ಮಹಾತ್ಮ ಗಾಂಧಿ ಯವರ `ಸ್ವಚ್ಚತೆ` ಪರಂಪರೆಯನ್ನು ಸ್ಮರಿಸಿದ ಪ್ರಧಾನಿ ಮೋದಿ
ಮಹಾತ್ಮ ಗಾಂಧಿಯವರ ಸ್ವಚ್ಛ ಭಾರತದ ಕನಸಿಗೆ ಮೋದಿ ಸಾಕಾಗುವುದಿಲ್ಲ, 125 ಕೋಟಿ ಭಾರತೀಯರ ಅಗತ್ಯವಿದೆ- ನಮೋ
ನವದೆಹಲಿ: ಮಹಾತ್ಮ ಗಾಂಧಿಯವರ ಸ್ವಚ್ಛತೆ ಪರಂಪರೆಯನ್ನು ಸ್ಮರಿಸುತ್ತಾ ಪ್ರಧಾನಿ ನರೇಂದ್ರ ಮೋದಿ 125 ಕೋಟಿ ಭಾರತೀಯರು ತಮ್ಮ ಹೃದಯದಲ್ಲಿ ಸ್ವಚ್ ಭಾರತ್ ಅಭಿಯಾನವನ್ನು ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ.
ದೆಹಲಿಯ ವಿಜ್ಞಾನ ಭವನದಲ್ಲಿ "ಸ್ವಚ್ಛ ಭಾರತ ಮಿಷನ್" ನ ಮೂರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡಿದ ನಮೋ, ಗಾಂಧಿಯವರ ಸ್ವಚ್ಛ ಭಾರತದ ಕನಸು ನನಸಾಗಲು ಮೋದಿ ಸಾಕಾಗುವುದಿಲ್ಲ ಅಥವಾ ಕೇವಲ ಆಯ್ದ ನಾಯಕರು ಮತ್ತು ಅಧಿಕಾರಿಗಳ ಗುಂಪಿನಿಂದ ಸಾಧ್ಯವಾಗುವುದಿಲ್ಲ. ಇದು ಸಾಕಾರವಾಗಲು 125 ಕೋಟಿ ಭಾರತೀಯರ ಅಗತ್ಯವಿದೆ. ಸ್ವಚ್ಛ ಭಾರತವು ಜನರ ಚಳುವಲಳಿಯಾಗಬೇಕು ಎಂದು ಮೋದಿ ಹೇಳಿದರು.
ಭಾರತವು ಸವಾಲುಗಳನ್ನು ಎದುರಿಸುತ್ತಿದೆ, ಅದರರ್ಥ ನಾವು ಅದರಿಂದ ಓಡಿಹೋಗಬೇಕು ಎಂದಲ್ಲ, ನಾವು ಅವುಗಳನ್ನು ಎದುರಿಸಿ ಅದರಲ್ಲಿ ಜಯ ಸಾಧಿಸಲು ಕೆಲಸ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ತಿಳಿಸಿದರು.