ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಪತ್ರ: ತನ್ನ ತಾಯಿಯ ನೋವಿನ ಕಥೆ ಬರೆದ ಪ್ರಧಾನಿ
4,345 ಫಲಾನುಭವಿಗಳಿಗೆ ವೈಯಕ್ತಿಕ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ, ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯಡಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. 4,345 ಫಲಾನುಭವಿಗಳಿಗೆ ವೈಯಕ್ತಿಕ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ, ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯಡಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.
ನವದೆಹಲಿ: ಕೋವಿಡ್ -19ಗೆ ತುತ್ತಾಗಿ ಪ್ರಾಣಕಳೆದುಕೊಂಡಿದ್ದು ಅದೆಷ್ಟೋ ಮಂದಿ. ಪ್ರಾಣ ಹೋದ ನೋವು ಒಂದೆಡೆಯಾದರೆ ತಮ್ಮವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದವರು ಅನೇಕರು. ಅದರಲ್ಲೂ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳನ್ನು ಕಂಡಾಗ ಮನಸ್ಸಿಗೆ ನೋವುಂಟಾಗುತ್ತದೆ. ಇದೀಗ ಅಂತಹ ಮಕ್ಕಳ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯಡಿ ಪ್ರಯೋಜನಗಳನ್ನು ನೀಡಲು ನಿರ್ಧರಿಸಿದೆ.
ಜೊತೆಗೆ 4,345 ಫಲಾನುಭವಿಗಳಿಗೆ ವೈಯಕ್ತಿಕ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ, ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯಡಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನು ಓದಿ: ಭಾರತದಲ್ಲಿ ಪ್ರವಾಸಿ ವೀಸಾ ಇಂಟರ್‌ವ್ಯೂ ಪುನಾರಂಭ: ಯುಎಸ್ ರಾಯಭಾರ ಕಛೇರಿ ಸ್ಪಷ್ಟನೆ
“ಒಂದು ಶತಮಾನದ ಹಿಂದೆ, ಇಡೀ ಜಗತ್ತು ಕೊರೊನಾದಂತಹ ಭಯಾನಕ ಸಾಂಕ್ರಾಮಿಕಕ್ಕೆ ತುತ್ತಾಗಿತ್ತು. ಆ ಸಂದರ್ಭದಲ್ಲಿ ನನ್ನ ತಾಯಿಯ ಅಮ್ಮ ಪ್ರಾಣ ಕಳೆದುಕೊಂಡರು. ಆಗ ನನ್ನಮ್ಮ ತುಂಬಾ ಚಿಕ್ಕವಳಾಗಿದ್ದಳು. ಅವಳಿಗೆ ತನ್ನ ತಾಯಿಯ ಮುಖವೂ ನೆನಪಿಲ್ಲ”ಎಂದು ಪ್ರಧಾನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. “ಅವಳು ತನ್ನ ಇಡೀ ಜೀವನವನ್ನು ತಾಯಿಯ ಅನುಪಸ್ಥಿತಿಯಲ್ಲಿ, ಅವಳ ವಾತ್ಸಲ್ಯವಿಲ್ಲದೆ ಕಳೆದಳು. ಅವಳು ಹೇಗೆ ಬೆಳೆದಿರಬೇಕೆಂದು ನೀವೇ ಊಹಿಸಿ! ಹೀಗಾಗಿ ಇಂದು ನಾನು ನಿಮ್ಮ ಮನಸ್ಸಿನಲ್ಲಿರುವ ವೇದನೆಯನ್ನು, ನಿಮ್ಮ ಹೃದಯದಲ್ಲಿನ ಸಂಘರ್ಷವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ" ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.
ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಅಡಿಯಲ್ಲಿ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಅವರು ಮಕ್ಕಳಿಗೆ ಸೂಚಿಸಿದ್ದಾರೆ. "ಈ ಯೋಜನೆಯು ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು.
