ಜಾರ್ಖಂಡ್‌ನ 36 ಸಾವಿರ ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
Jharkhand : ಜಾರ್ಖಂಡ್‌ನ ಸಿಂದ್ರಿಯಲ್ಲಿ ಸುಮಾರು 36 ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಮಾರ್ಚ್ 1) ಮಾಡಿದರು.
36 thousand crore development projects of Jharkhand : ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಮಾರ್ಚ್ 1) ಜಾರ್ಖಂಡ್‌ನ ಸಿಂದ್ರಿಯಲ್ಲಿ ಸುಮಾರು 36 ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡಿದರು. ಭಾರತದ ಸ್ವಾವಲಂಬನೆಯತ್ತ ಇಡುವ ದೊಡ್ಡ ಹೆಜ್ಜೆ ಇದಾಗಿದ್ದು, ಸಿಂದ್ರಿಯಲ್ಲಿ ಹಿಂದೂಸ್ತಾನ್ ಫರ್ಟಿಲೈಸರ್ ಮತ್ತು ಕೆಮಿಕಲ್ಸ್ ಲಿಮಿಟೆಡ್‌ನ ಹೊಸ ಸ್ಥಾವರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಸಿಂದ್ರಿ ರಸಗೊಬ್ಬರ ಕಾರ್ಖಾನೆಯ ಪುನರಾರಂಭವು ಜಾರ್ಖಂಡ್ ಮತ್ತು ದೇಶದ ಯುವಕರಿಗೆ ಸಾವಿರಾರು ಹೊಸ ಉದ್ಯೋಗಾವಕಾಶಗಳಿಗೆ ನಾಂದಿಯಾಗಿದೆ ಎಂದು ಅವರು ಹೇಳಿದರು. ಸಿಂದ್ರಿಗಿಂತ ಮೊದಲು ರಾಮಗುಂಡಂ, ಗೋರಖ್‌ಪುರ ಮತ್ತು ಬರೌನಿಯಲ್ಲಿ ರಸಗೊಬ್ಬರ ಕಾರ್ಖಾನೆಗಳನ್ನು ತೆರೆದಿದ್ದೇವೆ ಎಂದು ಮಾತನಾಡಿದರು.
ಇದನ್ನು ಓದಿ :ಕರ್ನಾಟಕದಲ್ಲಿ ಕೇವಲ 3 ವರ್ಷದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ 22000ಕ್ಕೆ ದ್ವಿಗುಣ : ಡಿಜಿಪಿ ಅಲೋಕ್ ಮೋಹನ್
ಇದಾದ ಬಳಿಕ ಪ್ರಧಾನಿ ಅವರು ಚಾತ್ರಾ ಜಿಲ್ಲೆಯ ಉತ್ತರ ಕರ್ಣಾಪುರದಲ್ಲಿ NTPC ಯ 660 MW ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ರಾಮಗಢ ಜಿಲ್ಲೆಯಲ್ಲಿ CCL (ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್) ನ ಕಲ್ಲಿದ್ದಲು ನಿರ್ವಹಣಾ ಘಟಕವನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ಜಾರ್ಖಂಡ್ ಗವರ್ನರ್ ಸಿ.ಪಿ. ರಾಧಾಕೃಷ್ಣನ್ ಮತ್ತು ಮುಖ್ಯಮಂತ್ರಿ ಚಂಪೈ ಸೊರೆನ್ ಅವರೊಂದಿಗೆ ಅನೇಕ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮಾಡಿದರು.
ದಿಯೋಘರ್‌ನಿಂದ ಗೊಡ್ಡಾ ಮತ್ತು ತೋರಿ ಶಿವಪುರ ಮೂರನೇ ರೈಲು ಮಾರ್ಗವನ್ನು ಸಂಪರ್ಕಿಸುವ ಹೊಸ ರೈಲು ಮಾರ್ಗವನ್ನು ಉದ್ಘಾಟಿಸಿದರು ಮತ್ತು ದಿಯೋಘರ್-ದಿಬ್ರುಗಢ್ ನಡುವೆ ಟಾಟಾ ಬಾದಂಪಹಾರ್ ಡೈಲಿ ಮೆಮು ರೈಲಿನ ಹೊಸ ರೈಲಿಗೆ ಸಹ ಚಾಲನೆ ನೀಡಿದರು. ಇದಲ್ಲದೇ ಏಳು ರೈಲ್ವೆ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.
ಇದನ್ನು ಓದಿ : ಸಿದ್ದರಾಮಯ್ಯ ಒಬ್ಬ ಅಸಮರ್ಥ ಸಿಎಂ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ
ಈ ಸಂದರ್ಭದಲ್ಲಿ ನೆರೆದಿದ್ದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಂದ್ರಿಯಲ್ಲಿ ಮುಚ್ಚಿರುವ ರಸಗೊಬ್ಬರ ಕಾರ್ಖಾನೆ ಪುನಶ್ಚೇತನಕ್ಕೆ ಪ್ರತಿಜ್ಞೆ ಮಾಡಿದ್ದೇನೆ. ಇದರ ಅಡಿಗಲ್ಲು 2018 ರಲ್ಲಿ ಹಾಕಲಾಯಿತು ಮತ್ತು ಇಂದು ಉದ್ಘಾಟನೆಯಾಯಿತು. ಇದು ಮೋದಿಯವರ ಗ್ಯಾರಂಟಿಯಾಗಿದ್ದು ಇಂದು ಈ ಭರವಸೆ ಈಡೇರಿದೆ ಎಂದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.