ನವದೆಹಲಿ: ದೇಶದ ನಿಧಾನಗತಿಯ ಆರ್ಥಿಕ ಬೆಳವಣಿಗೆಯ ಕುಸಿತದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ 40ಕ್ಕೂ ಅಧಿಕ ಅರ್ಥಶಾಸ್ತ್ರಜ್ಞರು ಮತ್ತು ಇತರ ತಜ್ಞರನ್ನು ಭೇಟಿ ಮಾಡಿ ಸಭೆ ನಡೆಸಿದರು. 


COMMERCIAL BREAK
SCROLL TO CONTINUE READING

ನೀತಿ ಆಯೋಗದ ಆಯೋಜಿಸಿದ್ದ ಸಭೆಯು ಪ್ರಮುಖವಾಗಿ ಆರ್ಥಿಕ ನೀತಿ ಹಾಗೂ ಮುಂದಿರುವ ಮಾರ್ಗ ಎನ್ನುವ ವಿಷಯವನ್ನು ಚರ್ಚಿಸಿತು.ಜುಲೈ 5 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಪೂರ್ಣ ಪ್ರಮಾಣದ ಬಜೆಟ್ ನ್ನು ಮಂಡಿಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದದಲ್ಲಿ ನೀತಿ ಆಯೋಗ ಸಭೆ ನಡೆಯಿತು.


ಈಗ ಈ ಸಭೆಯ ಕುರಿತಾಗಿ ಪ್ರಧಾನಿ ಕಚೇರಿ ಹೊರಡಿಸಿದ್ದು "ಅಧಿವೇಶನದಲ್ಲಿ, ಭಾಗವಹಿಸಿದವರು ಸ್ಥೂಲ ಆರ್ಥಿಕತೆ ಮತ್ತು ಉದ್ಯೋಗ, ಕೃಷಿ ಮತ್ತು ಜಲ ಸಂಪನ್ಮೂಲಗಳು, ರಫ್ತು, ಶಿಕ್ಷಣ ಮತ್ತು ಆರೋಗ್ಯದ ಆರ್ಥಿಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು" ಎಂದು ಪಿಎಂಒ ಹೇಳಿದೆ.ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ರಾವ್ ಇಂದರ್ಜೀತ್ ಸಿಂಗ್ ಭಾಗವಹಿಸಿದ್ದರು. ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್, ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಸಭೆಯಲ್ಲಿ ಉಪಸ್ಥಿತರಿದ್ದರು.  


2018-19ರ ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯು ಶೇಕಡಾ 5.8 ಕ್ಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರದ ಸಭೆ ಬಂದಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರದ  ಅಂಕಿಅಂಶಗಳು ಹೇಳುವಂತೆ  2018-19ರ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 2017-18ರಲ್ಲಿ (2011-12 ಬೆಲೆಯಲ್ಲಿ) ಐದು ವರ್ಷಗಳ ಕನಿಷ್ಠ 6.8 ಶೇಕಡಾಕ್ಕೆ ಇಳಿದಿದೆ.