ತಮಿಳುನಾಡು ಸಚಿವ ಮುರುಗನ್ ವಿರುದ್ಧ ಪ್ರತಿಭಟನೆ: ಒಣಗಿದ ತರಗು ಪ್ರದರ್ಶಿಸಿ ಆಕ್ರೋಶ

Protest against Tamil Nadu: ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಭಾನುವಾರ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸಚಿವ ದೊರೈ ಮುರುಗನ್, ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ, ಜೋಳ, ಕಬ್ಬಿನ ಒಣಗಿದ ತರಗು ಪ್ರದರ್ಶನ ಮಾಡಿ ಆಕ್ರೋಶ ಹೊರಹಾಕಿದರು.

Written by - Zee Kannada News Desk | Edited by - Bhavishya Shetty | Last Updated : Feb 25, 2024, 02:15 PM IST
    • ಮೇಕೆದಾಟು ಯೋಜನೆಗೆ ಅಪಸ್ವರ ಎತ್ತಿರುವ ತಮಿಳುನಾಡು ಸಚಿವ ದೊರೈ ಮುರುಗನ್
    • ಚಾಮರಾಜನಗರದಲ್ಲಿ ಕನ್ನಡಪರ ಹೋರಾಟಗಾರರ ಪ್ರತಿಭಟನೆ
    • ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಪ್ರತಿಭಟನೆ
ತಮಿಳುನಾಡು ಸಚಿವ ಮುರುಗನ್ ವಿರುದ್ಧ ಪ್ರತಿಭಟನೆ: ಒಣಗಿದ ತರಗು ಪ್ರದರ್ಶಿಸಿ ಆಕ್ರೋಶ title=
Chamarajanagar Protest

Protest against Tamil Nadu: ಮೇಕೆದಾಟು ಯೋಜನೆಗೆ ಅಪಸ್ವರ ಎತ್ತಿರುವ ತಮಿಳುನಾಡು ಸಚಿವ ದೊರೈ ಮುರುಗನ್ ವಿರುದ್ಧ ಚಾಮರಾಜನಗರದಲ್ಲಿ ಕನ್ನಡಪರ ಹೋರಾಟಗಾರರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು‌.

ಇದನ್ನೂ ಓದಿ: ಇದು ಒಂದೇ ಒಂದು ಕಂಬಗಳಿಲ್ಲದ ಸೇತುವೆ: ಈ ಬ್ರಿಡ್ಜ್ ರಚನೆಯಾಗುತ್ತಿರೋದು ದೇಶದಲ್ಲೇ ಮೊದಲು!

ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಭಾನುವಾರ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸಚಿವ ದೊರೈ ಮುರುಗನ್, ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ, ಜೋಳ, ಕಬ್ಬಿನ ಒಣಗಿದ ತರಗು ಪ್ರದರ್ಶನ ಮಾಡಿ ಆಕ್ರೋಶ ಹೊರಹಾಕಿದರು.

ಕಾವೇರಿ ವಿಚಾರದಲ್ಲಿ ಮತ್ತೇ ಸುಪ್ರೀಂ ಕೋರ್ಟ್’ಗೆ ಹೋಗುವುದಾಗಿ ಮುರುಗನ್ ಹೇಳಿದ್ದು ಅವರಿಗೆ ಈಗ ಹರಿಸುತ್ತಿರುವ ನೀರು ಸಾಕಾಗುತ್ತಿಲ್ಲವಂತೆ.‌ ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇದ್ದರೇ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು. ಈಗಾಗಲೇ ಜನರು ತರಗೆಲೆಗಳಾಗಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಟೀಂ ಇಂಡಿಯಾಗೆ ಮುಳುವಾಯ್ತು ಅಂಪೈರ್ ನಿರ್ಧಾರ: ಒಂದಲ್ಲ, ಎರಡಲ್ಲ… 7 ನಿರ್ಣಯಗಳು ಭಾರತದ ವಿರುದ್ಧ!!

ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆ ತರುವ ಮೂಲಕ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಜಲಕ್ಷಾಮ ಉಂಟಾಗಿ, ಮುಂದಿನ ದಿನಗಳಲ್ಲಿ ವಿಕೋಪಕ್ಕೆ ಸಿಲುಕಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News