ಇಂದು ದೇಶದೆಲ್ಲೆಡೆ ಸಂಭ್ರಮದಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರದ ಹಿರಿಮೆ ಕೆಂಪುಕೋಟೆ ಆವರಣದಿಂದ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ದೇಶದ ಅಭಿವೃದ್ಧಿ, ಅಭಿವೃದ್ಧಿಯ ಸಂದರ್ಭದಲ್ಲಿ ದೇಶ ಎದುರಿಸಿದ ಸಮಸ್ಯೆಗಳು ಸೇರಿದಂತೆ ಮುಂಬರುವ 25 ವರ್ಷಗಳಲ್ಲಿ ಭಾರತದ ಚಿತ್ರಣ ಯಾವ ರೀತಿ ಬದಲಾಗಲಿದೆ ಎಂಬ ಪರಿಕಲ್ಪನೆಯನ್ನು ಮುಂದಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Breaking News: ಸ್ವಾತಂತ್ರ್ಯ ದಿನಾಚರಣೆಯಂದೇ ಬಿಜೆಪಿಯ 2 ಗುಂಪಿನ ಕಾರ್ಯಕರ್ತರ ನಡುವೆ ಮಾರಾಮಾರಿ?!


ಇನ್ನು ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸಿದ ಪ್ರಧಾನಿ ಮೋದಿ, ದೇಶದ ಸಂಕಲ್ಪವನ್ನು ಪ್ರಸ್ತಾಪಿಸಿದರು. “ನಾವು ಸ್ವಾತಂತ್ರ್ಯದ ಅಮೃತ ವರ್ಷವನ್ನು. ಮುಂದಿನ 25 ವರ್ಷಗಳಲ್ಲಿ, ಭಾರತದ ಸ್ವಾತಂತ್ರ್ಯದ 100 ವರ್ಷಗಳು ಪೂರ್ಣಗೊಳ್ಳುತ್ತದೆ. ಈ ಸಂದರ್ಭದಲ್ಲಿ ಭಾರತಕ್ಕೆ 5 ನಿರ್ಣಯಗಳು ಅವಶ್ಯಕ” ಎಂದು ಪ್ರಧಾನಿ ಹೇಳಿದರು,


ಮೊದಲ ನಿರ್ಣಯ - ಅಭಿವೃದ್ಧಿ ಹೊಂದಿದ ಭಾರತ. ಎರಡನೆಯ ಪ್ರತಿಜ್ಞೆ- ಗುಲಾಮಗಿರಿಯ ಭಾಗವು ನಮ್ಮ ಮನಸ್ಸಿನಲ್ಲಿ ಉಳಿಯಬಾರದು. ನೂರಾರು ವರ್ಷಗಳ ಕಾಲ, ಗುಲಾಮಗಿರಿಯು ನಮ್ಮನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡಿತ್ತು. ನಮ್ಮ ಆಲೋಚನೆಯಲ್ಲಿ ವಿರೂಪಗಳನ್ನು ಸೃಷ್ಟಿಸಿತು. ಹೀಗಾಗಿ ನಾವು ಗುಲಾಮಗಿರಿಯ ಒಂದು ಸಣ್ಣ ಸಂಗತಿಯನ್ನು ಕಂಡರೆ, ಅದರಿಂದ ಸ್ವಾತಂತ್ರ್ಯವು ನೀರಾಗುತ್ತದೆ. ಮೂರನೇ ನಿರ್ಣಯ-ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ಈ ಪರಂಪರೆಯೇ ಭಾರತಕ್ಕೆ ಸುವರ್ಣ ಇತಿಹಾಸವನ್ನು ತಂದುಕೊಟ್ಟಿದೆ. ನಾಲ್ಕನೇ ಪ್ರತಿಜ್ಞೆಯಾಗಿ ಏಕತೆ ಮತ್ತು ಒಗ್ಗಟ್ಟನ್ನು ಸ್ವೀಕರಿಸೋಣ. ಏಕೆಂದರೆ 130 ಕೋಟಿ ದೇಶವಾಸಿಗಳಲ್ಲಿ ಒಗ್ಗಟ್ಟು ಅಗತ್ಯ. ಇನ್ನು ಐದನೇ ನಾಗರಿಕರ ಕರ್ತವ್ಯವನ್ನು ಹೇಳಿದರು. ಪ್ರಧಾನಿ-ಸಿಎಂಗಳು ಕೂಡ ಇದರಲ್ಲಿ ಹೊರತಲ್ಲ, ಅವರೂ ದೇಶದ ಪ್ರಜೆಗಳು. ಕನಸುಗಳು ದೊಡ್ಡದಾಗಿದ್ದರೆ, ನಿರ್ಣಯಗಳು ದೊಡ್ಡದಾಗಿರುತ್ತವೆ ಎಂದು ಹೇಳಿದರು.


ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ, “ಭಾರತದ ಪ್ರತಿಯೊಂದು ಮೂಲೆಯಲ್ಲಿಯೂ, ಕೆಲವು ಕಾರಣಗಳಿಂದಾಗಿ ಇತಿಹಾಸದಲ್ಲಿ ಸ್ಥಾನ ಪಡೆಯದ ಅಥವಾ ಮರೆತುಹೋದ ಎಲ್ಲ ಮಹಾನ್ ಪುರುಷರನ್ನು ನೆನಪಿಸಿಕೊಳ್ಳಲು ಪ್ರಯತ್ನ ಮಾಡಲಾಗಿದೆ. ಇಂದು ದೇಶ ಅಂತಹ ವೀರರನ್ನು, ಮಹಾಪುರುಷರನ್ನು, ತ್ಯಾಗ ಬಲಿದಾನಿಗಳನ್ನು, ಸತ್ಯಾಗ್ರಹಿಗಳನ್ನು ಸ್ಮರಿಸಿದೆ, ನೆನೆದು ನಮಿಸಿದೆ” ಎಂದು ಹೇಳಿದರು.


ಇದನ್ನೂ ಓದಿ: Independence Day 2022: ‘ಹೊಸ ಸಂಕಲ್ಪದೊಂದಿಗೆ ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ಸಮಯ ಬಂದಿದೆ’


ಭಾರತ ಪ್ರಜಾಪ್ರಭುತ್ವದ ಮಾತೃ: “ಈ ಅಮೂಲ್ಯವಾದ ಸಾಮರ್ಥ್ಯ ನಮ್ಮಲ್ಲಿದೆ ಎಂಬುದನ್ನು ನಮ್ಮ ಭಾರತ ಸಾಬೀತುಪಡಿಸಿದೆ. 75 ವರ್ಷಗಳ ಪಯಣದಲ್ಲಿ ಎಲ್ಲ ನಿರೀಕ್ಷೆ, ಏರಿಳಿತಗಳ ನಡುವೆ ಪ್ರತಿಯೊಬ್ಬರ ಶ್ರಮದಿಂದ ಇಲ್ಲಿಗೆ ತಲುಪಲು ಸಾಧ್ಯವಾಯಿತು” ಎಂದು ಹೇಳಿದರು. ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕ್ ಉಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್, ಇಂತಹ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ದೇಶವು ಕೃತಜ್ಞವಾಗಿದೆ ಎಂದು ಕೆಂಪು ಕೋಟೆಯಲ್ಲಿ ಒಂಬತ್ತನೇ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದರು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.