ಫೆಬ್ರವರಿ 4 ರಂದು ಡಿಜಿಟಲ್ ರ್ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 4 ರಂದು ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಎರಡು ಡಿಜಿಟಲ್ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಗುರುವಾರದಂದು ಹೇಳಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 4 ರಂದು ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಎರಡು ಡಿಜಿಟಲ್ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಗುರುವಾರದಂದು ಹೇಳಿದೆ.
ಇದನ್ನೂ ಓದಿ: Siddaramaiah : 'ಸಿಎಂ ಇಬ್ರಾಹಿಂ ಇಲ್ಲೇ ಇದ್ರೂ ನನ್ನ ಸ್ನೇಹಿತ, ಪಕ್ಷ ಬಿಟ್ಟರೂ ನನ್ನ ಸ್ನೇಹಿತ'
ಉತ್ತರ ಪ್ರದೇಶದ ರ್ಯಾಲಿಯಲ್ಲಿ ಮೋದಿ ಅವರು ಮೀರತ್, ನೋಯ್ಡಾ, ಘಾಜಿಯಾಬಾದ್, ಅಲಿಗಢ್ ಮತ್ತು ಹಾಪುರ್ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳನ್ನು ಡಿಜಿಟಲ್ ಮೂಲಕ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷ ತಿಳಿಸಿದೆ.ಅದೇ ರೀತಿ ಉತ್ತರಾಖಂಡದ ರ್ಯಾಲಿಯಲ್ಲಿ ಅವರು ಅಲ್ಮೋರಾ, ಪಿಥೋರಗಢ, ಬಾಗೇಶ್ವರ್ ಮತ್ತು ಚಂಪಾವತ್‌ನಿಂದ ವಿಧಾನಸಭಾ ಕ್ಷೇತ್ರಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದು ಮೋದಿಯವರ ಎರಡನೇ ಸೆಟ್ ಡಿಜಿಟಲ್ ರ್ಯಾಲಿ ಆಗಿದ್ದು, ಮೊದಲನೆಯದನ್ನು ಜನವರಿ 31 ರಂದು ಆಯೋಜಿಸಲಾಗಿದೆ.ಮೋದಿ ನಂತರ ಪಂಜಾಬ್‌ನಲ್ಲಿ ರಾಜಕೀಯ ರ್ಯಾಲಿಗಳನ್ನು ಡಿಜಿಟಲ್ ಮೂಲಕ ಉದ್ದೇಶಿಸಿ ಮಾತನಾಡಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.ಉತ್ತರ ಪ್ರದೇಶದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ಫೆಬ್ರವರಿ 10 ರಂದು ಮತ್ತು ಎರಡನೇ ಮತ್ತು ಮೂರನೇ ಹಂತ ಫೆಬ್ರವರಿ 14 ಮತ್ತು 20 ರಂದು ನಡೆಯಲಿದೆ.
ಇದನ್ನೂ ಓದಿ: Guest Lecturers : ಅತಿಥಿ ಉಪನ್ಯಾಸಕರ ನೇಮಕ ; ಹಿರಿತನ, ಅರ್ಹತೆಗೆ ಆದ್ಯತೆ
ಪಶ್ಚಿಮ ಉತ್ತರ ಪ್ರದೇಶದ ಬಹುತೇಕ ಕ್ಷೇತ್ರಗಳಿಗೆ ಮೊದಲ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದೆ.ಚುನಾವಣಾ ಆಯೋಗವು ಇಲ್ಲಿಯವರೆಗೆ ಪೂರ್ಣ ಪ್ರಮಾಣದ ಭೌತಿಕ ರ್ಯಾಲಿಗಳಿಗೆ ಅನುಮತಿ ನೀಡಿಲ್ಲ ಮತ್ತು 1,000 ಜನರ ಮಿತಿಯೊಂದಿಗೆ ಸಾರ್ವಜನಿಕ ಸಭೆಗಳನ್ನು ಮಾತ್ರ ಅನುಮತಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.