆ. ಆದಾಗ್ಯೂ, ಒಮ್ಮೆ ಫುಲ್ ಜಾರ್ಜ್ ಮಾಡಿದರೆ 50 ಕಿ.ಮೀ ವರೆಗೆ ಮಾತ್ರ ಪ್ರಮಿಸಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.