ಸಂಸತ್ತಿನಲ್ಲಿ ಮಗುವಿನೊಂದಿಗೆ ಆಡುತ್ತಿರುವ ಪ್ರಧಾನಿ ನರೇಂದ್ರ ಮೋದಿ; ಆ ಮಗು ಯಾರು ಗೊತ್ತೇ!
ಪ್ರಧಾನಿ ನರೇಂದ್ರ ಮೋದಿಯವರಿಗೆ ಮಕ್ಕಳ ಮೇಲಿರುವ ವಾತ್ಸಲ್ಯದ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಪ್ರಧಾನಿ ಮೋದಿ ಮಕ್ಕಳೊಂದಿಗೆ ಸಂವಹನ ನಡೆಸಿರುವುದನ್ನು ನಾವು ನೋಡಿದ್ದೇವೆ.
ನವದೆಹಲಿ: ಸಂಸತ್ತಿನೊಳಗಿನ ಭಾರತೀಯ ರಾಜಕಾರಣದ ಜಂಜಾಟದ ಮಧ್ಯೆ, ಯುವ ಸಂದರ್ಶಕರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಬಂದಾಗ ತಾಜಾತನದ ಅಲೆಯಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಆ ಸಂದರ್ಭದಲ್ಲಿ ಮಗುವಿನೊಂದಿಗೆ ಕೊಂಚ ಸಮಯ ಕಳೆದಿದ್ದಾರೆ. ಪ್ರಧಾನಿ ಮೋದಿ ಶಿಶುವಿನೊಂದಿಗೆ ಆಡುತ್ತಿರುವ ಫೋಟೋಗಳನ್ನು ಅವರ ಅಧಿಕೃತ ಇನ್‌ಸ್ಟಾಗ್ರಾಂ, ಟ್ವಿಟರ್ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿದೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ.
ಪ್ರಧಾನಿ ಮೋದಿಯವರ ಅಧಿಕೃತ ಇನ್‌ಸ್ಟಾಗ್ರಾಂ, ಟ್ವಿಟರ್ ಹ್ಯಾಂಡಲ್ ನಲ್ಲಿ ಅವರು ಮಗುವಿನೊಂದಿಗೆ ಸಂತೋಷವಾಗಿ ಆಡುತ್ತಿರುವ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಒಂದರಲ್ಲಿ ಹಾಲುಗಲ್ಲದ ಪುಟಾಣಿಯು ಮೋದಿಯವರ ತೊಡೆ ಮೇಲೆ ಆಟಿಕೆ ಹಿಡಿದು ಆಡುತ್ತಿದ್ದರೆ, ಮತ್ತೂಂದರಲ್ಲಿ, ಪ್ರಧಾನಿ ಎದುರಿ ರುವ ಮೇಜಿನ ಮೇಲಿಟ್ಟಿದ್ದ ಚಾಕೋಲೆಟ್‌ಗಳನ್ನು ತೆಗೆದುಕೊಳ್ಳಲು ನೋಡುತ್ತಿದೆ. ಈ ಫೋಟೋಗಳನ್ನು ಕಂಡ ಎಲ್ಲರ ಮನದಲ್ಲೂ ಮೂಡಿದ್ದ ಪ್ರಶ್ನೆ ಪ್ರಧಾನಿ ತೊಡೆ ಮೇಲಿದ್ದ ಮಗು ಯಾರದ್ದು? ಎಂಬುದು.
ಆ ಪ್ರಶ್ನೆ ನಿಮ್ಮಲ್ಲೂ ಮಾಡಿದ್ದರೆ ಅದಕ್ಕೆ ಉತ್ತರ ಆ ಮಗು, ಬಿಜೆಪಿ ಹಿರಿಯ ನಾಯಕ ಡಾ| ಸತ್ಯನಾರಾಯಣ ಜಟಿಯಾ ಅವರ ಮೊಮ್ಮಗಳು.
ಫೋಟೋಗಳು ತ್ವರಿತವಾಗಿ ವೈರಲ್ ಆಗಿದ್ದು, ಪೋಸ್ಟ್ ಮಾಡಿದ 30 ನಿಮಿಷಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರಿಂದ ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಮಕ್ಕಳ ಮೇಲಿರುವ ವಾತ್ಸಲ್ಯದ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಪ್ರಧಾನಿ ಮೋದಿ ಮಕ್ಕಳೊಂದಿಗೆ ಸಂವಹನ ನಡೆಸಿರುವುದನ್ನು ನಾವು ನೋಡಿದ್ದೇವೆ. ಪ್ರಧಾನಿ ವಿದೇಶಕ್ಕೆ ಪ್ರವಾಸ ಕೈಗೊಂಡ ಸಂದರ್ಭದಲ್ಲೂ ಸಹ, ಪ್ರಧಾನ ಮಂತ್ರಿ ಮಕ್ಕಳೊಂದಿಗೆ ಮಾತನಾಡುವ ಅಥವಾ ಆಡುತ್ತಾರೆ ಮತ್ತು ಮಕ್ಕಳೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ.