Modi Scuba Diving: ಪ್ರಧಾನಿ ಮೋದಿ ಸ್ಕೂಬಾ ಡೈವಿಂಗ್… ಪ್ರಾಚೀನ ದ್ವಾರಕಾ ನಗರ ಕಂಡು ಮನಸೋತ ನಮೋ
PM Narendra Modi Scuba Diving: ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ದ್ವಾರಕೆಯ ಗತಭವ್ಯತೆ ಮತ್ತು ಸಮೃದ್ಧಿಯನ್ನು ನೆನಪಿಸಿಕೊಂಡು ಗೌರವ ಸಲ್ಲಿಸಿದರು. ಇದಲ್ಲದೆ, ಸ್ಕೂಬಾ ಡೈವಿಂಗ್ ಮಾಡುವ ಮೊದಲು ಮೋದಿಯವರ ಸೊಂಟಕ್ಕೆ ನವಿಲು ಗರಿಗಳನ್ನು ಸಹ ಕಟ್ಟಲಾಗಿತ್ತು.
PM Narendra Modi Scuba Diving: ಇಂದು (ಫೆಬ್ರವರಿ 25) ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಭೇಟಿಯ ಎರಡನೇ ದಿನ. ಈ ಸಮಯದಲ್ಲಿ, ಸ್ಕೂಬಾ ಡೈವಿಂಗ್ ಮುಖಾಂತರ ಆಳವಾದ ಸಮುದ್ರಕ್ಕಿಳಿದು ಮುಳುಗಡೆಯಾಗಿದ್ದ ಪ್ರಾಚೀನಾ ದ್ವಾರಕೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, “ಮುಳುಗಡೆಯಾದ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಅತ್ಯಂತ ದೈವಿಕ ಅನುಭವ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. “ಆಧ್ಯಾತ್ಮಿಕ ವೈಭವ ಮತ್ತು ಶಾಶ್ವತ ಭಕ್ತಿಯ ಪ್ರಾಚೀನ ಯುಗಕ್ಕೆ ನಾನು ಸಂಪರ್ಕ ಹೊಂದಿದ್ದೇನೆ. ಶ್ರೀ ಕೃಷ್ಣನು ನಮ್ಮೆಲ್ಲರನ್ನು ಆಶೀರ್ವದಿಸಲಿ” ಎಂದಿದ್ದಾರೆ.
ಇದನ್ನೂ ಓದಿ:Jahnvi Kapoor: ಬಾಲಿವುಡ್ ಸುಂದರಿ ಜಾನ್ವಿ ಕಪೂರ್’ಗೆ RCBಯ ಆ ಇಬ್ಬರು ಆಟಗಾರರೇ ಫೇವರೇಟ್ ಕ್ರಿಕೆಟರ್ಸ್!
ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ದ್ವಾರಕೆಯ ಗತಭವ್ಯತೆ ಮತ್ತು ಸಮೃದ್ಧಿಯನ್ನು ನೆನಪಿಸಿಕೊಂಡು ಗೌರವ ಸಲ್ಲಿಸಿದರು. ಇದಲ್ಲದೆ, ಸ್ಕೂಬಾ ಡೈವಿಂಗ್ ಮಾಡುವ ಮೊದಲು ಮೋದಿಯವರ ಸೊಂಟಕ್ಕೆ ನವಿಲು ಗರಿಗಳನ್ನು ಸಹ ಕಟ್ಟಲಾಗಿತ್ತು.
ಗುಜರಾತ್’ನ ಓಖಾದಲ್ಲಿ ನಿರ್ಮಿಸಲಾದ ಸುದರ್ಶನ ಸೇತುವೆಯನ್ನು ಉದ್ಘಾಟಿಸಿದ ನಂತರ ಶ್ರೀ ಕೃಷ್ಣನ ನಗರ ದ್ವಾರಕೆಗೆ ಮೋದಿ ತೆರಳಿದ್ದರು. ದ್ವಾರಕಾ ಹೆಲಿಪ್ಯಾಡ್’ನಿಂದ ರಸ್ತೆ ಮಾರ್ಗವಾಗಿ ಜಗತ್ ಮಂದಿರಕ್ಕೆ ಶ್ರೀ ದ್ವಾರಕಾಧೀಶ ದೇವರ ದರ್ಶನಕ್ಕೆ ಹೊರಟಾಗ ವಿವಿಧ ಸ್ಥಳಗಳಲ್ಲಿ ನಾಗರಿಕರು ಮೋದಿ ಅವರನ್ನು ಸ್ವಾಗತಿಸಿದರು.
ಇದನ್ನೂ ಓದಿ: ತಮಿಳುನಾಡು ಸಚಿವ ಮುರುಗನ್ ವಿರುದ್ಧ ಪ್ರತಿಭಟನೆ: ಒಣಗಿದ ತರಗು ಪ್ರದರ್ಶಿಸಿ ಆಕ್ರೋಶ
ಅನೇಕ ಮಹಿಳೆಯರು ಗರ್ಬಾ ನೃತ್ಯ ಮಾಡುತ್ತಿದ್ದರೆ, ಕೃಷ್ಣ ಭಕ್ತಿ, ಢೋಲ್ ಮತ್ತು ಶೆಹನಾಯಿಯ ಸಂಗೀತದೊಂದಿಗೆ ನಿಂತಿದ್ದ ಪ್ರೇಕ್ಷಕರು ಮೋದಿಯವರನ್ನು ಸ್ವಾಗತಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.