ಈ ಬಗ್ಗೆ ತಿಳಿಸುವ ಮುನ್ನ ಪ್ರಧಾನಿ ಮೋದಿ ಅವರು ಶಾಲೆಗೆ ಹೋಗುವ ಮಕ್ಕಳಿಗೆ ವಿದ್ಯಾರ್ಥಿವೇತನ ಸೇರಿದಂತೆ ಅನೇಕ ಸಹಾಯ ಯೋಜನೆಗಳನ್ನು ಬಿಡುಗಡೆ ಮಾಡಿದರು. ಸರ್ಕಾರವು ಹೊಸ “ಸ್ಕಾಲರ್‌ಶಿಪ್ ಫಾರ್ ಪಿಎಂ ಕೇರ್ಸ್ ಚಿಲ್ಡ್ರನ್” ಮೂಲಕ ಪ್ರತಿ ಮಗುವಿಗೆ ವಾರ್ಷಿಕ 20,000 ರೂ. ಮಾಸಿಕ ಭತ್ಯೆ ಮತ್ತು 8,000 ರೂ.ಗಳ ಶೈಕ್ಷಣಿಕ ಭತ್ಯೆ, ಪುಸ್ತಕಗಳು, ಸಮವಸ್ತ್ರ, ಶೂ, ಇತರ ಶೈಕ್ಷಣಿಕ ಉಪಕರಣಗಳ ಒಳಗೊಂಡಂತೆ ಸಂಪೂರ್ಣ ಶಾಲಾ ಶುಲ್ಕವನ್ನು ಭರಿಸುವ ವಿದ್ಯಾರ್ಥಿವೇತನವನ್ನು ನೀಡಲಿದೆ" ಎಂದು ಪ್ರಧಾನಿ ತಿಳಿಸಿದ್ದಾರೆ.
ಸಾಮಾಜಿಕ ನ್ಯಾಯ ಸಚಿವಾಲಯದ ಹೇಳಿಕೆಯ ಪ್ರಕಾರ, 3,945 ಮಕ್ಕಳು 2022-23ನೇ ಸಾಲಿನಲ್ಲಿ 7.9 ಕೋಟಿ ರೂ ಮೊತ್ತದ ಪ್ರಯೋಜನವನ್ನು ಪಡೆದಿದ್ದಾರೆ. ಇನ್ನು ಈ ಕಾರ್ಯಕ್ರಮದ ವೇಳೆ ಮಕ್ಕಳಿಗೆ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಪಾಸ್ ಬುಕ್ ಮತ್ತು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಆರೋಗ್ಯ ಕಾರ್ಡ್ ವಿತರಿಸಲಾಯಿತು.
ಮಕ್ಕಳ ಮತ್ತು ಅಭಿವೃದ್ಧಿ ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ 4,345 ಮಕ್ಕಳನ್ನು ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗೆ ಅರ್ಹರನ್ನಾಗಿ ಅನುಮೋದಿಸಲಾಗಿದೆ. ಅದು ಅವರ ಶಿಕ್ಷಣ, ಆರೋಗ್ಯ, ಯೋಗಕ್ಷೇಮಕ್ಕೆ ಸಹಾಯ ಮಾಡಲಿದೆ. ಜೊತೆಗೆ ಅವರಿಗೆ 23 ವರ್ಷ ತುಂಬಿದಾಗ ರೂ. 10 ಲಕ್ಷ ಧನಸಹಾಯ ಲಭಿಸಲಿದೆ.
ಇದನ್ನು ಓದಿ: Visa on Arrival: ಅನಿವಾಸಿ ಭಾರತೀಯರೇ ಗಮನಿಸಿ: ಆಗಮನ ವೀಸಾ ಬಯಸುವವರು ಈ ನಿಯಮ ಪಾಲಿಸಲೇಬೇಕು!
“ನಾವು ನಮ್ಮ ವಿಜ್ಞಾನಿಗಳು, ವೈದ್ಯರು ಮತ್ತು ಯುವ ಜನತೆಯ ಮೇಲೆ ನಂಬಿಕೆ ಇಟ್ಟಿದ್ದೇವೆ. ನಾವು ಭರವಸೆಯ ಕಿರಣವಾಗಿ ಹೊರಹೊಮ್ಮಿದ್ದೇವೆ. ನಾವು ಸಮಸ್ಯೆಯಾಗಲಿಲ್ಲ, ಬದಲಿಗೆ ನಾವು ಪರಿಹಾರಗಳನ್ನು ಒದಗಿಸಿದ್ದೇವೆ" ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