ಚಿಕ್ಕಬಳ್ಳಾಪುರ: ಸ್ವಾತಂತ್ರ್ಯ ದಿನಾಚರಣೆಯ ದಿನವೇ ಬಿಜೆಪಿಯ ಎರಡು ಗುಂಪಿನ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಸಚಿವ ಡಾ.ಕೆ.ಸುಧಾಕರ್ ಹಾಗೂ ಬಿಜೆಪಿಯ ಮುನಿರಾಜು ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ ಅಂತಾ ಹೇಳಲಾಗುತ್ತಿದೆ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿ ಬೀಚಗಾನಹಳ್ಳಿ ಕ್ರಾಸ್‍ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾನುವಾರ ಮಧ್ಯಾಹ್ನ ಬಾಗೇಪಲ್ಲಿಯಲ್ಲಿ ನಡೆದ ‘75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ’ದ ಬೈಕ್ ರ್ಯಾಲಿ ವಿಚಾರದಲ್ಲಿ ಗಲಾಟೆ ಶುರುವಾಗಿದೆ. ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದವರಿಗೆ 500 ರೂ. ಮೌಲ್ಯದ ಪೆಟ್ರೋಲ್ ಹಾಕಿಸುವ ಭರವಸೆ ನೀಡಲಾಗಿತ್ತಂತೆ. ಆದರೆ ಮುನಿರಾಜು ಅಭಿಮಾನಿಗಳಿಗೆ ಪೆಟ್ರೋಲ್ ಹಾಕಿಸಿ, ನಮಗೆ ಹಾಕಿಸಿಲ್ಲವೆಂದು ಸಚಿವ ಸುಧಾಕರ್ ಬಂಬಲಿಗರು ಆಕ್ರೋಶ ವ್ಯಕ್ತಪಡಸಿದ್ದಾರೆ.
ಇದನ್ನೂ ಓದಿ: Independence Day 2022: ಪ್ರಧಾನಿ ಮೋದಿಯವರ ಇಂದಿನ ಕಾರ್ಯಕ್ರಮಗಳ ವಿವರ ಇಲ್ಲಿದೆ ನೋಡಿ
ಪೆಟ್ರೋಲ್ ಹಾಕಿಸುವ ವಿಚಾರವಾಗಿಯೇ ಬಿಜೆಪಿಯ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಭಾನುವಾರ ಮಧ್ಯಾಹ್ನ ಬಾಗೇಪಲ್ಲಿ ಪಟ್ಟಣದಲ್ಲಿ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಬೈಕ್ ರ್ಯಾಲಿಯಲ್ಲಿ ಬಾಗವಹಿಸಿದ್ದವರಿಗೆ 500 ರೂ. ಮೌಲ್ಯದ ಉಚಿತ ಪೆಟ್ರೋಲ್ ಹಾಗೂ ಹೆಲ್ಮೆಟ್ ವಿತರಿಸಲಾಗಿತ್ತು.
ಮುನಿರಾಜು ಬೆಂಬಲಿಗರಿಗೆ ಪೆಟ್ರೋಲ್ ಹಾಕಿಸಿ ನಮಗೆ ಏಕೆ ಹಾಕಿಸಿಲ್ಲವೆಂದು ಮುನಿರಾಜುಗೆ ಸುಧಾಕರ್ ಬೆಂಬಲಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಎರಡು ಬಣದ ಕಾರ್ಯಕರ್ತರು ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಗುಡಿಬಂಡೆ ಪೊಲೀಸರು ಹರಸಾಹಸಪಡುವಂತಾಗಿದೆ.
ಇದನ್ನೂ ಓದಿ: Happy Independence Day 2022: ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಸಂಭ್ರಮದಲ್ಲಿ ಭಾರತ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.