ವಡೋದರಾ (ಗುಜರಾತ್): ವಡೋದರಾದ ಸರ್ಕಾರಿ ಶಾಲೆಗಳಲ್ಲಿ ಒಂದು ವಿಶಿಷ್ಟ ವಿಧಾನದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದ್ದು, ಮಕ್ಕಳು ಕೂಡ ಅದನ್ನು ಆನಂದಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದ್ದು, ವಡೋದರಾದ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಬ್ಯಾಗ್ ಹೊರೆ ಇಲ್ಲ. ಬದಲಿಗೆ ಅವರಿಗೆ ಅಧ್ಯಯನ ಕಿಟ್‌ಗಳನ್ನು ನೀಡಲಾಗುತ್ತಿದೆ ಇವುಗಳನ್ನು ಶಾಲೆಯಲ್ಲಿಯೇ ಇರಿಸಲಾಗುತ್ತದೆ ಎಂದು ಹೇಳಲಾಗಿದೆ.


ಸುದ್ದಿಸಂಸ್ಥೆ ಎಎನ್ಐ ವರದಿ ಪ್ರಕಾರ, "ಖಾಲಿ ಕೈಯಲ್ಲಿ ಆಟವಾಡುತ್ತಾ ಶಾಲೆಗೆ ಬರುವ ಮಕ್ಕಳು, ಸ್ಟಡಿ ಕಿಟ್‌ಗಳ ಸಹಾಯದಿಂದ ಅಧ್ಯಯನ ಮಾಡುತ್ತಾರೆ. ಬಳಿಕ ಸ್ಟಡಿ ಕಿಟ್‌ಗಳನ್ನು ಶಾಲೆಯಲ್ಲಿಯೇ ಬಿಟ್ಟು ಮನೆಗೆ ತೆರಳುತ್ತಾರೆ. ಇದಲ್ಲದೆ ಮಕ್ಕಳಿಗೆ ಯಾವುದೇ ಹೋಮ್‌ವರ್ಕ್ ನೀಡಲಾಗುವುದಿಲ್ಲ. ಕಥೆ ಹೇಳುವುದು, ಹಾಡುಗಳು ಮತ್ತು ನಟನೆಯಂತಹ ಪ್ರಾಯೋಗಿಕ ವಿಧಾನಗಳನ್ನು ಬಳಸಿ ಕಲಿಸಲಾಗುತ್ತದೆ" ಎಂದು ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಮುಖ್ಯೋಪಾಧ್ಯಾಯರಾದ ಜಿಗರ್ ಠಾಕೂರ್ ಹೇಳಿದ್ದಾರೆ.


ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ರಾಜ್ಯ ಸರ್ಕಾರ ಪ್ರಾರಂಭಿಸಿರುವ ಪ್ರಜ್ಞಾ ಉಪಕ್ರಮದ ಒಂದು ಭಾಗವಾಗಿದೆ. ಮಕ್ಕಳೂ ಸಹ ಈ ಉಪಕ್ರಮದಿಂದ ಸಂತೋಷವಾಗಿ ಶಾಲೆಗೆ ಬರುತ್ತಿದ್ದು, ಬ್ಯಾಗ್‌ಗಳಿಲ್ಲದ ವ್ಯವಸ್ಥೆಯಲ್ಲಿಯೂ ಸಂತೋಷವಾಗಿ ಶಿಕ್ಷಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.


"ನಾವು ಅಧ್ಯಯನ ಮಾಡಲು ಶಾಲೆಯಲ್ಲಿಯೇ ನೋಟ್ಬುಕ್ಗಳನ್ನು ಪಡೆಯುತ್ತೇವೆ ಮತ್ತು ನಾವು ಪ್ರತಿದಿನ ಅನೇಕ ಹೊಸ ಚಟುವಟಿಕೆಗಳನ್ನು ಕಲಿಯುತ್ತೇವೆ. ಬಳಿಕ ಮನೆಗೆ ತೆರಳುವಾಗ ನಮ್ಮ ಪುಸ್ತಕಗಳನ್ನೂ ನಾವು ಶಾಲೆಯಲ್ಲಿಯೇ ಇಟ್ಟು ಹೋಗುತ್ತೇವೆ. ಆದ್ದರಿಂದ ನಾವು ಯಾವುದೇ ಚೀಲಗಳನ್ನು ಶಾಲೆಗೆ ಕೊಂಡೊಯ್ಯಬೇಕಾಗಿಲ್ಲ" ಎಂದು ಸುದ್ದಿಸಂಸ್ಥೆ ಎಎನ್ಐ ಜೊತೆಗೆ ಮಾತನಾಡುತ್ತಾ ವಿದ್ಯಾರ್ಥಿ ಸೂರಜ್ ತಿಳಿಸಿದ್ದಾರೆ.