ಬಹರೇನ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನ ಹಲವು ನಗರಗಳಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್ಗಳು ಮೊಳಗಿದವು. ಯುಎಇ ಸರ್ಕಾರ ತನ್ನ ಭೂಪ್ರದೇಶಕ್ಕೆ ಯಾವುದೇ ಕ್ಷಿಪಣಿ ಪ್ರವೇಶಿಸಿಲ್ಲವೆಂದು ಸ್ಪಷ್ಟಪಡಿಸಿದೆ. ಒಮಾನ್ನಲ್ಲಿರುವ ಅಮೆರಿಕದ ನೌಕಾ ಬೆಂಬಲ ಸೌಲಭ್ಯಗಳ ಮೇಲೂ ದಾಳಿ ನಡೆದಿರುವುದಾಗಿ ಇರಾನ್ ಹೇಳಿಕೊಂಡಿದೆ.
ಮಧ್ಯಂತರ ಕದನ ವಿರಾಮದ ಬಳಿಕ ಇರಾನ್ ಮತ್ತು ಅಮೆರಿಕ, ಇಸ್ರೇಲ್ ನಡುವೆ ಹೊಸ ಘರ್ಷಣೆ ಶುರುವಾಗಿದ್ದು ಭಾರತೀಯ ಷೇರು ಸೂಚ್ಯಂಕಗಳು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿವೆ.
G7 ಔಟ್ರೀಚ್ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಮುದ್ರ ಮಾರ್ಗಗಳ ಸುರಕ್ಷತೆ ಮತ್ತು ನಾವಿಕರ ರಕ್ಷಣೆಯ ಮಹತ್ವವನ್ನ ಪ್ರಸ್ತಾಪಿಸಿದರು. ಜಾಗತಿಕ ಮಟ್ಟದಲ್ಲಿ ವಿಶ್ವಾಸ ಮತ್ತು ಸಹಕಾರವನ್ನ ಬಲಪಡಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
ಅಣು ಕಾರ್ಯಕ್ರಮದ ವಿಚಾರದಲ್ಲಿ, ಇರಾನ್ ಅಣ್ವಸ್ತ್ರಗಳನ್ನ ನಿರ್ಮಿಸದಿರಲು ಅಥವಾ ಸ್ವಾಧೀನಪಡಿಸಿಕೊಳ್ಳದಿರಲು ಒಪ್ಪಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ ಹೊಸ ಯುರೇನಿಯಂ ಶುದ್ಧೀಕರಣ ಚಟುವಟಿಕೆಗಳನ್ನ ಕೈಗೊಳ್ಳದೇ, ಪ್ರಸ್ತುತ ಸ್ಥಿತಿಯನ್ನ ಕಾಯ್ದುಕೊಳ್ಳಲು ಸಮ್ಮತಿಸಿದೆ.
ಇರಾನ್ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದದ ಮಾತುಕತೆಗಳ ಬೆನ್ನಲ್ಲೇ ಪಶ್ಚಿಮ ಏಷ್ಯಾದಲ್ಲಿ ರಾಜಕೀಯ ಪರಿಸ್ಥಿತಿ ಮತ್ತಷ್ಟು ಕಾವೇರಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಎದುರಾಗಿರುವ ರಾಜತಾಂತ್ರಿಕ ಸೋಲಿನ ಹಿನ್ನೆಲೆಯಲ್ಲಿ, ಟೆಲ್ ಅವಿವ್ ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.
ಹೋರ್ಮುಜ್ ಜಲಸಂಧಿ ಪುನರಾರಂಭವಾದರೆ ಜಾಗತಿಕ ವ್ಯಾಪಾರ ಮಾರ್ಗಗಳು ಮತ್ತೆ ಚುರುಕುಗೊಳ್ಳಲಿದ್ದು, ಸರಕು ಸಾಗಣೆ ವೆಚ್ಚದಲ್ಲಿಯೂ ಇಳಿಕೆಯಾಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬೆಳವಣಿಗೆ ವಿಶ್ವ ರಾಜಕೀಯದಲ್ಲಿ ಮಹತ್ವದ ತಿರುವಾಗಿ ಪರಿಗಣಿಸಲಾಗುತ್ತಿದೆ.
FIFA World Cup 2026: ಅಮೆರಿಕ ಫುಟ್ಬಾಲ್ ತಂಡದ ಮ್ಯಾನೇಜರ್ ಮೌರಿಸಿಯೊ ಪೊಚೆಟ್ಟಿನೊ ಅವರು ಅಧ್ಯಕ್ಷ ಟ್ರಂಪ್ ಅವರಿಂದ ದೂರವಾಣಿ ಕರೆ ಸ್ವೀಕರಿಸುವ ವೀಡಿಯೊವನ್ನು ತಂಡದ ಅಧಿಕೃತ 'ಎಕ್ಸ್' (ಟ್ವಿಟರ್) ಹ್ಯಾಂಡಲ್ನಲ್ಲಿ ಹಂಚಿಕೊಳ್ಳಲಾಗಿದೆ.
ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿ ಹಾಗೂ ರಷ್ಯಾ-ಉಕ್ರೇನ್ ಸಮಸ್ಯೆಯನ್ನು ಈ ಬಾರಿಯ ಜಿ7 ಶೃಂಗಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಗುತ್ತಿದ್ದು, ಭಾರತವು ಈ ಬಹುತೇಕ ಎಲ್ಲ ಪ್ರಮುಖ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದೆ.
ಇರಾನ್ನ ಪರ್ವತಗಳ ನೂರಾರು ಅಡಿ ಆಳದಲ್ಲಿ ಹೂತುಹೋಗಿರುವ ಅತ್ಯಂತ ಅಪಾಯಕಾರಿ ಪುಷ್ಟೀಕರಿಸಿದ ಯುರೇನಿಯಂಅನ್ನು ಪತ್ತೆಹಚ್ಚಿ ಹೊರತೆಗೆಯಲು ಟ್ರಂಪ್ ಸರ್ಕಾರ ಭಾರಿ ರಹಸ್ಯ ಕಾರ್ಯಾಚರಣೆಯೊಂದನ್ನು ರೂಪಿಸಿದೆ.
India-US: ದೆಹಲಿಯ ಯುಎಸ್ ರಾಯಭಾರ ಕಚೇರಿಯ ಕಾರ್ಯಕ್ರಮದ ವೇಳೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೂರವಾಣಿ ಮೂಲಕ , ತಾನು ಭಾರತವನ್ನು ಪ್ರೀತಿಸುವುದಾಗಿ ಮತ್ತು ಮೋದಿಯವರ ದೊಡ್ಡ ಅಭಿಮಾನಿಯೆಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆ ಸದ್ಯ ಜಾಗತಿಕವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
Who is Nasire Best : ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸ ಹಾಗೂ ಕಚೇರಿಯಾಗಿರುವ ಶ್ವೇತಭವನದ (White House gunfire) ಭದ್ರತಾ ತಪಾಸಣಾ ಕೇಂದ್ರದ ಹೊರಗೆ ಶನಿವಾರ ಸಂಜೆ ಭೀಕರ ಗುಂಡಿನ ಚಕಮಕಿ ನಡೆದಿದೆ. ಶ್ವೇತಭವನಕ್ಕೆ ಪ್ರವೇಶಿಸಲು ಯತ್ನಿಸಿದ ಸಶಸ್ತ್ರ ಹಂತಕನೊಬ್ಬನನ್ನು ಅಮೆರಿಕದ ರಹಸ್ಯ ಸೇವೆ (Secret Service) ಅಧಿಕಾರಿಗಳು ಸ್ಥಳದಲ್ಲೇ ಹೊಡೆದು ಉರುಳಿಸಿದ್ದಾರೆ.. ಇದೀಗ ಆರೋಪಿಯ ಫೋಟೋವನ್ನು ರಿಲೀಸ್ ಮಾಡಲಾಗಿದೆ..
White house firing : ಶ್ವೇತ ಭವನದ ಬಳಿ ಗುಂಡಿನ ಚಕಮಕಿ ನಡೆದಿದೆ. ಶನಿವಾರ ಸಂಜೆಯೇ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಬ್ಯಾಗ್ನಿಂದ ಗನ್ ತೆಗೆದು ಆಗಂತುಕ ದಾಳಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಅವೆನ್ಯೂ ವೃತ್ತದ ಬಳಿ ಈ ಘಟನೆ ಜರುಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ..
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾದರೆ ಜಾಗತಿಕ ಕಚ್ಚಾ ತೈಲ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತವು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನ ಆಮದು ಮಾಡಿಕೊಳ್ಳುವುದರಿಂದ, ತೈಲ ಬೆಲೆ ಏರಿಕೆ ಭಾರತೀಯ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಆತಂಕ ಹೂಡಿಕೆದಾರರಲ್ಲಿ ಹೆಚ್ಚಾಗಿದೆ.
