Siddaramaiah : 'ಸಿಎಂ ಇಬ್ರಾಹಿಂ ಇಲ್ಲೇ ಇದ್ರೂ ನನ್ನ ಸ್ನೇಹಿತ, ಪಕ್ಷ ಬಿಟ್ಟರೂ ನನ್ನ ಸ್ನೇಹಿತ'

ಸಿಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷ ತೊರೆಯುವ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ರಾಜಕೀಯ ಬೇರೆ, ವೈಯಕ್ತಿಕ ಬೇರೆ, ಅವನಿಗೆ ಕೋಪ ಕಡಿಮೆ ಆದ ಮೇಲೆ ಹೋಗಿ ಮಾತಾಡ್ತೇನೆ ಎಂದು ಹೇಳಿದ್ದಾರೆ.

Written by - Channabasava A Kashinakunti | Last Updated : Feb 3, 2022, 03:41 PM IST
  • ಸಿಎಂ ಇಬ್ರಾಹಿಂ ನನ್ನ ಸ್ನೇಹಿತ, ಅವನು ಪಕ್ಷ ಬಿಡಲ್ಲ ಅಂತ ನನಗೆ ವಿಶ್ವಾಸವಿದೆ
  • ಅವನು ಪಕ್ಷ ಬಿಟ್ಟರೂ ನಾನು ಅವನ ಮನೆಗೆ ಹೋಗ್ತೇನೆ
  • ಹಿಜಾಬ್ ವಿಚಾರ ಮತ್ತೆ ಪೆನ್ನಾರ್ ಕಾವೇರಿ ನದಿ ಜೋಡಣೆಗೆ ಸರ್ವ ಪಕ್ಷಗಳ ವಿರೋಧ
Siddaramaiah : 'ಸಿಎಂ ಇಬ್ರಾಹಿಂ ಇಲ್ಲೇ ಇದ್ರೂ ನನ್ನ ಸ್ನೇಹಿತ, ಪಕ್ಷ ಬಿಟ್ಟರೂ ನನ್ನ ಸ್ನೇಹಿತ' title=

ಬೆಂಗಳೂರು : ಸಿಎಂ ಇಬ್ರಾಹಿಂ ನನ್ನ ಸ್ನೇಹಿತ, ಅವನು ಪಕ್ಷ ಬಿಡಲ್ಲ ಅಂತ ನನಗೆ ವಿಶ್ವಾಸವಿದೆ. ಅವನು ಇಲ್ಲೇ ಇದ್ರೂ ನನ್ನ ಸ್ನೇಹಿತ, ಪಕ್ಷ ಬಿಟ್ಟರೂ ನನ್ನ ಸ್ನೇಹಿತ. ಅವನು ಪಕ್ಷ ಬಿಟ್ಟರೂ ನಾನು ಅವನ ಮನೆಗೆ ಹೋಗ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ(Siddaramaiah), ಸಿಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷ ತೊರೆಯುವ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ರಾಜಕೀಯ ಬೇರೆ, ವೈಯಕ್ತಿಕ ಬೇರೆ, ಅವನಿಗೆ ಕೋಪ ಕಡಿಮೆ ಆದ ಮೇಲೆ ಹೋಗಿ ಮಾತಾಡ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Bengaluru: ಅಂಗನವಾಡಿ ಕೇಂದ್ರಗಳಲ್ಲಿ ಶಿಶುಪಾಲನಾ ಕೇಂದ್ರ ಆರಂಭವನ್ನು ವಿರೋಧಿಸಿ ಪ್ರತಿಭಟನೆ

ಹಿಜಾಬ್ ವಿಚಾರ ಮತ್ತೆ ಪೆನ್ನಾರ್ ಕಾವೇರಿ ನದಿ ಜೋಡಣೆಗೆ ಸರ್ವ ಪಕ್ಷಗಳ ವಿರೋಧ ವ್ಯಕ್ತಪಡಿಸಿದ ಕುರಿತು ನಾಳೆ ಬೆಳಗ್ಗೆ ಸುದ್ದಿಗೋಷ್ಠಿ ಕರೆದಿದ್ದೇನೆ ಎಂದು ಹೇಳಿದ್ದಾರೆ. ನದಿ ಜೋಡಣೆಯಿಂದ ಆಗುವ ಸಮಸ್ಯೆಗಳ ಬಗ್ಗೆ  ಸಿದ್ದರಾಮಯ್ಯ ವಿವರಣೆ ನೀಡಲಿದ್ದಾರೆ.

