ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಜೂನ್ 2) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump)ಅವರೊಂದಿಗೆ ಹಲವಾರು ಜಾಗತಿಕ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ 'ನನ್ನ ಸ್ನೇಹಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಆತ್ಮೀಯ ಮತ್ತು ಫಲಪ್ರದ ಮಾತುಕತೆ ನಡೆಸಿದ್ದೇವೆ. ನಾವು ಯುಎಸ್ ನ ಅಧ್ಯಕ್ಷ ಚುನಾವಣೆ  ಜಿ -7, ಕೊವಿಡ್-19 ಸಾಂಕ್ರಾಮಿಕ ಮತ್ತು ಇತರ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ. ಮುಂಬರುವ ಜಿ -7 ಶೃಂಗಸಭೆಗೆ ಅಮೆರಿಕ ಅಧ್ಯಕ್ಷತೆ ವಹಿಸಲಿರುವುದರಿಂದ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಪ್ರಧಾನಿ ಮೋದಿ ಅವರ ಸಂಭಾಷಣೆ ಮಹತ್ವದ್ದಾಗಿದೆ.


ಅಧ್ಯಕ್ಷ ಟ್ರಂಪ್ ಅವರು ಯುಎಸ್ ಪ್ರೆಸಿಡೆನ್ಸಿ ಆಫ್ ಗ್ರೂಪ್ ಆಫ್ ಸೆವೆನ್ ಬಗ್ಗೆ ಮಾತನಾಡಿದರು ಮತ್ತು ಅಸ್ತಿತ್ವದಲ್ಲಿರುವ ಸದಸ್ಯತ್ವವನ್ನು ಮೀರಿ ಗುಂಪಿನ ವ್ಯಾಪ್ತಿಯನ್ನು ವಿಸ್ತರಿಸುವ ಇಚ್ಛೆಯನ್ನು ತಿಳಿಸಿದರು, ಭಾರತ ಸೇರಿದಂತೆ ಇತರ ಪ್ರಮುಖ ದೇಶಗಳನ್ನು ಸೇರಿಸುವ ಕುರಿತಾಗಿ ಅವರು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಅಮೇರಿಕಾದಲ್ಲಿ ನಡೆಯಲಿರುವ ಮುಂದಿನ ಜಿ -7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿಯವರಿಗೆ ಆಹ್ವಾನವನ್ನು ನೀಡಿದರು ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.



ಪ್ರಧಾನ ಮಂತ್ರಿ ಮೋದಿ ಅಧ್ಯಕ್ಷ ಟ್ರಂಪ್ ಅವರ ಸೃಜನಶೀಲ ಮತ್ತು ದೂರದೃಷ್ಟಿಯ ವಿಧಾನವನ್ನು ಶ್ಲಾಘಿಸಿದರು, ಇಂತಹ ವಿಸ್ತೃತ ವೇದಿಕೆಯು ಕೋವಿಡ್ ನಂತರದ ಪ್ರಪಂಚದ ಉದಯೋನ್ಮುಖ ವಾಸ್ತವಗಳಿಗೆ ಅನುಗುಣವಾಗಿರುತ್ತದೆ ಎಂಬ ಅಂಶವನ್ನು ಒಪ್ಪಿಕೊಂಡರು. ಉದ್ದೇಶಿತ ಶೃಂಗಸಭೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಅಮೆರಿಕ ಮತ್ತು ಇತರ ದೇಶಗಳೊಂದಿಗೆ ಕೆಲಸ ಮಾಡಲು ಭಾರತ ಸಂತೋಷವಾಗಿದೆ ಎಂದು ಪ್ರಧಾನಿ ಹೇಳಿದರು.


ಅಮೆರಿಕದಲ್ಲಿ ನಡೆಯುತ್ತಿರುವ ನಾಗರಿಕ ಅವಾಂತರಗಳ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದರು ಮತ್ತು ಪರಿಸ್ಥಿತಿಯ ಶೀಘ್ರ ಪರಿಹಾರಕ್ಕಾಗಿ ಆಶಿಸಿದರು.ಉಭಯ ನಾಯಕರು ಉಭಯ ದೇಶಗಳಲ್ಲಿನ COVID-19 ಪರಿಸ್ಥಿತಿ, ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಮುಂತಾದ ಇತರ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.


ಅಧ್ಯಕ್ಷ ಟ್ರಂಪ್ ಈ ವರ್ಷದ ಫೆಬ್ರವರಿಯಲ್ಲಿನ ತಮ್ಮ ಭಾರತದ ಭೇಟಿಯನ್ನು ಪ್ರೀತಿಯಿಂದ ನೆನಪಿಸಿಕೊಂಡರು. ಈ ಭೇಟಿ ಅನೇಕ ರೀತಿಯಲ್ಲಿ ಸ್ಮರಣೀಯ ಮತ್ತು ಐತಿಹಾಸಿಕವಾಗಿದೆ ಮತ್ತು ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ಚೈತನ್ಯವನ್ನುತಂದಿದೆ  ಎಂದು ಪ್ರಧಾನಿ ಮೋದಿ ಹೇಳಿದರು.