ಅಮೆರಿಕ ಹೊಸ ದಾಳಿ ನಡೆಸಿದರೆ ಪ್ರತೀಕಾರ ತಪ್ಪುವುದಿಲ್ಲ, ಹಾರ್ಮುಜ್ ಜಲಸಂಧಿಯಲ್ಲಿ ವಿದೇಶಿ ಯುದ್ಧನೌಕೆಗಳಿಗೆ ಅವಕಾಶ ಕೊಡಲ್ಲ ಎಂದು ಇರಾನ್ ಖಡಕ್ ಆಗಿ ತಿರುಗೇಟು ನೀಡಿದೆ.
Trump Nominated Noble Prize: ವಿಶ್ವದ ಅತ್ಯಂತ ಪ್ರತಿಷ್ಠಿತ '2026 ರ ನೊಬೆಲ್ ಶಾಂತಿ ಪ್ರಶಸ್ತಿ'ಗೆ ನಾಮನಿರ್ದೇಶನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇದರ ಬಳಿಕ ಹೊಸ ಚರ್ಚೆಯೊಂದು ಹುಟ್ಟುಕೊಂಡಿದೆ.
Karoline Leavitt Video:ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರ ಪತ್ನಿ ಮೆಲಾನಿಯಾ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಇತ್ತೀಚಿನ ಭದ್ರತಾ ಘಟನೆಗಳಿಂದ ಅಮೆರಿಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಪ್ರಮುಖ ನಾಯಕರ ಭದ್ರತೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭದ್ರತಾ ವ್ಯವಸ್ಥೆ ಹಾಗೂ ಗುಪ್ತಚರ ಎಚ್ಚರಿಕಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ.
ಈ ಘಟನೆಯ ನಂತರ ಅಮೆರಿಕ ಸೀಕ್ರೆಟ್ ಸರ್ವಿಸ್ ವಿರುದ್ಧ ಟೀಕೆಗಳು ಹೆಚ್ಚಾಗಿವೆ. ರಾಜಕೀಯ ವಲಯದಲ್ಲೂ ಭದ್ರತಾ ವ್ಯವಸ್ಥೆ ಮರುಪರಿಶೀಲನೆ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.
Donald Trump: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ಹ*ತ್ಯೆಗೆ ಯತ್ನ ನಡೆದಿದೆ. ವಾಷಿಂಗ್ಟನ್ ಡಿ.ಸಿಯ ಪ್ರತಿಷ್ಠಿತ ವಾಷಿಂಗ್ಟನ್ ಹಿಲ್ಟನ್ ಹೋಟೆಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಭಾಷಣ ಮಾಡಲು ಟ್ರಂಪ್ ವೇದಿಕೆಗೆ ಹೋಗಲು ಸಿದ್ಧರಾಗುತ್ತಿದ್ದಂತೆಯೇ, ಹೋಟೆಲ್ನ ಹೊರಗೆ ಸತತವಾಗಿ 5 ರಿಂದ 8 ಬಾರಿ ಗುಂಡಿನ ಸದ್ದು ಕೇಳಿಬಂದಿದೆ. ಇದರಿಂದ ಎಚ್ಚೆತ್ತ ಸೀಕ್ರೆಟ್ ಸರ್ವಿಸ್ ಏಜೆಂಟ್ಗಳು ಕ್ಷಣಾರ್ಧದಲ್ಲಿ ಟ್ರಂಪ್ ಮತ್ತು ಗಣ್ಯರನ್ನ ಸುತ್ತುವರಿದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಗುಂಡಿನ ದಾಳಿ ನಡೆದ ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಪಡೆಯ ಸಿಬ್ಬಂದಿ ಒಬ್ಬ ಶಂಕಿತ ವ್ಯಕ್ತಿಯನ್ನ ಸ್ಥಳದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಶ್ವೇತಭವನದ ಸುತ್ತಮುತ್ತಲಿನ ಭದ್ರತೆಯನ್ನ ಹಿಂದೆಂದಿಗಿಂತಲೂ ಹೆಚ್ಚಿಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಹಿಲ್ಟನ್ ಹೋಟೆಲ್ನ ಘಟನೆ ಸೇರಿದಂತೆ ಟ್ರಂಪ್ ಮೇಲೆ ಒಟ್ಟು 4 ಬಾರಿ ಅಪರಿಚಿತರು ಹ*ತ್ಯೆಗೆ ಯತ್ನ ನಡೆಸಲಾಗಿತ್ತು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
Assassination attempt on Donald Trump : ವೇದಿಕೆಯಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೀಕ್ರೆಟ್ ಸರ್ವಿಸ್ ಏಜೆಂಟರು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.