ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಇಂದು ಮಹಾರಾಷ್ಟ್ರದ ಸಂಗೋಲ ಮತ್ತು ಪಶ್ಚಿಮ ಬಂಗಾಳದ ಶಾಲಿಮಾರ್ ನಡುವೆ ಸಂಚರಿಸಲಿರುವ 100ನೇ ಕಿಸಾನ್ ರೈಲಿಗೆ‌ (Kisan Train) ಹಸಿರು ನಿಶಾನೆ ತೋರಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಸಂಜೆ 4.30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯುವ ಕಾರ್ಯಕ್ರಮದಲ್ಲಿ 100ನೇ ಕಿಸಾನ್ ರೈಲಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಗ್ರೀನ್ ಸಿಗ್ನಲ್ ಸಿಗಲಿದೆ. ಕಿಸಾನ್ ರೈಲಿನಲ್ಲಿ ಬಹು ಸಾಮಗ್ರಿಯ ಸಾಗಣೆಯ ವ್ಯವಸ್ಥೆ ಕಲ್ಪಿಸಲಾಗಿದೆ.


ಇದನ್ನೂ ಓದಿ: PM Kisan Update: ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ


ಅಂದರೆ ಹೂಕೋಸು, ದೊಣ್ಣೆಮೆಣಸಿನಕಾಯಿ, ಎಲೆ ಕೋಸು, ನುಗ್ಗೆಕಾಯಿ, ಮೆಣಸಿನಕಾಯಿ, ಈರುಳ್ಳಿ ಮತ್ತು ಹಣ್ಣುಗಳಾದ ದ್ರಾಕ್ಷಿ, ಕಿತ್ತಲೆ, ದಾಳಿಂಬೆ, ಬಾಳೆಹಣ್ಣು, ಮರಸೇಬು ಇತ್ಯಾದಿಯನ್ನು ಸಾಗಿಸಬಹುದಾಗಿದೆ. ಬೇಗ ಹಾಳಾಗುವ ಸರಕುಗಳನ್ನು ಲೋಡ್ ಮಾಡಲು ಮತ್ತು ಇಳಿಸಲು ಪ್ರಮಾಣದ ಮೇಲೆ ಯಾವುದೇ ನಿರ್ಬಂಧಗಳು ಇರುವುದಿಲ್ಲ. ಭಾರತ  ಸರ್ಕಾರ (Central Government) ಹಣ್ಣುಗಳು ಮತ್ತು ತರಕಾರಿಗಳ ಸಾಗಣೆಗೆ ಶೇಕಡ 50 ಸಹಾಯಧನವನ್ನು ವಿಸ್ತರಿಸಿದೆ.


ಇದನ್ನೂ ಓದಿ: PM Kisan Samman Nidhi Yojana: ನಿಮ್ಮ ಹಣ ಎಲ್ಲಿ ಸಿಲುಕಿದೆ ಎಂದು ತಿಳಿಯಿರಿ


ಕಿಸಾನ್ ರೈಲಿನ ಬಗ್ಗೆ:
ಮೊತ್ತ ಮೊದಲ ಕಿಸಾನ್ ರೈಲನ್ನು (Kisan Rail) 2020ರ ಆಗಸ್ಟ್ 7ರಂದು ದೇವಾಲೈನಿಂದ ದನಾಪುರದವರೆಗೆ ಬಿಡಲಾಗಿತ್ತು. ನಂತರ ಅದನ್ನು ಮುಜಾಫರ್ಪುರವರೆಗೆ ವಿಸ್ತರಿಸಲಾಗಿತ್ತು. ರೈತರಿಂದ (Farmers) ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಈ ರೈಲಿನ ಸಂಚಾರವನ್ನು ವಾರಕ್ಕೊಮ್ಮೆ ಬದಲು ವಾರದಲ್ಲಿ ಮೂರು ದಿನಗಳಿಗೆ ಹೆಚ್ಚಿಸಲಾಯಿತು. ಕಿಸಾನ್ ರೈಲು ಕೃಷಿ ಉತ್ಪನ್ನಗಳನ್ನು ದೇಶದಾದ್ಯಂತ ತ್ವರಿತವಾಗಿ ಸಾಗಿಸುವುದನ್ನು ಖಾತ್ರಿಪಡಿಸುವಲ್ಲಿ ಮಹತ್ವದ್ದಾಗಿದೆ. ಇದು ಬೇಗ ನಾಶವಾಗುವ ಉತ್ಪನ್ನಗಳ ತಡೆರಹಿತ ಸಾಗಾಟಕ್ಕೆ ಅವಕಾಶ ಕಲ್ಪಿಸಿದೆ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಪ್ರಕಟಣೆ ತಿಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.