ಪರಿಷತ್ ಸದಸ್ಯರಿಗೆ ಸಿದ್ದರಾಮಯ್ಯ ಪಾಠ : 

ವಿಧಾನಸಭೆಗೆ ಮತ್ತು ಪರಿಷತ್ ಗೆ ಯಾವುದೇ ಕಾರಣಕ್ಕೆ ಗೈರಾಗಬೇಡಿ. ತುರ್ತು ಕೆಲಸ ಮತ್ತು ಮನೆಯಲ್ಲಿ ಆರೋಗ್ಯ ಸರಿಯಿಲ್ಲ ಅಂದ್ರೆ ಓಕೆ. ಆದ್ರೆ ಸುಖಸುಮ್ಮನೆ ಗೈರಾಗಬೇಡಿ. ಇದರಿಂದ ನಮ್ಮ ಸ್ಥಾನಕ್ಕೆ ನ್ಯಾಯ ಒದಗಿಸಿದ ಹಾಗೆ ಆಗಲ್ಲ. ಯಾವುದೇ ಕಮಿಟಿ ಸದಸ್ಯರಾಗಿದ್ರೆ ಕೂಡ ಸಭೆಗೆ ಗೈರಾಗಬೇಡಿ. ಜನರಿಗೆ ಮೋಸ ಮಾಡಿದ ಹಾಗೆ ಆಗುತ್ತೆ ಎಂದು ಸಿದ್ದರಾಮಯ್ಯ(Siddaramaiah) ಅವರು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಉದಾಹರಣೆ ನೀಡಿದರು.

ಇದನ್ನೂ ಓದಿ : ಆಂಧ್ರದಲ್ಲಿ ಗಾಂಜಾ ಬೆಳೆದು, ಕರ್ನಾಟಕದಲ್ಲಿ ಮಾರಾಟ; ಇಬ್ಬರು ಆರೋಪಿಗಳ ಬಂಧನ

ವಾಟಾಳ್ ನಾಗರಾಜ್ ಅವರು ಐದು ನಿಮಿಷ ಕೂಡ ಸದನ ತಪ್ಪಿಸಕೊಳ್ಳುತ್ತಿರಲಿಲ್ಲ. ಇದಕ್ಕಿಂತ ಯಾವ ಕೆಲಸ ಇದೆ ಪಾ ನಿಮಗೆ. ಆಯ್ಕೆಯಾಗಿ ಬಂದಿರುವುದು ಸಭೆಯಲ್ಲಿ ಭಾಗಿಯಾಗಲು. ಕೆಲ ಸದಸ್ಯರು ಲಾಂಜ್ ನಲ್ಲಿ ಕುತಿರ್ತಾರೆ. ಯಾರು ತಪ್ಪು ತಿಳಿದುಕೊಳ್ಳಬೇಡಿ. ನಾನು ಒಂದೇ ಒಂದು ಅಧಿವೇಶನ ತಪ್ಪಿಸಿಲ್ಲ. ನಾನು ತಾಲೂಕಿನ ಸದಸ್ಯನಾಗಿದ್ದೆ.ಅವತ್ತು ಕೂಡ ಒಂದೇ ಒಂದು ದಿನ ಗೈರಾಗಿರಲಿಲ್ಲ. ಕಡ್ಡಾಯವಾಗಿ ಸದನದಲ್ಲಿ ಹಾಜರಾಗುವಂತೆ ಸದಸ್ಯರಿಗೆ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News